ಮುಂಬೈ: ಸತತ ಮೂರನೇ ದಿನವೂ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ಇಂದು ವಹಿವಾಟಿನಲ್ಲಿ ಏರಿಕೆ ಕಂಡಿವೆ. ನಿಫ್ಟಿ ಮೊದಲ ಬಾರಿಗೆ ನಿರ್ಣಾಯಕ 16,200 ಅಂಕವನ್ನು ಮೀರಿದರೆ, ಸೆನ್ಸೆಕ್ಸ್ 400 ಅಂಕಗಳ ಜಿಗಿತದೊಂದಿಗೆ 54,000 ಅಂಕಗಳ ಗರಿಷ್ಠ ಮಟ್ಟಕೆ ತಲುಪಿದೆ. ಇದರಲ್ಲಿ ಮುಖ್ಯವಾಗಿ ಇನ್ಫೋಸಿಸ್, ಹೆಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕ್ ವಿಶ್ವ ಮಾರುಕಟ್ಟೆಯಲ್ಲಿ ಪಾಸಿಟಿವ್ ಏರಿಕೆ ಕಂಡಿವೆ.
ಆರಂಭದಲ್ಲೇ ಸೆನ್ಸೆಕ್ಸ್ 415.33 ಅಂಕಗಳ ಜಿಗಿತದೊಂದಿಗೆ 54,238.69ರ ಗರಿಷ್ಠ ಮಟ್ಟಕೆ ತಲುಪಿದರೆ, ನಿಫ್ಟಿ 16,246ರ ಗಡಿ ದಾಟಿದೆ. ಪ್ರಸ್ತುತ 116.10 ಅಂಕಗಳ ಏರಿಕೆಯೊಂದಿಗೆ 16,246ರಲ್ಲಿ ನಿಫ್ಟಿ ವಹಿವಾಟು ನಡೆಸುತ್ತಿದೆ.
ಟಾಟಾ ಸ್ಟೀಲ್ 4 ಪ್ರತಿಶತದಷ್ಟು ಜಿಗಿತವನ್ನು ಹೊಂದಿದ್ದು, ಹೆಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಡಾ.ರೆಡ್ಡೀಸ್, ಇನ್ಫೋಸಿಸ್, ರಿಲಾಯನ್ ಇಂಡಸ್ಟ್ರೀಸ್ ನಂತರದ ಸ್ಥಾನದಲ್ಲಿವೆ. ಇನ್ನೊಂದೆಡೆ ಭಾರ್ತಿ ಏರ್ಟೆಲ್, ನೆಸ್ಟ್ಲೆ ಇಂಡಿಯಾ, ಹೆಚ್ಯುಎಲ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ನಿಧಾನಗತಿಯ ಆರಂಭ ಪಡೆದಿದ್ದವು.
ಇದಕ್ಕೂ ಮೊದಲು ನಿನ್ನೆಯ ಷೇರುಮಾರುಕಟ್ಟೆಯು ದಾಖಲೆಯ ಏರಿಕೆ ಕಂಡು ಗರಿಷ್ಠ ರೂ. 2,38,95,478.59 ಕೋಟಿಗೆ ಜಿಗಿದಿದೆ. ಅಂತೆಯೇ, ಶುಕ್ರವಾರದ ಅಂತ್ಯದ ನಂತರ ಹೂಡಿಕೆದಾರರ ಸಂಪತ್ತು 3,45,729.69 ಕೋಟಿ ರೂ.ಗೆ ಹೆಚ್ಚಳವಾಗಿತ್ತು.
ಓದಿ: ದೇಶಿಯ ಷೇರುಗಳಲ್ಲಿ ಆಶಾದಾಯಕ ಬೆಳವಣಿಗೆ: ಸೆನ್ಸೆಕ್ಸ್ 446 ಪಾಯಿಂಟ್ ಜಿಗಿತ