ನವದೆಹಲಿ: ತಾಂತ್ರಿಕ ನವೀಕರಣ ಮೇಲ್ದರ್ಜೆಗೆ ಏರಿಸುವ ಕಾರಣ ಆರ್‌ಟಿಜಿಎಸ್ (ರಿಯಲ್ ಟೈಮ್ ಗ್ರಾಸ್ ಸೆಟ್ಲ್ಮೆಂಟ್) ಹಣ ವರ್ಗಾವಣೆ ಸೇವೆ ಭಾನುವಾರ (ಏಪ್ರಿಲ್ 18) 14 ಗಂಟೆಗಳ ಕಾಲ ಸ್ಥಗಿತವಾಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ.
ಆರ್‌ಟಿಜಿಎಸ್‌ನ ತಾಂತ್ರಿಕ ನವೀಕರಣವು ಬಳಕೆಯ ಸ್ಥಿರತೆ ಹೆಚ್ಚಿಸಲು ಮತ್ತು ಆರ್‌ಟಿಜಿಎಸ್ ವ್ಯವಸ್ಥೆಯ ವಿಪತ್ತು ಮರುಪಡೆಯುವಿಕೆ ಸಮಯ ಇನ್ನಷ್ಟು ಸುಧಾರಿಸುವ ಗುರಿ ಹೊಂದಿದೆ. 2021ರ ಏಪ್ರಿಲ್ 17ರ ವ್ಯವಹಾರದ ಮುಕ್ತಾಯದ ನಂತರ ನಿಗದಿಪಡಿಸಲಾಗಿದೆ ಎಂದು ಕೇಂದ್ರ ಬ್ಯಾಂಕ್ ಅಧಿಸೂಚನೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಕೊರೊನಾ 2ನೇ ಅಲೆಗೆ ಬೆದರಿದ ಗೂಳಿ: ಆರಂಭದ ವಹಿವಾಟಿನಲ್ಲೇ 200 ಅಂಕ ಕುಸಿತ
2021ರ ಏಪ್ರಿಲ್ 18ರ ಭಾನುವಾರದಂದು ಆರ್‌ಟಿಜಿಎಸ್ ಸೇವೆ ಮಧ್ಯರಾತ್ರಿ 12 ಗಂಟೆಯಿಂದ (ಗಂಟೆ) ಮುಂದಿನ 14.00 ಗಂಟೆಯವರೆಗೆ ಲಭ್ಯವಿರುವುದಿಲ್ಲ. ಈ ಅವಧಿಯಲ್ಲಿ ನೆಫ್ಟ್ (ರಾಷ್ಟ್ರೀಯ ಎಲೆಕ್ಟ್ರಾನಿಕ್ ನಿಧಿ ವರ್ಗಾವಣೆ) ವ್ಯವಸ್ಥೆಯು ಎಂದಿನಂತೆ ಕಾರ್ಯನಿರ್ವಹಿಸುತ್ತದೆ ಎಂದಿದೆ.