ETV Bharat / business

ತೆರಿಗೆದಾರರ ವಿವಾದಗಳನ್ನು ವಿಶ್ವಾಸದಿಂದ ಗೆದ್ದು 72,480 ಕೋಟಿ ರೂ. ಜೇಬಿಗಿಳಿಸಿಕೊಂಡ ಕೇಂದ್ರ! - ತೆರಿಗೆ ವ್ಯಾಜ್ಯ ಇತ್ಯರ್ಥ ಯೋಜನೆ

'ವಿವಾದ್​ ಸೆ ವಿಶ್ವಾಸ್' ನೇರ ತೆರಿಗೆ ವಿವಾದ ಇತ್ಯರ್ಥ ಯೋಜನೆಯ ವಿವಾದಾತ್ಮಕ ಬೇಡಿಕೆಯ ವಿರುದ್ಧ ಸಿಪಿಎಸ್‌ಯು ಮತ್ತು ತೆರಿಗೆದಾರರಿಂದ ಇದುವರೆಗೆ 72,480 ಕೋಟಿ ರೂ. ಹರಿದು ಬಂದಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.

Vivad se Vishwas
ವಿವಾದ್​ ಸೆ ವಿಶ್ವಸ್
author img

By

Published : Nov 19, 2020, 5:38 PM IST

ನವದೆಹಲಿ: ನೇರ ತೆರಿಗೆ ವಿವಾದದ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಉದ್ದೇಶದಿಂದ ಜಾರಿಗೆ ತರಲಾದ 'ವಿವಾದ್ ಸೆ ವಿಶ್ವಾಸ್​ ಮಸೂದೆ-2020'ರಿಂದಾಗಿ ಕೇಂದ್ರದ ಖಜಾನೆಗೆ ಸಾವಿರಾರು ಕೋಟಿ ರೂಪಾಯಿ ಠೇವಣಿ ಜಮೆಯಾಗಿದೆ.

'ವಿವಾದ್​ ಸೆ ವಿಶ್ವಾಸ್​' ನೇರ ತೆರಿಗೆ ವಿವಾದ ಇತ್ಯರ್ಥ ಯೋಜನೆಯ ವಿವಾದಾತ್ಮಕ ಬೇಡಿಕೆಯ ವಿರುದ್ಧ ಸಿಪಿಎಸ್‌ಯು ಮತ್ತು ತೆರಿಗೆದಾರರಿಂದ ಇದುವರೆಗೆ 72,480 ಕೋಟಿ ರೂ. ಹರಿದು ಬಂದಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.

ಆದಾಯ ತೆರಿಗೆ ಇಲಾಖೆಯು ಈ ಯೋಜನೆಯಲ್ಲಿ ಈವರೆಗೆ ಮಾಡಿರುವ ಪ್ರಗತಿ ಕುರಿತು ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಲಾಯಿತು. ನವೆಂಬರ್ 17ರವರೆಗೆ ಒಟ್ಟು 45,855 ಘೋಷಣೆಗಳನ್ನು ಫಾರ್ಮ್ 1ರಲ್ಲಿ ಸಲ್ಲಿಸಲಾಗಿದೆ. ಈ ಘೋಷಣೆಗಳಿಂದ ವಿವಾದಿತ ಬೇಡಿಕೆಯು 31,734 ಕೋಟಿ ರೂ.ಯಷ್ಟಿದೆ.

ಈ ಯೋಜನೆಯಡಿ ಇತ್ಯರ್ಥಪಡಿಸಲಾಗುತ್ತಿರುವ ಸಿಪಿಎಸ್‌ಯುಗಳ ಒಟ್ಟು ವಿವಾದಿತ ಮೊತ್ತ 1,00,195 ಕೋಟಿ ರೂ.ಷ್ಟಿದೆ.

ಘೋಷಣೆ ಸಲ್ಲಿಸಿದ ತೆರಿಗೆದಾರರಿಗೆ ಫಾರ್ಮ್ 3ರ ವಿತರಣೆಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಈ ಮೂಲಕ ಬಾಕಿ ಇರುವ ಯಾವುದೇ ತಿದ್ದುಪಡಿಗಳನ್ನು ಪೂರ್ಣಗೊಳಿಸಿ / ಬೇಡಿಕೆಯನ್ನು ಅಂತಿಮಗೊಳಿಸುತ್ತಿದ್ದೇವೆ. ಮೇಲ್ಮನವಿಯ ಅನುಷ್ಠಾನಕ್ಕೆ ಪೂರ್ವಭಾವಿ ವಿಧಾನ ಅಳವಡಿಸಿಕೊಳ್ಳಲು ಐಟಿ ಇಲಾಖೆ ನಿರ್ಧರಿಸಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.