ನವದೆಹಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರಿ ಅಧಿನ ಸಂಸ್ಥೆಗಳು, ಪ್ರಮುಖ ಕೈಗಾರಿಕೆಗಳು ಹಾಗೂ ಎಂಎಸ್‌ಎಂಇಗಳಿಗೆ ನೀಡಬೇಕಿರುವ ಬಾಕಿ ಪಾವತಿಯನ್ನು ಮರುಪಾವತಿಸಲು ಸರ್ಕಾರ 1 ಲಕ್ಷ ಕೋಟಿ ರೂ. ನಿಧಿಸ್ಥಾಪಿಸಲು ಯೋಜನೆ ರೂಪಿಸುತ್ತಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದರು.
ನಾವು 1 ಲಕ್ಷ ಕೋಟಿ ರೂ. ನಿಧಿ ಸ್ಥಾಪಿಸಲು ನಿರ್ಧರಿಸಿದ್ದೇವೆ. ಈ ನಿಧಿಯನ್ನು ಸರ್ಕಾರ ಪ್ರೀಮಿಯಂ ಪಾವತಿಯ ವಿಮೆಯಾಗಿ ಮಾಡುತ್ತದೆ. ಪಾವತಿ ಮತ್ತು ಸ್ವೀಕರಿಸುವ ಘಟಕದ ನಡುವಿನ ಬಡ್ಡಿ ಹೊರೆ ಹಂಚಿಕೊಳ್ಳಲು ಸೂತ್ರಯೊಂದನ್ನು ತರುತ್ತೇವೆ. ಈ ನಿಧಿಯ ಬ್ಯಾಂಕ್, ಪಿಎಸ್ಯು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಪ್ರಮುಖ ಕೈಗಾರಿಕೆಗಳೊಂದಿಗೆ ಸಿಲುಕಿರುವ ಎಂಎಸ್‌ಎಂಇಗಳ ಪಾವತಿಗಾಗಿ ಇರಲಿದೆ ಎಂದರು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ವಲಯಕ್ಕೆ ಈ ನಿಧಿಯು ಒಂದು ನಿರ್ದಿಷ್ಟ ಮಟ್ಟಿಗೆ ಪರಿಹಾರ ನೀಡಲಿದೆ. ಮಾರುಕಟ್ಟೆಯಲ್ಲಿ ದ್ರವ್ಯತೆ ಹೆಚ್ಚಿಸಲು ಇದು ಸಹಾಯ ಮಾಡುತ್ತದೆ ಎಂದು ಎಂಎಸ್‌ಎಂಇ ಮತ್ತು ರಸ್ತೆ ಸಾರಿಗೆ ಸಚಿವ ಹೇಳಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಅಸ್ಸೋಚಾಂ ಪ್ರತಿನಿಧಿಗಳೊಂದಿಗೆ ಸಂವಹನ ನಡೆಸಿದ ಸಚಿವರು, ಭಾರತೀಯ ಕೈಗಾರಿಕೆ ಮತ್ತು ಪ್ರಮುಖ ಜಾಗತಿಕ ಸಂಸ್ಥೆಗಳ ನಡುವಿನ ಬಂಡವಾಳ ಹೂಡಿಕೆಯ ಮೂಲಕ ತಾಂತ್ರಿಕ ಜಂಟಿ ಉದ್ಯಮ ಅನ್ವೇಷಿಸಲು ಕೈಗಾರಿಕಾ ಒಕ್ಕೂಟಕ್ಕೆ ಕೋರಿದರು.