ETV Bharat / business

ಭಾರತೀಯ ಆಟಿಕೆ ಉದ್ಯಮ ಉತ್ತೇಜನಕ್ಕಾಗಿ ಸಭೆ

ಆಟಿಕೆಗಳ ಉತ್ತೇಜನಕ್ಕಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ ಟಾಯ್ಸ್​​ನನ್ನು ಕಲಿಕೆಯ ಸಂಪನ್ಮೂಲವಾಗಿ ಬಳಸಲು, ಭಾರತೀಯ ಸಂಪ್ರದಾಯ, ಮೌಲ್ಯಗಳ ಆಧಾರದ ಮೇಲೆ ವಿನ್ಯಾಸಗೊಳಿಸಲು ಮತ್ತು ಆಟಿಕೆ ವಿನ್ಯಾಸಕ್ಕಾಗಿ ಹ್ಯಾಕಥಾನ್​​​ಗಳನ್ನು ಬಳಸಲು ಮುಂದಾಗಿದೆ. ಈ ಸಂಬಂಧ ಇಂದು ಮಾತುಕತೆ ಕೂಡ ನಡೆದಿದೆ. ಅಲ್ಲದೇ 2021 ಫೆಬ್ರವರಿ 27 ರಿಂದ ಮಾರ್ಚ್ 2 ರವರೆಗೆ ವರ್ಚುಯಲ್ ಪ್ಲಾಟ್‌ಫಾರ್ಮ್‌ನಲ್ಲಿ 'ನ್ಯಾಷನಲ್ ಟಾಯ್ ಫೇರ್' ಆಯೋಜಿಸಲು ನಿರ್ಧರಿಸಲಾಗಿದೆ.

author img

By

Published : Dec 4, 2020, 4:08 PM IST

ಭಾರತೀಯ ಆಟಿಕೆ ಉದ್ಯಮ ಉತ್ತೇಜನಕ್ಕಾಗಿ ಸಭೆ
ಭಾರತೀಯ ಆಟಿಕೆ ಉದ್ಯಮ ಉತ್ತೇಜನಕ್ಕಾಗಿ ಸಭೆ

ಹೈದರಾಬಾದ್: ಭಾರತೀಯ ಆಟಿಕೆ ಉದ್ಯಮ ಉತ್ತೇಜಿಸುವ ಸಲುವಾಗಿ ಮಾತುಕತೆ ನಡೆಯುತ್ತಿದ್ದು, ಈ ಹಿನ್ನೆಲೆ ರಾಷ್ಟ್ರೀಯ ಕ್ರಿಯಾ ಯೋಜನೆ ಅಡಿ ಡಿಪಿಐಐಟಿಯ ಕಾರ್ಯದರ್ಶಿ ಡಾ. ಗುರುಪ್ರಸಾದ್ ಮೋಹಪಾತ್ರ ಅವರ ಅಧ್ಯಕ್ಷತೆಯಲ್ಲಿ ಡಿಪಿಐಐಟಿ ವರ್ಚುಯಲ್ ಸಮ್ಮೇಳನ ಆಯೋಜಿಸಿದೆ.

ಭಾರತೀಯ ಆಟಿಕೆ ಉದ್ಯಮ
ಭಾರತೀಯ ಆಟಿಕೆ ಉದ್ಯಮ

ಈ ಸಭೆಯಲ್ಲಿ ಎಂಎಸ್​​ಎಂಇ ಕಾರ್ಯದರ್ಶಿ ಎ.ಕೆ. ಶರ್ಮಾ, ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಭಾಗವಹಿಸಿದ್ದವು. ರಾಷ್ಟ್ರೀಯ ಕ್ರಿಯಾ ಯೋಜನೆಯೂ ಅಡಿಕೆಗಳನ್ನು ಕಲಿಕೆಯ ಸಾಧನವಾಗಿ ಬಳಸಬೇಕು. ಅಲ್ಲದೇ ಇವುಗಳನ್ನು ಭಾರತೀಯ ಸಂಪ್ರದಾಯ ಮತ್ತು ಮೌಲ್ಯಗಳ ಆಧಾರದ ಮೇಲೆ ವಿನ್ಯಾಸಗೊಳಿಸಬೇಕು ಎಂಬ ಉದ್ದೇಶವನ್ನು ಹೊಂದಿದೆ.

  • National Action Plan for Toys comprehensively deals with using Toys as a learning resource; designing based on Indian traditions and values;organizing Hackathons/grand challenges for toy designing.
    A detailed presentation was given by DPIIT on this. pic.twitter.com/aITx6kbWo1

    — DPIIT India (@DIPPGOI) December 1, 2020 " class="align-text-top noRightClick twitterSection" data=" ">

ಆಟಿಕೆ ವಿನ್ಯಾಸಕ್ಕಾಗಿ ಹ್ಯಾಕಥಾನ್‌, 'ಏಕ್ ಭಾರತ್ ಶ್ರೇಷ್ಠ ಭಾರತ್' ಮತ್ತು 'ಮೇಡ್ ಇನ್ ಇಂಡಿಯಾ'ವನ್ನು ಉತ್ತೇಜಿಸುವ ಯೋಜನೆಯನ್ನು ಹಾಕಿಕೊಂಡಿದೆ. ಅಲ್ಲದೇ ರಾಷ್ಟ್ರೀಯ ಆಟಿಕೆ ಮೇಳವನ್ನು ಆಯೋಜಿಸುವುದು, ಟಾಯ್ ರೆಪೊಸಿಟರಿಗಳನ್ನು ರಚಿಸುವುದು, ಟಾಯ್ ಪ್ರವಾಸೋದ್ಯಮ, ದೇಶೀಯ ಉತ್ಪಾದನೆ, ಹೂಡಿಕೆಗಳು ಮತ್ತು ಭಾರತೀಯ ಆಟಿಕೆಗಳ ರಫ್ತು, ಟಾಯ್ ಇಂಡಸ್ಟ್ರಿಗಾಗಿ ಕೌಶಲ್ಯಗಳ ಅಭಿವೃದ್ಧಿ, ಆಟಿಕೆಗಳ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡುವ ಉದ್ದೇಶವನ್ನು ರಾಷ್ಟ್ರೀಯ ಕ್ರಿಯಾ ಯೋಜನೆ ಹೊಂದಿದೆ.

  • Mrs.Alka Arora, Joint Secretary, MSME, highlighted the role of existing 18 Technology Centres readily available for assisting Toy Industry for tooling & technology support. Specific courses suiting to the need of Industry can be developed. pic.twitter.com/E718FfEXTY

    — DPIIT India (@DIPPGOI) December 2, 2020 " class="align-text-top noRightClick twitterSection" data=" ">

ಮಕ್ಕಳಿಗೆ ಸುರಕ್ಷಿತ ಆಟಿಕೆಗಳು ಸಿಗುವಂತೆ ಮಾಡುವುದು, ಇದನ್ನು ಕಲಿಕೆಯ ಸಂಪನ್ಮೂಲವಾಗಿ ಬಳಸುವುದು, ಭಾರತೀಯ ಮೌಲ್ಯ, ಸಂಸ್ಕೃತಿ, ಇತಿಹಾಸ ಮತ್ತು ದೇಶೀಯ ಉತ್ಪಾದನೆಯನ್ನು ಬಲಪಡಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಡಿಪಿಐಐಟಿಯ ಕಾರ್ಯದರ್ಶಿ ಹೇಳಿದ್ದಾರೆ. 'ನ್ಯಾಷನಲ್ ಟಾಯ್ ಫೇರ್' ನನ್ನು ಫೆಬ್ರವರಿ 27 ರಿಂದ ಮಾರ್ಚ್ 2 ರವರೆಗೆ ವರ್ಚುಯಲ್ ಪ್ಲಾಟ್‌ಫಾರ್ಮ್‌ನಲ್ಲಿ ಆಯೋಜಿಸಲಾಗುತ್ತಿದೆ.

ಇದನ್ನು ಓದಿ:ಭಾರತದ ಆರ್ಥಿಕತೆ ನಿರೀಕ್ಷೆಗಿಂತ ವೇಗವಾಗಿ ಚೇತರಿಸಿಕೊಳ್ಳುತ್ತಿದೆ : ಆರ್‌ಬಿಐ ಗವರ್ನರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.