ETV Bharat / business

ಭಾರತೀಯ ಸ್ಟೇಟ್​ ಬ್ಯಾಂಕ್​ಗೆ 1 ಕೋಟಿ ರೂ. ದಂಡ ವಿಧಿಸಿದ ಆರ್​​ಬಿಐ.. ಕಾರಣ?

author img

By

Published : Oct 18, 2021, 9:33 PM IST

Updated : Oct 18, 2021, 10:58 PM IST

ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949ರ ಕೆಲವೊಂದು ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾಗೆ ಇದೀಗ 1 ಕೋಟಿ ರೂ. ದಂಡ ವಿಧಿಸಲಾಗಿದೆ.

Reserve Bank of India imposes monetary penalty on State Bank of India
ಭಾರತೀಯ ಸ್ಟೇಟ್​ ಬ್ಯಾಂಕ್​ಗೆ 1 ಕೋಟಿ ರೂ. ದಂಡ ವಿಧಿಸಿದ ಆರ್​​ಬಿಐ.. ಕಾರಣ?

ಮುಂಬೈ: ಕೇಂದ್ರೀಯ ಬ್ಯಾಂಕ್​ ನೀಡಿರುವ ನಿರ್ದೇಶನ ಪಾಲಿಸದ ಕಾರಣ ದೇಶದ ಅತಿದೊಡ್ಡ ಬ್ಯಾಂಕ್​ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ(SBI)ಗೆ ಭಾರತೀಯ ರಿಸರ್ವ್​ ಬ್ಯಾಂಕ್​​(RBI) 1 ಕೋಟಿ ರೂಪಾಯಿ ದಂಡ ವಿಧಿಸಿದೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಆರ್​ಬಿಐಗೆ ನೀಡದಿರುವುದು ಮತ್ತು ಕೇಂದ್ರ ಬ್ಯಾಂಕ್​ನ ನಿಯಮಗಳನ್ನು ಪಾಲಿಸದೇ ಇರುವ ಕಾರಣಕ್ಕಾಗಿ ಈ ದಂಡ ಹಾಕಲಾಗಿದೆ.

ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949ರ ಸೆಕ್ಷನ್ 46 (4) (i) ಮತ್ತು 51 (1) ರೊಂದಿಗೆ ಕಲಂ 47 ಎ (1) (ಸಿ) ನ ನಿಯಮಗಳ ಅಡಿ ಆರ್‌ಬಿಐಗೆ ನೀಡಲಾದ ಅಧಿಕಾರದ ಅಡಿ ಈ ದಂಡ ಹಾಕಲಾಗಿದೆ.

ಎಸ್​​ಬಿಐನಲ್ಲಿ ನಿರ್ವಹಿಸಲಾದ ಗ್ರಾಹಕರ ಖಾತೆ ಪರಿಶೀಲಿಸಿದ ನಂತರ, ಕೇಂದ್ರೀಯ ಬ್ಯಾಂಕ್​​ ಖಾತೆಯಲ್ಲಿನ ವಂಚನೆಯ ವರದಿ ವಿಳಂಬ ಮಾಡಿರುವುದು ಪತ್ತೆಯಾಗಿದೆ. ಈ ವೇಳೆ, ಬ್ಯಾಂಕ್​ ತನ್ನ ಗ್ರಾಹಕರೊಂದಿಗೆ ಮಾಡಿಕೊಂಡ ಯಾವುದೇ ವಹಿವಾಟು ಅಥವಾ ಒಪ್ಪಂದದ ಸಿಂಧುತ್ವ ಉಚ್ಚರಿಸಲು ಉದ್ದೇಶಿಸಿಲ್ಲ ಎಂದು ಹೇಳಿಕೊಂಡಿದೆ.

ಇದನ್ನೂ ಓದಿರಿ: ಮಹಾನಗರಗಳಲ್ಲಿ ಗಗನಕ್ಕೇರಿದ ಟೊಮೇಟೊ ಬೆಲೆ: ಕೆಜಿಗೆ 93 ರೂ.

ಏನಿದು ಪ್ರಕರಣ?

ಎಸ್​ಬಿಐ ಬ್ಯಾಂಕ್​ ನಿರ್ವಹಿಸಿರುವ ಗ್ರಾಹಕರ ಖಾತೆಯಲ್ಲಿ ಆರ್​ಬಿಐ ಪರಿಶೀಲನೆ ನಡೆಸಿತ್ತು. ಈ ವೇಳೆ, ಖಾತೆಯಲ್ಲಿ ಕೆಲವೊಂದು ವಂಚನೆ ಕಂಡು ಬಂದಿದ್ದವು. ಹೀಗಾಗಿ ಬ್ಯಾಂಕ್​ಗೆ ನೋಟಿಸ್​ ಸಹ ನೀಡಲಾಗಿತ್ತು. ಇದಕ್ಕೆ ಎಸ್​​ಬಿಐ ಮೌಖಿಕವಾಗಿ ಉತ್ತರ ನೀಡಿತ್ತು. ಆದರೆ, ಆರ್​​ಬಿಐ ನಿರ್ದೇಶನ ಪಾಲನೆ ಮಾಡದಿರುವುದು ದೃಢಪಟ್ಟಿರುವ ಕಾರಣ ದಂಡ ವಿಧಿಸಲಾಗಿದೆ ಎಂದು ಕೇಂದ್ರ ಬ್ಯಾಂಕ್​ ಮೂಲಗಳು ಹೇಳಿವೆ.

Last Updated : Oct 18, 2021, 10:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.