ಮುಂಬೈ: ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಡಿಜಿಟಲ್ ತನ್ನ ಅತಿದೊಡ್ಡ ಎಲೆಕ್ಟ್ರಾನಿಕ್ ಮಾರಾಟವಾದ ಡಿಜಿಟಲ್ ಇಂಡಿಯಾ ಸೇಲ್ ಅನ್ನು ಜುಲೈ 26ರಂದು ದೇಶಾದ್ಯಂತ ಪ್ರಾರಂಭಿಸುವುದಾಗಿ ಪ್ರಕಟಿಸಿದೆ. ಕಂಪನಿಯ ಪ್ರಕಾರ, ಈ ವಿಶೇಷ ಮಾರಾಟದ ಅವಧಿಯಲ್ಲಿ ಟೆಲಿವಿಷನ್‌ಗಳು, ಗೃಹೋಪಯೋಗಿ ವಸ್ತುಗಳು, ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಪರಿಕರಗಳಂತಹ ವಿವಿಧ ವಿಭಾಗಗಳಲ್ಲಿ ಗ್ರಾಹಕರು ವಿಶೇಷ ಕೊಡುಗೆಗಳಿಗೆ ಅರ್ಹರಾಗಿದ್ದಾರೆ.
ಇದಲ್ಲದೆ, ಗ್ರಾಹಕರು ಎಸ್‌ಬಿಐ ಕ್ರೆಡಿಟ್ ಕಾರ್ಡ್ ವಹಿವಾಟಿನಲ್ಲಿ 5,000 ರೂ.ವರೆಗೆ ಉಳಿತಾಯ ಮಾಡಬಹುದಾಗಿದ್ದು, ಜುಲೈ 22ರಿಂದ ಆಗಸ್ಟ್ 5, 2021ರವರೆಗೆ ಕನಿಷ್ಠ 10,000 ರೂ ವಹಿವಾಟಿನಲ್ಲಿ ಶೇ 10ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ರಿಲಯನ್ಸ್ ಡಿಜಿಟಲ್ ಇಂಡಿಯಾ ಸೇಲ್ ಅಮೆಜಾನ್ ಪ್ರೈಮ್ ಡೇ ಸೇಲ್ (ಜುಲೈ 26 ಮತ್ತು 27) ಮತ್ತು ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ (ಜುಲೈ 25-29)ನೊಂದಿಗೆ ನಡೆಯಲಿದೆ.
ರಿಲಯನ್ಸ್ ಡಿಜಿಟಲ್ ಇಂಡಿಯಾ ಸೇಲ್ - ವಿಶೇಷ ಕೊಡುಗೆಗಳು:
ಸ್ಮಾರ್ಟ್‌ಫೋನ್ ವಿಭಾಗದಲ್ಲಿ, ಒನ್ಪ್ಲಸ್ ನಾರ್ಡ್ 2 ಸ್ಮಾರ್ಟ್‌ಫೋನ್ ಜುಲೈ 28ರಂದು ಬಿಡುಗಡೆಯಾದ ನಂತರ ಮಾರಾಟಕ್ಕೆ ಲಭ್ಯವಿರುತ್ತದೆ. ಜುಲೈ 31ರವರೆಗೆ ಆಯ್ದ ಫೋನ್‌ಗಳ ಖರೀದಿಯಲ್ಲಿ ಆಕಸ್ಮಿಕ ಹಾನಿ ಮತ್ತು ದ್ರವ ಹಾನಿ ಕವರೇಜ್‌ಗಳು ಲಭ್ಯವಿದೆ. ಧರಿಸಬಹುದಾದ ವಿಭಾಗದಲ್ಲಿ, ಆಪಲ್ ವಾಚ್ ಸರಣಿ 6 ಸೆಲ್ಯುಲಾರ್ 44 ಎಂಎಂ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಆಕ್ಟಿವ್ 2 ರಿಯಾಯಿತಿಯಲ್ಲಿ ಲಭ್ಯ ಇರುತ್ತದೆ.
ಲ್ಯಾಪ್‌ಟಾಪ್ ವಿಭಾಗದಲ್ಲಿ ಗ್ರಾಹಕರು ರೂ. 14,990 ರೂ.ವರೆಗೆ ಪ್ರಯೋಜನ ಪಡೆಯಬಹುದಾಗಿದೆ. ಬ್ಯಾಂಕ್ ಕ್ಯಾಶ್‌ಬ್ಯಾಕ್ ಮತ್ತು ಬ್ರಾಂಡ್ ಖಾತರಿ ಕೊಡುಗೆಗಳ ಜೊತೆಗೆ ಇದು ಇರಲಿದೆ.
16 ಜಿಬಿ ರ‍್ಯಾಮ್ ಮತ್ತು 4 ಜಿಬಿ ಎನ್ಡಿಯಾ ಜೀಫೋರ್ಸ್ ಜಿಟಿಎಕ್ಸ್ 1650 ಗ್ರಾಫಿಕ್ಸ್ ಹೊಂದಿರುವ ಆಸಸ್ 10ನೇ ಜನರೇಷನ್ ಐ 5 ಗೇಮಿಂಗ್ ಲ್ಯಾಪ್‌ಟಾಪ್ 64,999 ರೂ,ಗಳಲ್ಲಿ ಲಭ್ಯವಿದೆ. ಅಲ್ಲದೆ, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ 7000 ರೂ.ಗಳ ವಿಶೇಷ ಎಚ್‌ಡಿಎಫ್‌ಸಿ ಕ್ಯಾಶ್‌ಬ್ಯಾಕ್‌ನೊಂದಿಗೆ 1,12,990 ರೂ.ಗಳ ಫ್ಲಾಟ್ ಬೆಲೆಯಲ್ಲಿ ಮ್ಯಾಕ್‌ಬುಕ್ ಪ್ರೊ ಲಭ್ಯವಾಗಲಿದೆ.