ಮುಂಬೈ: ವ್ಯವಸ್ಥೆಯಲ್ಲಿ 13 ಲಕ್ಷ ಕೋಟಿ ರೂಪಾಯಿಗಳಷ್ಟು ದ್ರವ್ಯತೆ ಇದೆ. ಸಾಂಕ್ರಾಮಿಕ ಸಮಯದಲ್ಲಿ ಕೈಗೊಂಡ ಅಸಾಧಾರಣ ಕ್ರಮಗಳನ್ನು ಆರ್ಥಿಕ ಸ್ಥಿರತೆಯನ್ನು ಕಾಪಾಡಲು ಸ್ಥೂಲ ಆರ್ಥಿಕ ಬೆಳವಣಿಗೆಗಳೊಂದಿಗೆ ಸಮನ್ವಯಗೊಳಿಸಲಾಗುವುದು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯ ನಿರ್ಧಾರಗಳನ್ನು ಘೋಷಿಸಿ ಮಾತನಾಡಿದ ಅವರು, ಸಾಂಕ್ರಾಮಿಕ ರೋಗ ಆರಂಭವಾದಾಗಿನಿಂದ ರಿಸರ್ವ್ ಬ್ಯಾಂಕ್ ತ್ವರಿತ ಮತ್ತು ದೀರ್ಘಕಾಲಿನ ಆರ್ಥಿಕ ಚೇತರಿಕೆ ಬೆಂಬಲಿಸಲು ಸಾಕಷ್ಟು ಹೆಚ್ಚುವರಿ ದ್ರವ್ಯತೆ ಕಾಯ್ದುಕೊಂಡಿದೆ ಎಂದರು.
ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಹೆಚ್ಚುವರಿ ದ್ರವ್ಯತೆಯ ಮಟ್ಟವು 2021ರ ಸೆಪ್ಟೆಂಬರ್ ಅವಧಿಯಲ್ಲಿ ಮತ್ತಷ್ಟು ಹೆಚ್ಚಾಯಿತು. ಸ್ಥಿರ ರಿವರ್ಸ್ ರೆಪೊ ದರ, 14 ದಿನಗಳಲ್ಲಿ ರಿವರ್ಸ್ ರೆಪೋ ದರಗಳ (ವಿಆರ್‌ಆರ್‌ಆರ್) ವ್ಯತ್ಯಯ ಮತ್ತು ದ್ರವ್ಯತೆ ಹೊಂದಾಣಿಕೆ ಸೌಲಭ್ಯದ (ಎಲ್‌ಎಎಫ್) ಅಡಿಯಲ್ಲಿ ಸರಾಸರಿ ನಿತ್ಯ 9 ಲಕ್ಷ ಕೋಟಿ ರೂಪಾಯಿಗಳ ಉಪಯೋಗಿಸಲಾಗಿದೆ. 2021ರ ಆಗಸ್ಟ್‌ನಲ್ಲಿ ದಿನ ಸರಾಸರಿ 7 ಲಕ್ಷ ಕೋಟಿಗಳಷ್ಟಿತ್ತು ಎಂದು ಹೇಳಿದ್ದಾರೆ.
ಹೆಚ್ಚುವರಿ ದ್ರವ್ಯತೆಯು ಅಕ್ಟೋಬರ್‌ನಲ್ಲಿ ಇಲ್ಲಿಯವರೆಗೆ (ಅಕ್ಟೋಬರ್ 6 ರವರೆಗೆ) ದೈನಂದಿನ ಸರಾಸರಿ ರೂ. 9.5 ಲಕ್ಷ ಕೋಟಿಗೆ ಏರಿದೆ. ಸಂಭಾವ್ಯ ದ್ರವ್ಯತೆ ಮಿತಿಮೀರಿದ ಮೊತ್ತವು 13 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಎಂದು ಅವರು ಹೇಳಿದರು.
ಇದನ್ನೂ ಓದಿ: ತೈಲ ಬೆಲೆ ಏರಿಕೆ ಬಗ್ಗೆ ಸರ್ಕಾರವೇ ನಿರ್ಧಾರ ಕೈಗೊಳ್ಳುತ್ತೆ : ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್