ಮುಂಬೈ: ಮಾಹಿತಿ ಹಕ್ಕು ಕಾಯ್ದೆಯ (ಆರ್‌ಟಿಐ) ಪ್ರಶ್ನೆಯ ಮೂಲಕ ಪಡೆಯದ ಬಿಡುಗಡೆ ಆಗದ ವರದಿಯ ಪ್ರತಿ ಪ್ರಕಾರ, ಎಟಿಎಂ ಶುಲ್ಕದ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರಚಿಸಿದ್ದ ಸಮಿತಿಯು ₹ 5,000ಕ್ಕಿಂತ ಹೆಚ್ಚಿನ ಹಣ ಹಿಂಪಡೆಯುವ ಗ್ರಾಹಕರಿಗೆ ಶುಲ್ಕ ವಿಧಿಸಲು ಶಿಫಾರಸು ಮಾಡಿತ್ತು ಎಂಬುದು ತಿಳಿದುಬಂದಿದೆ.
ಎಟಿಎಂಗಳಿಂದ ಹೆಚ್ಚಿನ ಹಣ ಹಿಂಪಡೆಯುವುದನ್ನು ನಿರುತ್ಸಾಹಗೊಳಿಸಲು, ಉಚಿತ ವಹಿವಾಟಿಗೆ ಪರಿಗಣಿಸಬೇಕಾದ ನಗದು 5,000 ರೂ. ವರೆಗೆ ಉಚಿತವಾಗಿ ಹಿಂತೆಗೆದುಕೊಳ್ಳಬಹುದು. ವೈಯಕ್ತಿಕ 5,000 ರೂ.ಗಿಂತ ಹೆಚ್ಚಿನ ಪ್ರತಿ ವಹಿವಾಟಿಗೆ ಬ್ಯಾಂಕ್ಗಳು ಗ್ರಾಹಕರ ಮೇಲೆ ಶುಲ್ಕ ವಿಧಿಸಬಹುದು ಎಂದು ಭಾರತೀಯ ಬ್ಯಾಂಕ್ಗಳ ಸಂಘದ ಅಂದಿನ ಮುಖ್ಯ ಕಾರ್ಯನಿರ್ವಾಹಕ ವಿ.ಜಿ. ಕಣ್ಣನ್ ಅವರ ನೇತೃತ್ವದ ಸಮಿತಿಯು ವರದಿಯಲ್ಲಿ ತಿಳಿಸಿತ್ತು. ಇದನ್ನು 2019ರ ಅಕ್ಟೋಬರ್ 22ರಂದು ಕೇಂದ್ರ ಬ್ಯಾಂಕ್‌ಗೆ ಸಲ್ಲಿಸಲಾಗಿತ್ತು. ಆದರೆ. ಈ ವರದಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ.
ಎಲ್ ಶ್ರೀಕಾಂತ್ ಎಂಬುವರು ಆರ್‌ಟಿಐ ಅಡಿಯಲ್ಲಿ ಈ ಬಗ್ಗೆ ಮಾಹಿತಿ ಕೋರಿದ್ದರು. ಸಾರ್ವಜನಿಕ ಮಾಹಿತಿ ಅಧಿಕಾರಿ (ಪಿಐಒ) ಇದನ್ನು ಆರ್‌ಬಿಐ ವಿಶ್ವಾಸಾರ್ಹ ಸಾಮರ್ಥ್ಯದಲ್ಲಿ ಇಟ್ಟುಕೊಂಡಿದೆ. ಆರ್‌ಟಿಐ ಕಾಯ್ದೆಯ ಸೆಕ್ಷನ್ 8 (1) (ಇ) ಅಡಿಯಲ್ಲಿ ವಿನಾಯಿತಿ ನೀಡಲಾಗಿದೆ ಎಂದು ಕೋರಿಕೆಯನ್ನು ತಿರಸ್ಕರಿಸಿದ್ದರು.
-
#CashlessConsumer #RTI #WIN - The appeal has been allowed and CPIO has been asked to share #ATMInterchange report.
— Srikanth ஸ்ரீகாந்த் (@logic) June 17, 2020 " class="align-text-top noRightClick twitterSection" data="
The only thing lost is the time taken - 2 months to get them. But we will be persistent and can have small wins. We will share the report when available. pic.twitter.com/CxvSqPh2N3
">#CashlessConsumer #RTI #WIN - The appeal has been allowed and CPIO has been asked to share #ATMInterchange report.
— Srikanth ஸ்ரீகாந்த் (@logic) June 17, 2020
The only thing lost is the time taken - 2 months to get them. But we will be persistent and can have small wins. We will share the report when available. pic.twitter.com/CxvSqPh2N3#CashlessConsumer #RTI #WIN - The appeal has been allowed and CPIO has been asked to share #ATMInterchange report.
— Srikanth ஸ்ரீகாந்த் (@logic) June 17, 2020
The only thing lost is the time taken - 2 months to get them. But we will be persistent and can have small wins. We will share the report when available. pic.twitter.com/CxvSqPh2N3
ವರದಿಯ ಪ್ರಕಾರ, ಎಟಿಎಂಗಳನ್ನು ನಿರ್ವಹಿಸುವ ವೆಚ್ಚ ಹೆಚ್ಚಾಗಿದೆ. ಆದರೆ, ಇಂಟರ್ಚೇಂಜ್ ಶುಲ್ಕ ಮತ್ತು ಗ್ರಾಹಕರ ಎಟಿಎಂ ಬಳಕೆಯ ಶುಲ್ಕಗಳ ಮೇಲಿನ ಕ್ರಮವನ್ನು 2012 ಮತ್ತು 2008ರಿಂದ ಪರಿಶೀಲಿಸಲಾಗಿಲ್ಲ. ವಿಶೇಷವಾಗಿ ಅರೆ ನಗರ ಮತ್ತು ಗ್ರಾಮೀಣ ಕೇಂದ್ರಗಳಲ್ಲಿ ಹೊಸ ಎಟಿಎಂ ನಿಯೋಜನೆಗಳ ಕೊರತೆಯ ಬಗ್ಗೆಯೂ ಸಮಿತಿ ಕಳವಳ ವ್ಯಕ್ತಪಡಿಸಿತ್ತು.
ಜನಸಂಖ್ಯೆಯನ್ನು ಮಾನದಂಡವಾಗಿ ಇರಿಸಿಕೊಂಡು ಎಟಿಎಂ ಶುಲ್ಕ ಹೇರುವಂತೆ ಸಮಿತಿಯು ಶಿಫಾರಸು ಮಾಡಿದೆ. 10 ಲಕ್ಷಕ್ಕಿಂತ ಕಡಿಮೆ ಇರುವ ಜನಸಂಖ್ಯೆ ವ್ಯಾಪ್ತಿಯಲ್ಲಿ ಈಗಿನ ಐದರ ಬದಲಿಗೆ ಆರಕ್ಕೆ ಏರಿಕೆ ಮಾಡುವಂತೆ ಪ್ರಸ್ತಾಪ ಇದೆ. ಜನಸಂಖ್ಯೆ ಅತ್ಯಧಿಕವಾಗಿರುವ ಕಡೆ ವಿಥ್ಡ್ರಾ ಮಿತಿಯನ್ನು 3ಕ್ಕೆ ನಿಗದಿಪಡಿಸಲು ಸೂಚಿಸಿದೆ.
ಕಳೆದ ವರ್ಷದಿಂದ ಎಟಿಎಂ ಬಳಕೆ ಹೆಚ್ಚಾಗಿದೆ. ಆಯಾ ಬ್ಕಾಂಕ್ ಬಿಟ್ಟು ಬೇರೆ ಬೇರೆ ಬ್ಯಾಂಕ್ಗಳ ಎಟಿಎಂನಲ್ಲಿ ಹಣ ಪಡೆದರೇ ನಿಗದಿತ ಮಿತಿಗಿಂತ ಹೆಚ್ಚು ಡ್ರಾ ಮಾಡಿದರೆ ವಿಧಿಸುವ ಶುಲ್ಕದಲ್ಲಿ ಮಾತ್ರ ಯಾವ ಬದಲಾವಣೆ ಆಗಿಲ್ಲ.