ಮುಂಬೈ: ಹೆಚ್ಚುತ್ತಿರುವ ಅನಧಿಕೃತ ಡಿಜಿಟಲ್ ಸಾಲ ಪ್ಲಾಟ್‌ಫಾರ್ಮ್ ಮತ್ತು ಮೊಬೈಲ್ ಅಪ್ಲಿಕೇಷನ್‌ಗಳಿಗೆ ಬಲಿಯಾಗದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ಅನೇಕ ವ್ಯಕ್ತಿಗಳು ಮತ್ತು ಸಣ್ಣ ಉದ್ಯಮಗಳು ಅನಧಿಕೃತ ಪ್ಲಾಟ್‌ಫಾರ್ಮ್ ಮತ್ತು ಅಪ್ಲಿಕೇಷನ್‌ಗಳಿಗೆ ಬಲಿಯಾಗುತ್ತಿರುವ ಬಗ್ಗೆ ವರದಿಗಳು ಆರ್‌ಬಿಐ ಗಮನಕ್ಕೆ ಬಂದಿವೆ. ಅವು ತ್ವರಿತ ಮತ್ತು ತೊಂದರೆಯಿಲ್ಲದ ಸಾಲ ನೀಡುವ ಭರವಸೆ ನೀಡುತ್ತಿವೆ. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದೆ.
ಅತಿಯಾದ ಬಡ್ಡಿ ದರಗಳು ಮತ್ತು ಹೆಚ್ಚುವರಿ ಗುಪ್ತ ಶುಲ್ಕಗಳನ್ನು ಸಾಲಗಾರರಿಂದ ಬೇಡಿಕೆಯಿಡುತ್ತವೆ. ಇದು ಸ್ವೀಕಾರಾರ್ಹವಲ್ಲದ ನಡೆಯಾಗಿದೆ. ತ್ವರಿತ ಸಾಲ ನೀಡುವ ಅನಧಿಕೃತ ಪ್ಲಾಟ್ಫಾರ್ಮ್ಗಳು ಹೆಚ್ಚಿನ ಬಡ್ಡಿ ದರ ಹಾಗೂ ಶುಲ್ಕಗಳನ್ನು ವಿಧಿಸುತ್ತವೆ. ಅಲ್ಲದೆ ಸಾಲಗಾರರ ಮೊಬೈಲ್ ಫೋನ್‌ಗಳಲ್ಲಿ ಡೇಟಾ ಪ್ರವೇಶಿಸುವ ಮೂಲಕ ಒಪ್ಪಂದಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದಿದೆ.
ಇದನ್ನೂ ಓದಿ: ಆನಂದ್ ಮಹೀಂದ್ರಾ ಹೃದಯ ಗೆದ್ದ ಧರ್ಮಸ್ಥಳದ ಎತ್ತಿನ ಬಂಡಿಯ ಕಾರು: ಟೆಸ್ಲಾ ಕಂಪನಿಗೆ ಖರ್ಚಿನ ಸವಾಲ್!
ಸಾರ್ವಜನಿಕರು ಇಂತಹ ಅನಧಿಕೃತ ಚಟುವಟಿಕೆಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕು. ಆನ್‌ಲೈನ್ ಅಥವಾ ಮೊಬೈಲ್ ಅಪ್ಲಿಕೇಷನ್‌ಗಳ ಮೂಲಕ ಸಾಲ ನೀಡುವ ಕಂಪನಿ / ಸಂಸ್ಥೆಯ ಹಿಂದಿನ ಅಂಶಗಳನ್ನು ಪರಿಶೀಲಿಸಬೇಕು ಎಂದು ಆರ್‌ಬಿಐ ತಿಳಿಸಿದೆ.
ಕೆವೈಸಿ ದಾಖಲೆಗಳ ಪ್ರತಿಗಳನ್ನು ಗುರುತು-ಪರಿಚಯ ಇಲ್ಲದ ವ್ಯಕ್ತಿಗಳು ಅಥವಾ ಅನಧಿಕೃತ ಅಪ್ಲಿಕೇಷನ್‌ಗಳೊಂದಿಗೆ ಎಂದಿಗೂ ಹಂಚಿಕೊಳ್ಳಬೇಡಿ. ಅಪ್ಲಿಕೇಷನ್‌ಗಳಿಗೆ ಸಂಬಂಧಿಸಿದಂತೆ ಯಾವುದಾದರೂ ಮಾಹಿತಿ ಕಂಡುಬಂದರೆ ಸಂಬಂಧಪಟ್ಟ ಕಾನೂನು ಸಂಸ್ಥೆಗಳಿಗೆ ವರದಿ ಮಾಡಿ ಎಂದು ಕೇಂದ್ರೀಯ ಬ್ಯಾಂಕ್, ಗ್ರಾಹಕರಿಗೆ ಮನವಿ ಮಾಡಿದೆ. ಆನ್‌ಲೈನ್ ದೂರು ದಾಖಲಿಸಲು ಪೋರ್ಟಲ್ https: achet.rbi.org.in ಸಹ ಬಳಸಬಹುದಾಗಿದೆ.