ನವದೆಹಲಿ : ದತ್ತಾಂಶ ಸಂಗ್ರಹಣೆ ಮಾನದಂಡಗಳನ್ನು ಪಾಲಿಸಲು ವಿಫಲವಾದ ಕಾರಣ ಜುಲೈ 22ರಿಂದ ಜಾರಿಗೆ ಬರುವಂತೆ ಮಾಸ್ಟರ್ ಕಾರ್ಡ್‌ನ ಹೊಸ ಕ್ರೆಡಿಟ್, ಡೆಬಿಟ್ ಮತ್ತು ಪ್ರಿಪೇಯ್ಡ್ ಕಾರ್ಡ್ ಗ್ರಾಹಕರ ಸೇವೆಯನ್ನು ಆರ್‌ಬಿಐ ರದ್ದು ಮಾಡಿದೆ. ಆದರೆ, ಈಗಾಗಲೇ ಮಾಸ್ಟರ್ ಕಾರ್ಡ್ ಹೊಂದಿರುವ ಗ್ರಾಹಕರ ಮೇಲೆ ಈ ಆದೇಶ ಪರಿಣಾಮ ಬೀರುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸ್ಪಷ್ಟಪಡಿಸಿದೆ.
ಅಮೆರಿಕ ಮೂಲದ ಮಾಸ್ಟರ್‌ಕಾರ್ಡ್ ವಿರುದ್ಧ ಕ್ರಮಕೈಗೊಂಡಿರುವ ಆರ್‌ಬಿಐ, ಪಾವತಿ ವ್ಯವಸ್ಥೆಯ ದತ್ತಾಂಶವನ್ನು ಸಂಗ್ರಹಿಸುವ ನಿರ್ದೇಶನಗಳಿಗೆ ಅನುಗುಣವಾಗಿ ನಡೆದುಕೊಳ್ಳುವಂತೆ ಸಾಕಷ್ಟು ಸಮಯಾವಕಾಶ ನೀಡಿತ್ತು. ಆದರೂ ಸಂಸ್ಥೆ ದತ್ತಾಂಶ ಸಂಗ್ರಹದ ನಿರ್ದೇಶನಗಳಿಗೆ ಅನುಗುಣವಾಗಿ ನಡೆದುಕೊಳ್ಳದಿರುವುದು ಕಂಡು ಬಂದಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.
ಇದನ್ನೂ ಓದಿ: ಇಂದಿನಿಂದ ಜೊಮಾಟೊ IPO ಆರಂಭ: ಅಧಿಕೃತ ಮಾಹಿತಿ ಪ್ರಕಟಿಸಿದ ಸಂಸ್ಥೆ
ಪೇಮೆಂಟ್ ವ್ಯವಸ್ಥೆ ಸಂಬಂಧ ಗ್ರಾಹಕರ ಮಾಹಿತಿಯನ್ನು ಭಾರತದಲ್ಲೇ ಸಂಗ್ರಹಿಸಬೇಕು ಎಂದು ಹೇಳಿತ್ತು. ಆದರೆ, ಇದನ್ನು ಮಾಸ್ಟರ್ ಕಾರ್ಡ್ ಸಂಸ್ಥೆ ನಿರ್ಲಕ್ಷಿಸಿರುವ ಆರೋಪವಿದೆ. ಆರ್‌ಬಿಐ ನಿರ್ದೇಶಗಳನ್ನು ಪಾಲಿಸದೆ ಶಿಕ್ಷೆಗೆ ಗುರಿಯಾದ 3ನೇ ಬ್ಯಾಂಕೇತರ ಸಂಸ್ಥೆ ಎನಿಸಿದೆ. ಈ ಮೊದಲು ಅಮೆರಿಕನ್ ಎಕ್ಸ್‌ಪ್ರೆಸ್ ಬ್ಯಾಂಕಿಂಗ್ ಕಾರ್ಪ್ ಮತ್ತು ದೀನರ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಸಂಸ್ಥೆಗಳಿಗೆ ನಿಷೇಧ ಹೇರಲಾಗಿತ್ತು.