ETV Bharat / business

ಕಾರು ದುರಸ್ತಿ, ಬ್ಯೂಟಿ ಪಾರ್ಲರ್, ಸಲೂನ್​​ನಂಥ ಗಾಢ ಸಂಪರ್ಕ ವಲಯಗಳಿಗೆ ₹ 15,000 ಕೋಟಿ ದ್ರವ್ಯತ ಬೆಂಬಲ

ಆರ್‌ಬಿಐ ತನ್ನ ಎರಡನೇ ದ್ವಿ-ಮಾಸಿಕ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಜೂನ್ 4ಕ್ಕೆ ಮುಕ್ತವಾಯಿತು. ಕೋವಿಡ್ ಎರಡನೇ ಅಲೆಯ ದುಷ್ಪರಿಣಾಮ ಕಡಿಮೆ ಮಾಡಲು ಮುಂದಿನ ವರ್ಷದ ಮಾರ್ಚ್ 31ರವರೆಗೆ 15,000 ಕೋಟಿ ರೂ. ಪ್ರತ್ಯೇಕ ದ್ರವ್ಯತೆ ವಿಂಡೋ ತೆರೆಯಿತು.

Cash
Cash
author img

By

Published : Jun 4, 2021, 2:26 PM IST

ಮುಂಬೈ: ಸಂಪರ್ಕ-ತೀವ್ರ ವಲಯಗಳ ಮೇಲೆ ಕೋವಿಡ್​ -19 ಸಾಂಕ್ರಾಮಿಕದ ಪ್ರಭಾವ ತಗ್ಗಿಸಲು ರಿಸರ್ವ್ ಬ್ಯಾಂಕ್ ಮುಂದಿನ ವರ್ಷ ಮಾರ್ಚ್​​ವರೆಗೆ 15,000 ಕೋಟಿ ರೂ. ಪ್ರತ್ಯೇಕ ದ್ರವ್ಯತೆ ವಿಂಡೋ ತೆರೆಯುವುದಾಗಿ ಭಾರತೀಯ ರಿಸರ್ವ್​ ಬ್ಯಾಂಕ್ (ಆರ್​ಬಿಐ) ಘೋಷಿಸಿದೆ.

ಆರ್‌ಬಿಐ ತನ್ನ ಎರಡನೇ ದ್ವಿ-ಮಾಸಿಕ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಜೂನ್ 4ಕ್ಕೆ ಮುಕ್ತವಾಯಿತು. ಕೋವಿಡ್ ಎರಡನೇ ಅಲೆಯ ದುಷ್ಪರಿಣಾಮ ಕಡಿಮೆ ಮಾಡಲು ಮುಂದಿನ ವರ್ಷದ ಮಾರ್ಚ್ 31ರವರೆಗೆ 15,000 ಕೋಟಿ ರೂ. ಪ್ರತ್ಯೇಕ ದ್ರವ್ಯತೆ ವಿಂಡೋ ತೆರೆಯಿತು.

ಸಭೆಯ ಬಳಿಕ ಮಾತನಾಡಿದ ಗವರ್ನರ್ ಶಕ್ತಿಕಾಂತ್ ದಾಸ್​, ಕೆಲವು ಸಂಪರ್ಕ-ತೀವ್ರ ವಲಯಗಳು ಕೋವಿಡ್-19 ಸಾಂಕ್ರಾಮಿಕದ ತೀವ್ರ ಪ್ರಭಾವಕ್ಕೆ ಒಳಗಾಗಿವೆ. ಪ್ರತ್ಯೇಕ ದ್ರವ್ಯತೆ ವಿಂಡೋ ಸೌಲಭ್ಯವು ಮೂರು ವರ್ಷಗಳವರೆಗೆ ಶೇ 4ರಷ್ಟು ರೆಪೊ ದರದಲ್ಲಿ ಹೊಂದಿರುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಜೇಬು ಸುಡುತ್ತಿದೆ ಇಂಧನ ದರ: ಕರ್ನಾಟಕದಲ್ಲೂ ಶತಕದ ಸಮೀಪ ಪೆಟ್ರೋಲ್‌ ಬೆಲೆ

ಯೋಜನೆಯ ಭಾಗವಾಗಿ ಬ್ಯಾಂಕ್​ಗಳು ಈಗ ಹೋಟೆಲ್‌ ಮತ್ತು ರೆಸ್ಟೋರೆಂಟ್‌, ಟ್ರಾವೆಲ್ ಏಜೆಂಟ್‌, ಟೂರ್ ಆಪರೇಟರ್‌, ಸಾಹಸ ಅಥವಾ ಪಾರಂಪರಿಕ ಸೌಲಭ್ಯದಾತರು, ವಾಯುಯಾನ ಪೂರಕ ಸೇವೆಗಳು ನಿರ್ವಹಣೆದಾರರು, ಪೂರೈಕೆ ಸರಪಳಿ ಮತ್ತು ಖಾಸಗಿಯವರೂ ಒಳಗೊಂಡ ಇತರ ಸೇವೆಗಳಿಗೆ ಸಂಪರ್ಕ-ತೀವ್ರ ವಲಯಗಳು ಹೊಸ ಸಾಲ ನೀಡುವ ಬೆಂಬಲದಡಿ ಒಳಪಡಲಿವೆ. ಬಸ್ ನಿರ್ವಾಹಕರು, ಕಾರು ದುರಸ್ತಿ ಸೇವೆಗಳು, ಬಾಡಿಗೆ-ಕಾರು ಸೇವೆ ಒದಗಿಸುವವರು, ಈವೆಂಟ್ / ಕಾನ್ಫರೆನ್ಸ್ ಸಂಘಟಕರು, ಸ್ಪಾ ಚಿಕಿತ್ಸಾಲಯಗಳು ಮತ್ತು ಬ್ಯೂಟಿ ಪಾರ್ಲರ್‌ಗಳು ಅಥವಾ ಸಲೂನ್‌ಗಳು ಲಭ್ಯವಾಗಲಿದೆ.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (ಎಂಎಸ್‌ಎಂಇ), ವಿಶೇಷವಾಗಿ ಸಣ್ಣ ಎಂಎಸ್‌ಎಂಇಗಳು ಮತ್ತು ಸಾಲದ ಕೊರತೆ ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳನ್ನು ಒಳಗೊಂಡಂತೆ ಇತರ ವ್ಯವಹಾರಗಳನ್ನು ಬೆಂಬಲಿಸಲು, ರಿಸರ್ವ್ ಬ್ಯಾಂಕ್​ನ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಎಸ್​ಐಡಿಬಿಐ) 16,000 ಕೋಟಿ ರೂ.ಗಳ ವಿಶೇಷ ದ್ರವ್ಯತೆ ಸೌಲಭ್ಯ ವಿಸ್ತರಿಸಲು ನಿರ್ಧರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.