ETV Bharat / business

ರೈಲ್ವೆ ಸರಕು ಸೇವೆಗಳಿಗೆ ಆನ್‌ಲೈನ್ ಪೇಮೆಂಟ್: ಇನ್ಮುಂದೆ ಡೆಬಿಟ್​, ಕ್ರೆಡಿಟ್​ ಕಾರ್ಡ್​, ನೆಟ್​ ಬ್ಯಾಂಕ್​ನಲ್ಲಿ ಪಾವತಿ - ಸರಕು ಶುಲ್ಕಗಳಿಗೆ ಆನ್​ಲೈನ್ ಪೇಮೆಂಟ್

ರೈಲ್ವೆ ಸಚಿವಾಲಯ ಇಂದು ಸರಕು ಶುಲ್ಕಗಳ ಆನ್‌ಲೈನ್ ಪಾವತಿ ವ್ಯವಸ್ಥೆಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆನ್‌ಲೈನ್ ಪಾವತಿ ವ್ಯವಸ್ಥೆ ಎಸ್‌ಬಿಐನ ಪಾವತಿ ಗೇಟ್‌ವೇ ಮೂಲಕ ಸರಕು ವ್ಯವಹಾರ ಅಭಿವೃದ್ಧಿ (ಎಫ್‌ಬಿಡಿ) ಪೋರ್ಟಲ್ ಮೂಲಕ ಒದಗಿಸಲಾಗುತ್ತಿದೆ.

ರೈಲ್ವೆ
ರೈಲ್ವೆ
author img

By

Published : Apr 30, 2021, 7:47 PM IST

ನವದೆಹಲಿ: ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದಲ್ಲಿನ ಅದ್ಭುತ ಪ್ರಗತಿ ಈಗ ವೆಬ್ ಮೂಲಕ ಆನ್‌ಲೈನ್ ಪಾವತಿ ವ್ಯವಸ್ಥೆ ಪರಿಚಯಿಸಲು ಕಾರ್ಯ ಸಾಧ್ಯವಾಗಿಸಿದೆ.

ಸರಕು ಮತ್ತು ಪೂರಕ ಶುಲ್ಕಗಳು ಸೇರಿದಂತೆ ಎಲ್ಲ ರೀತಿಯ ಶುಲ್ಕಗಳನ್ನು ಸರಳ, ಅನುಕೂಲಕರ, ವೇಗ ಹಾಗೂ ಪಾರದರ್ಶಕ ಪಾವತಿ ಪ್ರಕ್ರಿಯೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಗ್ರಾಹಕರು ನಾನಾ ವಿಧದ ಶುಲ್ಕ ಪಾವತಿ ಆಯ್ಕೆ ವೆಬ್‌ನಲ್ಲಿ ಪಡೆಯಬಹುದು.

ರೈಲ್ವೆ ಸಚಿವಾಲಯ ಇಂದು ಸರಕು ಶುಲ್ಕಗಳ ಆನ್‌ಲೈನ್ ಪಾವತಿ ವ್ಯವಸ್ಥೆಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆನ್‌ಲೈನ್ ಪಾವತಿ ವ್ಯವಸ್ಥೆಯನ್ನು ಎಸ್‌ಬಿಐನ ಪಾವತಿ ಗೇಟ್‌ವೇ ಮೂಲಕ ಸರಕು ವ್ಯವಹಾರ ಅಭಿವೃದ್ಧಿ (ಎಫ್‌ಬಿಡಿ) ಪೋರ್ಟಲ್ ಮೂಲಕ ಒದಗಿಸಲಾಗುತ್ತಿದೆ.

ಇದು ಸರಕು ಸಂಗ್ರಹಣೆ ಮತ್ತು ಎಲ್ಲಾ ರೀತಿಯ ಪೂರಕ ಶುಲ್ಕಗಳನ್ನು ಸಂಗ್ರಹಿಸುವ ಸೌಲಭ್ಯ ಒದಗಿಸುತ್ತದೆ. ಉದಾ. ಪ್ರೀಮಿಯಂ ಚಾರ್ಜ್, ವ್ಯಾಗನ್ ನೋಂದಣಿ ಶುಲ್ಕ, ವಿಳಂಬ ಶುಲ್ಕ, ಸೈಡಿಂಗ್ ಚಾರ್ಜ್, ಶಂಟಿಂಗ್ ಚಾರ್ಜ್, ರೀಬುಕಿಂಗ್ ಚಾರ್ಜ್, ಡೈವರ್ಷನ್ ಚಾರ್ಜ್ ಸೇರಿದಂತೆ ಇತರ ಶುಲ್ಕಗಳನ್ನು ಎಫ್‌ಬಿಡಿ ಮೂಲಕ ಆನ್‌ಲೈನ್ ಪಾವತಿ ವ್ಯವಸ್ಥೆಯಡಿ ವಾರದ 24 ಗಂಟೆಗಳ ಕಾಲ ಲಭ್ಯವಿರುತ್ತದೆ. ಇದು 2021ರ ಜೂನ್​ 1ರಿಂದ ಜಾರಿಗೆ ಬರುತ್ತದೆ.

ಸರಕು ಶುಲ್ಕಗಳಿಗಾಗಿ ಆನ್‌ಲೈನ್ ಪಾವತಿ ವ್ಯವಸ್ಥೆಗಾಗಿ ರೈಲ್ವೆ ಸಚಿವಾಲಯ ಹೊರಡಿಸಿದ ಯುಡ್‌ಲೈನ್‌ಗಳು ಈ ಕೆಳಗಿನ ಪ್ರಮುಖ ಲಕ್ಷಣಗಳನ್ನು ಒಳಗೊಂಡಿವೆ

ಆನ್‌ಲೈನ್ ಪಾವತಿ ವ್ಯವಸ್ಥೆ:

ಎಸ್‌ಬಿಐನ ಪಾವತಿ ಗೇಟ್‌ವೇ ಮೂಲಕ ಸರಕು ವ್ಯವಹಾರ ಅಭಿವೃದ್ಧಿ (ಎಫ್‌ಬಿಡಿ) ಪೋರ್ಟಲ್ ಮೂಲಕ ಆನ್‌ಲೈನ್ ಪಾವತಿ ವ್ಯವಸ್ಥೆ ಒದಗಿಸಲಾಗುವುದು. ಇದು ಸರಕು ಸಂಗ್ರಹಣೆ ಮತ್ತು ಎಲ್ಲಾ ರೀತಿಯ ಪೂರಕ ಶುಲ್ಕಗಳನ್ನು ಸಂಗ್ರಹಿಸುವ ಸೌಲಭ್ಯ ನೀಡುತ್ತದೆ.

ಎಫ್‌ಬಿಡಿ ಮೂಲಕ ಆನ್‌ಲೈನ್ ಪಾವತಿ ವ್ಯವಸ್ಥೆ 24x7 ಲಭ್ಯವಿರುತ್ತದೆ. ಗ್ರಾಹಕ / ದ್ವಿತೀಯ ಗ್ರಾಹಕನು ಎಲೆಕ್ಟ್ರಾನಿಕ್ ನೋಂದಣಿ ಬೇಡಿಕೆ (ಇ-ಆರ್​ಡಿ) ನೀತಿಯಡಿ ನೋಂದಣಿಗೆ ನಿಗದಿಪಡಿಸಿದ ಕಾರ್ಯವಿಧಾನದ ಪ್ರಕಾರ ಸೌಲಭ್ಯ ಪಡೆಯಲು ಇಚ್ಛಿಸುವ ಗ್ರಾಹಕರು ಎಫ್‌ಬಿಡಿ ಪೋರ್ಟಲ್‌ನಲ್ಲಿ ನೋಂದಾಯಿಸಿ ಕೊಳ್ಳಬೇಕಾಗುತ್ತದೆ.

ರವಾನೆದಾರ ಗ್ರಾಹಕ ಎಂದು ಮತ್ತು ಎಂಡೋರ್ಸಿ / ನಿರ್ವಹಣೆ ಏಜೆಂಟ್ ಅನ್ನು ದ್ವಿತೀಯ ಗ್ರಾಹಕ ಎಂದು ಉಲ್ಲೇಖಿಸಲಾಗುತ್ತದೆ. ಈಗಾಗಲೇ ಇ-ಆರ್‌ಡಿಯಲ್ಲಿ ನೋಂದಾಯಿಸಿಕೊಂಡ ಗ್ರಾಹಕರು ಈ ಸೌಲಭ್ಯಕ್ಕಾಗಿ ಮತ್ತೆ ನೋಂದಾಯಿಸಿಕೊಳ್ಳಬೇಕಾಗಿಲ್ಲ. ನೋಂದಣಿಗೆ ಶುಲ್ಕಗಳ ಹೆಸರನ್ನು ಸೂಚಿಸಬಹುದು.

ರೈಲ್ವೆ ಬಾಕಿ ಪಾವತಿಸುವ ಹೊಣೆಗಾರಿಕೆ ಗ್ರಾಹಕನೊಂದಿಗೆ (ಕನ್ಸೈನರ್ / ಕನ್ಸೈನಿ) ಇರುತ್ತದೆ. ಎಲ್ಲ ಪಾವತಿಗಳಿಗೆ ಆತನೇ ಜವಾಬ್ದಾರನಾಗಿರುತ್ತಾನೆ. ಟಿಎಂಎಸ್ ಸ್ಥಳದಲ್ಲಿ ಗ್ರಾಹಕರ ಡ್ಯಾಶ್‌ಬೋರ್ಡ್ ಮೂಲಕ ನೆಟ್ ಬ್ಯಾಂಕಿಂಗ್ / ಆರ್‌ಟಿಜಿಎಸ್ / ನೆಫ್ಟ್, ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / ಯುಪಿಐನಂತಹ ಎಲ್ಲ ವಿಧಾನಗಳ ಮೂಲಕ ಆನ್‌ಲೈನ್ ಪಾವತಿ ಮಾಡಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.