ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಪ್ರಯಾಣಿಕರು ತಮ್ಮ ರಾಜ್ಯಗಳಿಗೆ ಮರಳಲು ಹೆಚ್ಚಿನ ವಿಶೇಷ ರೈಲುಗಳನ್ನು ನಿಯೋಜಿಸಲು ರಾಜ್ಯಗಳ ಜೊತೆ ಸಂವಹನ ನಡೆಸಲಿದೆ ಎಂದು ರೈಲ್ವೆ ಸಚಿವಾಲಯ ಮಂಗಳವಾರ ಪ್ರಕಟಿಸಿದೆ.
ಇಂದಿನಿಂದ ಸೆಪ್ಟೆಂಬರ್ 30ರವರೆಗೆ ಜಾರಿಯಲ್ಲಿರುವಂತೆ ಅನ್ಲಾಕ್ 4.O ಪ್ರಕಟಣೆ ಹೊರಬಿದ್ದಿದೆ. ಇತ್ತೀಚಿನ ಮಾರ್ಗಸೂಚಿಗಳ ಪ್ರಕಾರ, ಸಾಂಕ್ರಾಮಿಕ ರೋಗದ ಮಧ್ಯೆ ಆರ್ಥಿಕತೆಯನ್ನು ಮತ್ತಷ್ಟು ತೆರೆಯಲು ಸರ್ಕಾರವು ದೇಶಾದ್ಯಂತ ಹಲವು ನಿರ್ಬಂಧಗಳನ್ನು ಸಡಿಲಿಸಿದೆ.
ಸೆಪ್ಟೆಂಬರ್ 7ರಿಂದ 'ಮಾಪನಾಂಕ ನಿರ್ಣಯ (ಕ್ಯಾಲಿಬ್ರೆಟೆಡ್) ಮಾದರಿಯಲ್ಲಿ' ಮೆಟ್ರೊ ರೈಲು ಸೇವೆಗಳನ್ನು ಪುನಾರಂಭಿಸಲು ಅವಕಾಶ ಮಾಡಿಕೊಡಲಾಗಿದೆ. ಆಗಸ್ಟ್ 12ರವರೆಗೆ ಈ ಹಿಂದೆ ಸ್ಥಗಿತಗೊಂಡಿದ್ದ ಎಲ್ಲಾ ಸಾಮಾನ್ಯ ಪ್ಯಾಸೆಂಜರ್ ರೈಲುಗಳನ್ನು "ಮುಂದಿನ ಸೂಚನೆ ಬರುವವರೆಗೆ" ಸ್ಥಗಿತಗೊಳಿಸಲಾಗುವುದು ಎಂದು ಭಾರತೀಯ ರೈಲ್ವೆ ಕಳೆದ ತಿಂಗಳು ಘೋಷಿಸಿತ್ತು.
ಪ್ರಸ್ತುತ ಚಾಲನೆಯಲ್ಲಿರುವ ಎಲ್ಲಾ 230 ವಿಶೇಷ ರೈಲುಗಳ ಕಾರ್ಯಾಚರಣೆ ಮುಂದುವರಿಯಲಿವೆ ಎಂದು ರಾಷ್ಟ್ರೀಯ ಸಾರಿಗೆದಾರರು ತಿಳಿಸಿದೆ.