ETV Bharat / business

ರಾಜ್ಯದ ನೈಋತ್ಯ ರೈಲ್ವೆ ವಲಯದಿಂದ ಒಂದು ತಿಂಗಳಲ್ಲಿ 3.22 ಮಿಲಿಯನ್​ ಟನ್ ಸರಕು ಸಾಗಣೆ! - south western railway freight transport

ರಾಜ್ಯದ ದಕ್ಷಿಣ ಭಾಗದಲ್ಲಿ ಸಾಂಕ್ರಾಮಿಕ ರೋಗ ಭುಗಿಲೆದ್ದ ನಂತರ ಹಲವು ತಿಂಗಳವರೆಗೆ ಸರಕು ಸಾಗಣೆ ನಿಧಾನವಾಗಿತ್ತು. ಅಕ್ಟೋಬರ್‌ನಲ್ಲಿ ಸರಕು ಲೋಡಿಂಗ್ 3.22 ಮಿಲಿಯನ್ ಟನ್‌ಗೆ ಏರಿಕೆಯಾಗಿದೆ ಎಂದು ಹುಬ್ಬಳ್ಳಿ ವಲಯದ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Railways
ರೈಲ್ವೆ
author img

By

Published : Nov 4, 2020, 5:50 PM IST

ಬೆಂಗಳೂರು: ಕೊರೊನಾ ಪ್ರೇರಿತ ಲಾಕ್​ಡೌನ್​ನಿಂದ ಪ್ರಯಾಣಿಕ ಸೇವೆಗಳು ಸ್ಥಗಿತವಾಗಿ ಉಂಟಾದ ಆದಾಯ ನಷ್ಟವನ್ನು ನೈಋತ್ಯ ವಲಯ ರೈಲ್ವೆ (ಎಸ್‌ಡಬ್ಲ್ಯುಆರ್)ಸರಿದೂಗಿಸಿಕೊಂಡಿದೆ. ಅಕ್ಟೋಬರ್‌ನಲ್ಲಿ ದಾಖಲೆಯ 3.22 ಮಿಲಿಯನ್ ಟನ್ ಸರಕು ಸಾಗಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದ ದಕ್ಷಿಣ ಭಾಗದಲ್ಲಿ ಸಾಂಕ್ರಾಮಿಕ ರೋಗ ಭುಗಿಲೆದ್ದ ನಂತರ ಹಲವು ತಿಂಗಳವರೆಗೆ ಸರಕು ಸಾಗಣೆ ನಿಧಾನವಾಗಿತ್ತು. ಅಕ್ಟೋಬರ್‌ನಲ್ಲಿ ಸರಕು ಲೋಡಿಂಗ್ 3.22 ಮಿಲಿಯನ್ ಟನ್‌ಗೆ ಏರಿಕೆಯಾಗಿದೆ ಎಂದು ಹುಬ್ಬಳ್ಳಿ ವಲಯದ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಸ್ತೆ ಮತ್ತು ಹೆದ್ದಾರಿಯಂತಹ ಇತರ ಮಾರ್ಗಗಳಿಗಿಂತ ಸರಕು ಸಾಗಣೆ ರೈಲುಗಳಲ್ಲಿ ವಸ್ತುಗಳನ್ನು ಸಾಗಿಸಲು ಹೆಚ್ಚಿನ ಪ್ರೋತ್ಸಾಹ ಮತ್ತು ರಿಯಾಯಿತಿಗಳನ್ನು ನೀಡಲಾಯಿತು. ಇದರಿಂದ ವ್ಯಾಪಕ ಗ್ರಾಹಕರು ರೈಲ್ವೆ ಸರಕು ಸಾಗಣೆ ಸೇವೆ ಬಳಸಿಕೊಂಡರು.

ಏಪ್ರಿಲ್​ನಿಂದ ಅಕ್ಟೋಬರ್​ವರೆಗೆ ದಾಖಲೆಯ 19.5 ಮೆಲಿಯನ್​ ಟನ್ ಸರಕು ಭರ್ತಿ ಮಾಡಿದ್ದೇವೆ. ರಾಜ್ಯದಲ್ಲಿ ವಿದ್ಯುತ್ ಉತ್ಪಾದನಾ ಘಟಕಗಳಿಗೆ 5.1 ಮಿಲಿಯನ್ ಟನ್ ಕಲ್ಲಿದ್ದಲು ಕೂಡ ಇದರಲ್ಲಿ ಸೇರಿದೆ. ನೈಋತ್ಯ ವಲಯ ರೈಲ್ವೆ ಅಕ್ಟೋಬರ್ 20ರವರೆಗೆ ರಾಜ್ಯದ ಉತ್ತರ ಮತ್ತು ವಾಯುವ್ಯ ಭಾಗಗಳಿಂದ 4.8 ಮೆಲಿಯನ್​ ಟನ್ ರೋಲ್ಡ್ ಉಕ್ಕು ಸಾಗಿಸಿದ್ದೇವೆ ಎಂದರು.

ಸಾಂಕ್ರಾಮಿಕ ಕಾಲದಲ್ಲಿ ಆಹಾರ ಪೂರೈಕೆ ಕಾಪಾಡಿಕೊಳ್ಳಲು ರಾಜ್ಯದಾದ್ಯಂತ ಸುಮಾರು 10,000 ಟನ್ ಆಹಾರ ಧಾನ್ಯಗಳನ್ನು ಸಾಗಿಸಲಾಯಿತು. ಸರಕು ಸಾಗಣೆಯ ವಾರ್ಷಿಕ ಬೆಳವಣಿಗೆಯ ದರವು ಸೆಪ್ಟೆಂಬರ್‌ನಲ್ಲಿ 3.03 ಮೆಲಿಯನ್​ ಟನ್ ಸರಕುಗಳನ್ನು ಲೋಡ್ ಮಾಡಿದ ಬಳಿಕ ಶೇ 4.5ಕ್ಕೆ ಏರಿಕೆಯಾಗಿದೆ. 2019ರ ಅಕ್ಟೋಬರ್‌ಗೆ ಹೋಲಿಸಿದರೆ ಶೇ 8.6ರಷ್ಟು ಬೆಳವಣಿಗೆಯಾಗಿ 3.22 ಮಿಲಿಯನ್​ ಟನ್​ಗೆ ತಲುಪಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.