ನವದೆಹಲಿ: ಪ್ರಯಾಣಿಕರು ಏಪ್ರಿಲ್ 14 ರಂದು ಅಥವಾ ಅದಕ್ಕೂ ಮೊದಲು ಸಾಮಾನ್ಯ ರೈಲುಗಳಲ್ಲಿ ಕಾಯ್ದಿರಿಸಿದ ಎಲ್ಲ ಟಿಕೆಟ್‌ಗಳನ್ನು ರದ್ದುಗೊಳಿಸಲಾಗಿದೆ. ಕಾಯ್ದಿರಿಸಿದ ಹಣ ಮರುಪಾವತಿ ಮಾಡಲಾಗುವುದು ಎಂದು ರೈಲ್ವೆ ಮಂಡಳಿ ಹೇಳಿದೆ.
ನಿಯಮಿತ ಸಮಯದ ರೈಲುಗಳಿಗೆ ಏಪ್ರಿಲ್ 14ರಂದು ಅಥವಾ ಅದಕ್ಕೂ ಮೊದಲು ಕಾಯ್ದಿರಿಸಿದ ಎಲ್ಲ ರೈಲು ಟಿಕೆಟ್‌ಗಳನ್ನು ರದ್ದುಗೊಳಿಸಲಾಗಿದೆ. ಟಕೆಟ್ ದರದ ಪೂರ್ಣ ಮರುಪಾವತಿ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ರಾಷ್ಟ್ರವ್ಯಾಪಿ ಲಾಕ್‌ಡೌನ್ ಅನ್ನು ಮಾರ್ಚ್ 25ರಿಂದ ವಿಧಿಸಲಾಗಿತ್ತು. ಎಲ್ಲ ಪ್ರಯಾಣಿಕ, ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು.
ಮೇ 14ರಂದು ರೈಲ್ವೆಯು ಜೂನ್ 30ರವರೆಗೆ ಕಾಯ್ದಿರಿಸಿದ ಎಲ್ಲ ಸಾಮಾನ್ಯ ರೈಲು ಟಿಕೆಟ್‌ಗಳನ್ನು ರದ್ದುಗೊಳಿಸಿ ಪೂರ್ಣ ಮರುಪಾವತಿಗೆ ನಿರ್ಧರಿಸಿತು. ಜೂನ್‌ನಲ್ಲಿ ರೈಲ್ವೆ ಪ್ರಯಾಣಕ್ಕಾಗಿ ಬುಕ್ಕಿಂಗ್ ಮಾಡಲು ಅವಕಾಶ ನೀಡಿದ್ದ ಲಾಕ್‌ಡೌನ್ ವೇಳೆ ಈ ಟಿಕೆಟ್‌ಗಳನ್ನು ಕಾಯ್ದಿರಿಸಲಾಗಿದೆ.
ನಗರ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರು, ಯಾತ್ರಿಕರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ತಮ್ಮ ತವರಿಗೆ ಮರಳಲು ಮೇ 1ರಿಂದ ಶ್ರಮಿಕ್ ವಿಶೇಷ ರೈಲು ಸೇವೆ ಕಲ್ಪಿಸಿತ್ತು.