ಮುಂಬೈ : 2020ರ ಡಿಸೆಂಬರ್‌ನಲ್ಲಿ ದೇಶೀಯ ಸಂಸ್ಥೆಗಳ ಸಾಗರೋತ್ತರ ಹೂಡಿಕೆ ಶೇ.42ರಷ್ಟು ಕುಸಿದು 1.45 ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.
ವರ್ಷದ ಹಿಂದಿನ ಅವಧಿಯಲ್ಲಿ ಭಾರತದಲ್ಲಿನ ಕಂಪನಿಗಳು ತಮ್ಮ ವಿದೇಶಿ ಸಂಸ್ಥೆಗಳಲ್ಲಿ (ಜಂಟಿ ಉದ್ಯಮಗಳು/ಸಂಪೂರ್ಣ ಸ್ವಾಮ್ಯದ ಘಟಕಗಳು) 2.51 ಬಿಲಿಯನ್ ಡಾಲರ್ನಷ್ಟು ಹೂಡಿಕೆ ಮಾಡಿದ್ದವು.
2020ರ ನವೆಂಬರ್ನಲ್ಲಿ ಒಟ್ಟು ಬಾಹ್ಯ ವಿದೇಶಿ ನೇರ ಹೂಡಿಕೆ (ಒಎಫ್‌ಡಿಐ) 1.06 ಬಿಲಿಯನ್ ಡಾಲರ್ ಆಗಿತ್ತು. ಇದು ಒಂದು ತಿಂಗಳ ಹಿಂದಿನ ಅವಧಿಗೆ ಹೋಲಿಸಿದ್ರೆ ಶೇ.27ರಷ್ಟು ಕಡಿಮೆಯಾಗಿದೆ.
ಪರಿಶೀಲನೆಯ ತಿಂಗಳಲ್ಲಿ ಭಾರತೀಯ ಕಂಪನಿಗಳು ಒಟ್ಟು ಎಫ್‌ಡಿಐ ಹೂಡಿಕೆಯಲ್ಲಿ 775.41 ಮಿಲಿಯನ್ ಡಾಲರ್ ಈಕ್ವಿಟಿ ಇನ್ಫ್ಯೂಷನ್ ರೂಪದಲ್ಲಿ ಮತ್ತು 382.91 ಮಿಲಿಯನ್ ಡಾಲರ್ ಸಾಲದ ರೂಪದಲ್ಲಿದೆ. ಮಾಹಿತಿಯ ಪ್ರಕಾರ 287.63 ಮಿಲಿಯನ್ ಡಾಲರ್ ಹೂಡಿಕೆ ಗ್ಯಾರಂಟಿ ರೂಪದಲ್ಲಿತ್ತು.
ಇದನ್ನೂ ಓದಿ: ಕೊನೊಕೊ ಫಿಲಿಪ್ಸ್ ಶೈಲಿಯಲ್ಲಿ ಭಾರತದ ಸಾಗರೋತ್ತರ 1.4 ಬಿಲಿಯನ್ ಡಾಲರ್ ಆಸ್ತಿ ಬ್ರಿಟನ್ ವಶಕ್ಕೆ!
ಪ್ರಮುಖ ಹೂಡಿಕೆದಾರರಲ್ಲಿ ಒಎನ್‌ಜಿಸಿ ವಿದೇಶ್ ಲಿಮಿಟೆಡ್ 131.85 ಮಿಲಿಯನ್ ಡಾಲರ್ಗಳನ್ನು ಜಂಟಿ ಉದ್ಯಮಗಳಲ್ಲಿ ಹೂಡಿಕೆ ಮಾಡಿದೆ. ಮ್ಯಾನ್ಮಾರ್, ರಷ್ಯಾ, ವಿಯೆಟ್ನಾಂ, ಕೊಲಂಬಿಯಾ, ಬ್ರಿಟಿಷ್ ವರ್ಜಿನ್ ದ್ವೀಪಗಳಲ್ಲಿ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಗಳಲ್ಲಿ ತೊಡಗಿಸಿದೆ.
ಇಂಟಾಸ್ ಫಾರ್ಮಾಸ್ಯುಟಿಕಲ್ಸ್ ಇಂಗ್ಲೆಂಡ್ನಲ್ಲಿ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಲ್ಲಿ 75.22 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಐರ್ಲೆಂಡ್ನಲ್ಲಿ 27.77 ಮಿಲಿಯನ್ ಡಾಲರ್ ಹೂಡಿದೆ.