ETV Bharat / business

ಅಡಮಾನವಿಲ್ಲದೆ ಒಂದೇ ದಿನದಲ್ಲಿ MSMEಗಳಿಗೆ 3,200 ಕೋಟಿ ರೂ. ಸಾಲ ಮಂಜೂರು - collateral free loan for MSME

2020ರ ಜೂನ್1ರ ಒಂದೇ ದಿನದಲ್ಲಿ ಪಿಎಸ್‌ಬಿಗಳು ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆಯ ಮೂಲಕ 3,200 ಕೋಟಿ ರೂ.ನಷ್ಟು ಅಡಮಾನವಿಲ್ಲದೇ ಸಾಲವನ್ನು ಮಂಜೂರು ಮಾಡಿವೆ ಎಂದು ಸೀತಾರಾಮನ್ ಅವರ ಹಣಕಾಸು ಕಚೇರಿ ಟ್ವೀಟ್ ಮೂಲಕ ತಿಳಿಸಿದೆ.

Finance Minister Nirmala Sitharaman
ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್
author img

By

Published : Jun 1, 2020, 7:55 PM IST

ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್​ಗಳು (ಪಿಎಸ್‌ಬಿ) ಜೂನ್ 1ರಂದು ಒಂದೇ ದಿನದಲ್ಲಿ ಎಂಎಸ್‌ಎಂಇ ವಲಯಕ್ಕೆ 3,200 ಕೋಟಿ ರೂ.ಯಷ್ಟು ಅಡಮಾನವಿಲ್ಲದೇ ಸಾಲ ಮಂಜೂರು ಮಾಡಿವೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆಯಡಿ ಸಾಲಗಳನ್ನು ಮಂಜೂರು ಮಾಡಲಾಗಿದೆ. ತುರ್ತು ಕ್ರೆಡಿಟ್ ಲೈನ್‌ ಯೋಜನೆ ನಾನಾ ವ್ಯವಹಾರಗಳಿಗೆ ಕಾರ್ಯನಿರತ ಬಂಡವಾಳ ಒದಗಿಸುತ್ತದೆ. ಪ್ರಸ್ತುತದಲ್ಲಿನ ಕೊರೊನಾ ವೈರಸ್ ಬಿಕ್ಕಟ್ಟು ವ್ಯವಹಾರಗಳಿಗೆ ದ್ರವ್ಯತೆ ಬಿಕ್ಕಟ್ಟಿಗೆ ಕಾರಣ ಆಗುವುದಿಲ್ಲ ಎಂಬುದನ್ನು ಇದು ಖಚಿತಪಡಿಸುತ್ತದೆ.

2020ರ ಜೂನ್1ರ ಒಂದೇ ದಿನದಲ್ಲಿ ಪಿಎಸ್‌ಬಿಗಳು ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆಯ ಮೂಲಕ 3,200 ಕೋಟಿ ರೂ.ಯಷ್ಟು ಅಡಮಾನವಿಲ್ಲದೇ ಸಾಲವನ್ನು ಮಂಜೂರು ಮಾಡಿವೆ ಎಂದು ಸೀತಾರಾಮನ್ ಕಚೇರಿ ಟ್ವೀಟ್ ಮಾಡಿದೆ.

ಮೇಲಾಧಾರ ಇಲ್ಲದ ಮುಕ್ತ ಸಾಲ ಯೋಜನೆಯು ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಉಂಟಾದ ಬಿಕ್ಕಟ್ಟಿನಿಂದ ಕುಸಿದ ಆರ್ಥಿಕತೆಯನ್ನು ಮರಳಿ ತರುವ ಪ್ರಯತ್ನವಾಗಿ, ಕೇಂದ್ರ ಸರ್ಕಾರ ಘೋಷಿಸಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್​ನಲ್ಲಿ ಸೇರ್ಪಡೆ ಆಗಿದೆ.

3,000ಕ್ಕೂ ಹೆಚ್ಚು ಶ್ರೇಣಿ- II ಪಟ್ಟಣಗಳಲ್ಲಿನ ಎಂಎಸ್‌ಎಂಇ ಒಂದೇ ದಿನದಲ್ಲಿ ಇಂದು ಅಡಮಾನವಿಲ್ಲದ ಸಾಲಗಳ ಅಡಿಯಲ್ಲಿ ಸಂಬಳ, ಬಾಡಿಗೆ ಮತ್ತು ಮರುಸ್ಥಾಪನೆ ವೆಚ್ಚಗಳನ್ನು ಪಾವತಿಸಲು ಅನುವು ಮಾಡಿಕೊಡುತ್ತಿದೆ ಎಂದು ಮತ್ತೊಂದು ಟ್ವೀಟ್​ನಲ್ಲಿ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.