ನವದೆಹಲಿ: ಕೊರೊನಾ ಲಾಕ್‌ಡೌನ್‌ನಿಂದಾಗಿ ಬಂದ್ ಆಗಿದ್ದ ಮಾರುತಿ ಶೋ ರೂಂಗಳನ್ನು ಆಯ್ದ ಪ್ರದೇಶಗಳಲ್ಲಿ ತೆರೆಯಲಾಗಿದ್ದು, ಕಳೆದ ಕೆಲ ದಿನಗಳಿಂದ ಹಸ್ತಾಂತರಿಸಲು ಸಾಧ್ಯವಾಗದೇ ಇದ್ದ 5,000 ಕಾರುಗಳನ್ನು ಗ್ರಾಹಕರಿಗೆ ತಲುಪಿಸಲಾಗಿದೆ ಎಂದು ಮಾರುತಿ ಸುಜುಕಿ ಕಂಪನಿ ಹೇಳಿದೆ.
ಪ್ರಸ್ತುತ ದೇಶಾದ್ಯಂತ 1,350 ಶೋರೂಂಗಳನ್ನು ತೆರೆಯಲಾಗಿದೆ. ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಪಾಲಿಸುವಂತೆ ಕಂಪನಿಯ ಎಲ್ಲ ಡೀಲರ್‌ಗಳಿಗೆ ಸೂಚಿಸಿದೆ. ಈ ಮಾರ್ಗಸೂಚಿಗಳ ಪ್ರಕಾರ ಕಾರು ಕೊಳ್ಳುವ ಪ್ರಕ್ರಿಯೆ ಸಂಪೂರ್ಣವಾಗಿ ಸುರಕ್ಷಿತ ವಾಗಿರುತ್ತದೆ ಎಂಬ ಭರವಸೆ ನೀಡಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗದರ್ಶನದಂತೆ ಕಾರುಗಳ ಮಾರಾಟ ಪ್ರಕ್ರಿಯೆ ನಡೆಯುತ್ತಿದೆ ಎಂದು ಎಂಎಸ್‌ಐ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕೆನಿಚಿ ಹೇಳಿದ್ದಾರೆ. 57 ದಿನಗಳ ಲಾಕ್‌ಡೌನ್ ಬಳಿಕ ಇಂದಿನಿಂದ ಗುರುಗ್ರಾಮ್‌ನಲ್ಲಿ ಕಾರು ತಯಾರಿಕಾ ಘಟಕವನ್ನು ತೆರೆಯಲಾಗಿದೆ.
ಡಿಜಿಟಲ್ ವೇದಿಕೆ ಮೂಲಕ ಕಾರುಗಳನ್ನು ಬುಕ್ ಮಾಡುವ ಗ್ರಾಹಕರಿಗೆ ಹೋಂ ಡೆಲಿವರಿ ಸೌಲಭ್ಯವೂ ದೊರೆಯಲಿದೆ. ಎಲ್ಲರೂ ನೂತನ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಕಂಟೇನ್‌ಮೆಂಟ್ ಹಾಗೂ ನಿರ್ಬಂಧಕ್ಕೆ ಒಳಪಡದ ಪ್ರದೇಶಗಳಲ್ಲಿ ಇನ್ನುಳಿದ ಶೋ ರೂಂಗಳನ್ನು ಮುಂದಿನ ದಿನಗಳಲ್ಲಿ ತೆರೆಯಲಾಗುತ್ತದೆ ಎಂದು ಹೇಳಿದ್ದಾರೆ.