ಮುಂಬೈ: ಭಾರತೀಯ ಷೇರು ಮಾರುಕಟ್ಟೆ ಚೇತರಿಕೆ ಕಾಣುತ್ತಿದೆ. ಪ್ರಮುಖ ಖಾಸಗಿ ಬ್ಯಾಂಕ್ಗಳು ವಹಿವಾಟಿನಲ್ಲಿ ಚೇತರಿಕೆ ಕಾಣುತ್ತಿವೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಸ್ಟಾಂಡರ್ಡ್ ಆ್ಯಂಡ್ ಪೂರ್ನ ಸೆನ್ಸೆಕ್ಸ್ 685 ಪಾಯಿಂಟ್ಗಳಷ್ಟು ಅಂದರೆ ಶೇ 2.3ರಷ್ಟು ಏರಿಕೆಯಾಗಿದೆ. ಇದರಿಂದ ಸೆನ್ಸೆಕ್ಸ್ 30,720ಕ್ಕೆ ಮುಟ್ಟಿದೆ. ನಿಫ್ಟಿ 708 ಪಾಯಿಂಟ್ಗಳಷ್ಟು ಏರಿದ್ದು 8,792 ತಲುಪಿದೆ.
ವೈಯಕ್ತಿಕ ಸ್ಟಾಕ್ಗಳಲ್ಲಿ ಇಂಡಸ್ ಇಂಡ್ ಬ್ಯಾಂಕ್ ಶೇ 20ರಷ್ಟು ಇಳಿಕೆ ಕಂಡಿದ್ದು, ಆಕ್ಸಿಸ್ ಬ್ಯಾಂಕ್ ಶೇ 8ರಷ್ಟು ತನ್ನ ವಹಿವಾಟಿನಲ್ಲಿ ಏರಿಕೆ ಕಂಡಿದೆ. ಇನ್ನೊಂದೆಡೆ ಮಹೀಂದ್ರ ಅಂಡ್ ಮಹೀಂದ್ರಾ, ಹೆಚ್ಡಿಎಫ್ಸಿ ಎರಡೂ ಕೂಡಾ ಶೇ 6ರಷ್ಟು ತಮ್ಮ ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.
ಜಾಗತಿಕವಾಗಿ ಕೊರೊನಾ ಸೃಷ್ಟಿಸುತ್ತಿರುವ ಉಪಟಳದಿಂದಾಗಿ ಬಹುಪಾಲು ಷೇರು ಮಾರುಕಟ್ಟೆಗಳಲ್ಲಿ ವ್ಯವಹಾರ ಕುಂಠಿತಗೊಂಡಿದ್ದು, ಭಾರತೀಯ ಮಾರುಕಟ್ಟೆಗಳ ಮೇಲೆಯೂ ಕರಿನೆರಳು ಬೀರುತ್ತಿದೆ.