ETV Bharat / business

ಕೇವಲ ಆರು ವರ್ಷಕ್ಕೆ ಮಿಲಿಯನೇರ್ ಆದ ಬಾಲಕಿ.. ಬಾಲೆಯ ಯಶಸ್ಸಿನ ಹಿಂದಿನ ಗುಟ್ಟೇನು?

ಕೇವಲ 6 ವರ್ಷ ವಯಸ್ಸಿನಲ್ಲೇ ಫ್ಯಾಷನ್ ಲೋಕದಲ್ಲಿ ಕಾಣಿಸಿಕೊಂಡು ಮಿಲಿಯನೇರ್ ಆಗಿ ಗುರುತಿಸಿಕೊಂಡಿದ್ದ ಬಾಲಕಿಯೊಬ್ಬಳು, ಈಗ ತನ್ನದೇ ಆದ ಫ್ಯಾಷನ್ ಲೋಕವನ್ನೇ ಸೃಷ್ಟಿಸಿಕೊಂಡು ಸಾಕಷ್ಟು ಜನಪ್ರಿಯತೆ ಗಳಿಸುತ್ತಿದ್ದಾಳೆ.

luxury life of six years old  millionaire  girl
ಫ್ಯಾಷನ್ ಲೋಕದಲ್ಲಿ ಕಾಲಿಟ್ಟ ಕೇವಲ ಆರು ವರ್ಷಕ್ಕೆ ಮಿಲಿಯನೇರ್ ಆಗಿದ್ದ ಬಾಲಕಿಯ ಯಶೋಗಾಥೆ
author img

By

Published : Jan 28, 2022, 7:57 AM IST

Updated : Jan 28, 2022, 8:41 AM IST

ಯಾರು ಯಾವಾಗ ಏನಾಗುತ್ತಾರೋ, ಬಲ್ಲವರು ಯಾರೂ ಇಲ್ಲ. ಫ್ಯಾಷನ್ ಲೋಕದ ಜನಪ್ರಿಯತೆಗೆ ಒಂದೇ ದಿನದಲ್ಲಿ ಯಾರನ್ನಾದರೂ, ಎಲ್ಲಿಗಾದರೂ ತಂದು ನಿಲ್ಲಿಸುವ ಸಾಮರ್ಥ್ಯವಿದೆ. ಕೇವಲ 6 ವರ್ಷ ವಯಸ್ಸಿನಲ್ಲೇ ಫ್ಯಾಷನ್ ಲೋಕದಲ್ಲಿ ಕಾಣಿಸಿಕೊಂಡು ಮಿಲಿಯನೇರ್ ಆಗಿ ಗುರುತಿಸಿಕೊಂಡಿದ್ದ ಬಾಲಕಿಯೊಬ್ಬಳು, ಈಗ ತನ್ನದೇ ಆದ ಫ್ಯಾಷನ್ ಲೋಕವನ್ನೇ ಸೃಷ್ಟಿಸಿಕೊಂಡು ಜನಪ್ರಿಯತೆ ಮತ್ತು ಹಣ ಗಳಿಸುತ್ತಿದ್ದಾಳೆ.

ಫ್ಯಾಷನ್​ ಡಿಸೈನಿಂಗ್ ಕ್ಷೇತ್ರದಲ್ಲಿ ಅತಿ ಚಿಕ್ಕವಯಸ್ಸಿಗೇ ವಯಸ್ಸಿಗೇ ಹೆಸರು ಮಾಡಿರುವ ಆಕೆಯ ಹೆಸರು ಇಸಾಬೆಲ್ಲಾ ಬ್ಯಾರೆಟ್.. 2021ರಲ್ಲಿ ತಾನೇ ಸ್ವತಂತ್ರವಾದ ಫ್ಯಾಷನ್ ಲೈನ್ ರಚಿಸಿಕೊಂಡಿರುವ ಇಸಾಬೆಲ್ಲಾ ಸೆಪ್ಟೆಂಬರ್​ನಲ್ಲಿ ನಡೆದ ನ್ಯೂಯಾರ್ಕ್ ಫ್ಯಾಷನ್ ವೀಕ್​ನಲ್ಲಿ ಪ್ರಥಮ ಪ್ರದರ್ಶನವನ್ನೂ ನೀಡಿದ್ದಾರೆ.

ಆಕೆಯೇ ಹೇಳುವಂತೆ.. ನಾನು ಚಿಕ್ಕಂದಿನಿದಲೂ ಸಾಕಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ. ಮಕ್ಕಳು ಮತ್ತು ವಯಸ್ಕರಿಗೆ ಉಡುಪುಗಳನ್ನು ತಯಾರಿಸುವುದು ಕಷ್ಟ.. ಒಮ್ಮೊಮ್ಮೆ ಧರಿಸುವ ಡ್ರೆಸ್​ಗಳು ಸಾಕಷ್ಟು ಬಾರಿ ಅವರಿಗೆ ಅಹಿತಕರವಾಗಿರುತ್ತವೆ. ಆದ್ದರಿಂದ ನಾನು ಮಕ್ಕಳು ಮತ್ತು ವಯಸ್ಕರಿಗಾಗಿ ತಂಡವೊಂದನ್ನು ರಚಿಸಿ, ಅವರಿಗೆ ಆರಾಮದಾಯಕ ಉಡುಪುಗಳನ್ನು ತಯಾರಿಸುತ್ತಿದ್ದೇನೆ ಎಂಬುದು ಇಸಾಬೆಲ್ಲಾ ಬ್ಯಾರೆಟ್ ಹೇಳುವ ಮಾತು

ನಾನು ಹೊಸ ಸ್ನೇಹಿತರನ್ನು ಭೇಟಿಯಾಗುತ್ತಿರುತ್ತೇನೆ. ಇದು ನನ್ನ ಖ್ಯಾತಿ ಹೆಚ್ಚಾಗಲು ಕಾರಣ. ಶ್ರೀಮಂತಿಕೆ ಹಣಕ್ಕೆ ಸಂಬಂಧಿಸಿದ್ದು ಅಲ್ಲ. ನಾನು ಸ್ನೇಹಿತರನ್ನು ಭೇಟಿಯಾಗಿ ಸಂತೋಷದಿಂದಿರುವುದೇ ಶ್ರೀಮಂತಿಕೆ ಎಂಬುದು ಇಸಾಬೆಲ್ಲಾ ಬ್ಯಾರೆಟ್ ಅಭಿಪ್ರಾಯವಾಗಿದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಈಗ ಆಕೆ 2 ಮಿಲಿಯನ್ ಡಾಲರ್​ ಆಸ್ತಿಗೆ ಒಡೆತಿಯಾಗಿದ್ದು, ಭಾರತೀಯ ಕರೆನ್ಸಿಯಲ್ಲಿ ಇದರ ಮೌಲ್ಯ 15 ಕೋಟಿ ರೂಪಾಯಿಗಳು. ಆಕೆಯ ಮುಂದಿನ ಪ್ರಾಜೆಕ್ಟ್​ಗಳು ಬಾಲಕಿಯ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂಬುದರಲ್ಲಿ ಸಂದೇಹವಿಲ್ಲ.

ಇಸಾಬೆಲ್ಲಾ ಬ್ಯಾರೆಟ್ ಯಶಸ್ಸಿಗೆ ತಾಯಿ ಸುಸನ್ನಾ ಕಾರಣವಾಗಿದ್ದು, ಮೊದಲಿನಿಂದಲೂ ಆಕೆಗೆ ಬೆಂಬಲವಾಗಿ ನಿಂತಿದ್ದಾರೆ. ಇಸಾಬೆಲ್ಲಾ ಅಭಿರುಚಿಗಳು ದುಬಾರಿಯಾಗಿವೆ. ಅದನ್ನು ನಮ್ಮ ಕುಟುಂಬ ಪ್ರಶಂಸೆ ಮಾಡುತ್ತವೆ. ಯಾವುದೇ ಹೆಸರಾಗಿ ನಾವು ಈ ರೀತಿಯಾಗಿ ಮಾಡುತ್ತಿಲ್ಲ ಎನ್ನುತ್ತಾರೆ ಸುಸನ್ನಾ..

ಇದನ್ನೂ ಓದಿ: ಸಪ್ತಪದಿ ತುಳಿದ ಮೌನಿರಾಯ್: ಅರಿಶಿನ ಶಾಸ್ತ್ರದ ಡ್ಯಾನ್ಸ್​, ಫೋಟೋ ವೈರಲ್

Last Updated : Jan 28, 2022, 8:41 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.