ನವದೆಹಲಿ : ಗ್ರಾಹಕರಿಗೆ ಸಿಹಿಸುದ್ದಿಯೊಂದು ಹೊರ ಬಿದ್ದಿದೆ. ಡಿಸೆಂಬರ್‌ನಿಂದ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದೆ. ಸಾರ್ವಜನಿಕ ವಲಯದ ಕಚ್ಚಾ ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ತಿಂಗಳೂ ಪರಿಶೀಲನೆ ನಡೆಸಲಿವೆ. ಕಚ್ಚಾ ತೈಲ ಬೆಲೆ ಕಡಿಮೆಯಾಗುತ್ತಿರುವ ಹಿನ್ನೆಲೆ ಎಲ್‌ಪಿಜಿ ಬೆಲೆಯೂ ಕಡಿಮೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಆಫ್ರಿಕಾದಲ್ಲಿ ಕಂಡು ಬಂದ ಹೊಸ ಕೋವಿಡ್ ವೈರಸ್ ಓಮಿಕ್ರೋನ್ ಕೂಡ ಆತಂಕ ಸೃಷ್ಟಿಸಿರುವ ಹಿನ್ನೆಲೆ ಬೆಲೆಗಳು ಕಡಿಮೆಯಾಗುವ ಸಾಧ್ಯತೆ ದಟ್ಟವಾಗಿದೆ. ಏಪ್ರಿಲ್ನಿಂದ ಇದೇ ಮೊದಲ ಬಾರಿಗೆ ಕಚ್ಚಾ ತೈಲ ಬೆಲೆ ಕಡಿಮೆಯಾಗಲಿದೆ.
ಶುಕ್ರವಾರ, ಬ್ರೆಂಟ್ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 10 ಅಮೆರಿಕನ್ ಡಾಲರ್ನಷ್ಟು ಕುಸಿದಿದೆ. ಆದ್ದರಿಂದ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳಲ್ಲಿ ಕಡಿತವಾಗಬಹುದು ಎಂದು ನಿರೀಕ್ಷಿಸಲಾಗಿದೆ.
Aadhaar Link Date Extended : ನೌಕರರ ಭವಿಷ್ಯ ನಿಧಿ (EPF) ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡುವ ಗಡುವನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಆಧಾರ್ ಅನ್ನು ಲಿಂಕ್ ಮಾಡದ ಜನರು ನವೆಂಬರ್ 30ರೊಳಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬಹುದಾಗಿದೆ. ಒಂದು ವೇಳೆ ಆಧಾರ್ ಲಿಂಕ್ ಮಾಡದಿದ್ದರೆ, ಪಿಎಫ್ ಹಣ ಅವರ ಖಾತೆಗಳಿಗೆ ಜಮಾ ಆಗುವುದಿಲ್ಲ.
ಇದರ ಹೊರತಾಗಿಯೂ ಇಡಿಎಲ್ಐಗೆ ( Employees Deposit Linked Insurance-EDLI) ಯುಎಎನ್ ಮತ್ತು ಆಧಾರ್ ಲಿಂಕ್ ಮಾಡುವುದನ್ನು EPFO ಕಡ್ಡಾಯಗೊಳಿಸಿದೆ. ಇದನ್ನು ಮಾಡದಿದ್ದಲ್ಲಿ ಉದ್ಯೋಗಿಗಳು ಪ್ರೀಮಿಯಂ ಅನ್ನು ಠೇವಣಿ ಮಾಡಲು ಸಾಧ್ಯವಾಗುವುದಿಲ್ಲ ಮತ್ತು 7 ಲಕ್ಷ ರೂಪಾಯಿವರೆಗಿನ ವಿಮಾ ಪಾಲಿಸಿಯಿಂದ ಹೊರಗುಳಿಯಬೇಕಾಗುತ್ತದೆ.
Bad news for SBI credit card holders : ಎಸ್ಬಿಐ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಜನರಿಗೆ ಇನ್ನು ಕ್ರೆಡಿಟ್ ಕಾರ್ಡ್ಗಳು ಸ್ವಲ್ಪ ಮಟ್ಟಿಗೆ ದುಬಾರಿಯಾಗಲಿವೆ. ಈವರೆಗೆ SBI ಕ್ರೆಡಿಟ್ ಕಾರ್ಡ್ ಕೇವಲ ಬಡ್ಡಿಯನ್ನು ವಿಧಿಸುತ್ತಿತ್ತು. ಆದರೆ, ಡಿಸೆಂಬರ್ 1ರಿಂದ ವಸ್ತುಗಳ ಖರೀದಿ ಮಾಡಲು ಪ್ರಕ್ರಿಯೆ ಶುಲ್ಕ (SBI Processing Fee) ವಿಧಿಸಲಾಗುತ್ತದೆ.
ಇದನ್ನೂ ಓದಿ: ಎಸ್ಬಿಐ ಮೇಲೆ 1 ಕೋಟಿ ರೂ. ವಿತ್ತೀಯ ದಂಡ ವಿಧಿಸಿದ ಆರ್ಬಿಐ