ETV Bharat / business

ಆರನೇ ದಿನ ಸ್ವಲ್ಪ ಚೇತರಿಕೆಯಾದ ಲಕ್ಷ್ಮಿ ವಿಲಾಸ್ ಬ್ಯಾಂಕ್ ಷೇರುಗಳ ಪ್ರಮಾಣ - ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ಬಂಧ

ಕೆಲವು ದಿನಗಳ ಹಿಂದೆ ಲಕ್ಷ್ಮಿ ವಿಲಾಸ್ ಬ್ಯಾಂಕ್​ನ ಗ್ರಾಹಕರು ಹಣ ಹಿಂಪಡೆಯುವ ಮಿತಿಗೆ ರಿಸರ್ವ್ ಬ್ಯಾಂಕ್ ನಿರ್ಬಂಧ ಹೇರಿದ್ದು, ಒಂದು ತಿಂಗಳಿಗೆ ಕೇವಲ 25 ಸಾವಿರ ರೂಪಾಯಿ ಪಡೆಯಬೇಕೆಂದು ಷರತ್ತು ವಿಧಿಸಿತ್ತು..

Lakshmi Vilas Bank
ಲಕ್ಷ್ಮೀ ವಿಲಾಸ್ ಬ್ಯಾಂಕ್
author img

By

Published : Nov 24, 2020, 4:03 PM IST

ನವದೆಹಲಿ : ಸತತ ಆರನೇ ದಿನವೂ ಲಕ್ಷ್ಮಿ ವಿಲಾಸ್​​ ಬ್ಯಾಂಕ್ ತನ್ನ ಷೇರುಗಳ ಮಾರಾಟದ ಒತ್ತಡದಲ್ಲಿದೆ. ಬ್ಯಾಂಕ್​ನ ಮೇಲೆ ಆರ್​ಬಿಐ ಕೆಲವು ನಿರ್ಬಂಧಗಳನ್ನು ಹೇರಿದ ನಂತರ ಇದೇ ಮೊದಲ ಬಾರಿಗೆ ಷೇರುಗಳಲ್ಲಿ ಸ್ವಲ್ಪ ಹೆಚ್ಚಳ ಕಂಡಿದೆ. ಸೋಮವಾರ ಶೇ.48ರಷ್ಟಿದ್ದ ಷೇರುಗಳು ಈಗ ಶೇ.53ಕ್ಕೆ ಏರಿಕೆ ಕಂಡಿವೆ.

ಷೇರುಗಳ ಪ್ರಮಾಣ ಏರಿಕೆ ಕಂಡಿದ್ದರೂ ಬಾಂಬೆ ಷೇರು ಮಾರುಕಟ್ಟೆಯಲ್ಲಿ ಮಂಗಳವಾರ ಲಕ್ಷ್ಮಿ ವಿಲಾಸ್​ ಬ್ಯಾಂಕ್​ ಷೇರುಗಳ ಬೆಲೆಯಲ್ಲಿ ಶೇ.9.88ರಷ್ಟು ಕುಸಿದಿದ್ದು, ಪ್ರತಿ ಷೇರಿನ ಬೆಲೆ 7.30 ರೂಪಾಯಿಗೆ ತಲುಪಿದೆ.

ಲಕ್ಷ್ಮಿ ವಿಲಾಸ್ ಬ್ಯಾಂಕ್​ಗೆ ವಿತ್​​ಡ್ರಾ ಮಿತಿ : 'ಗ್ರಾಹಕರ ಹಣ ಸುರಕ್ಷಿತ'ವೆಂದ ಆರ್‌ಬಿಐ ನೇಮಿತ ನಿರ್ವಾಹಕ

‘ರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ (ಎನ್​ಎಸ್​ಇ)ಯಲ್ಲಿಯೂ ಕೂಡ ಶೇ.9.88ರಷ್ಟು ಕುಸಿತ ಕಂಡಿದ್ದು, ಇಲ್ಲಿಯೂ ಒಂದು ಷೇರಿನ ಬೆಲೆ 7.30 ರೂಪಾಯಿಗೆ ತಲುಪಿದೆ. ಅಂದರೆ ಸದ್ಯಕ್ಕೆ ಲಕ್ಷ್ಮಿ ವಿಲಾಸ್ ಬ್ಯಾಂಕ್ ಷೇರಿನ ಬೆಲೆ ದಿನವೊಂದರಲ್ಲಿ ಎನ್​ಎಸ್​ಇ ಅನುಮತಿ ನೀಡುವ ಕನಿಷ್ಠ ವ್ಯಾಪಾರದ ಮಿತಿಯಾಗಿದೆ.

ಕೆಲವು ದಿನಗಳ ಹಿಂದೆ ಲಕ್ಷ್ಮಿ ವಿಲಾಸ್ ಬ್ಯಾಂಕ್​ನ ಗ್ರಾಹಕರು ಹಣ ಹಿಂಪಡೆಯುವ ಮಿತಿಗೆ ರಿಸರ್ವ್ ಬ್ಯಾಂಕ್ ನಿರ್ಬಂಧ ಹೇರಿದ್ದು, ಒಂದು ತಿಂಗಳಿಗೆ ಕೇವಲ 25 ಸಾವಿರ ರೂಪಾಯಿ ಪಡೆಯಬೇಕೆಂದು ಷರತ್ತು ವಿಧಿಸಿತ್ತು.

ಹಣಕಾಸು ವಲಯವನ್ನು ಸುಸ್ಥಿತಿಗೆ ತರಲು ರಿಸರ್ವ್ ಬ್ಯಾಂಕ್ ಈ ಕ್ರಮ ತೆಗೆದುಕೊಂಡಿರುವುದಾಗಿ ಹೇಳಿಕೆ ನೀಡಿದ್ದು, ಇದಕ್ಕೂ ಮೊದಲು ಯೆಸ್​ ಬ್ಯಾಂಕ್ ಹಾಗೂ ಮಹಾರಾಷ್ಟ್ರ ಸಹಕಾರ ಬ್ಯಾಂಕ್​ಗಳಿಗೂ ಕೂಡ ಇದೇ ರೀತಿ ನಿರ್ಬಂಧ ಹೇರಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.