ETV Bharat / business

ಡೊನಾಲ್ಡ್​ ಟ್ರಂಪ್​ಗೆ ಭಾರತ ಪ್ರೀತಿ ಓಕೆ... ಆದ್ರೆ, ಚೀನಾ, ಪಾಕ್​ಗೆ ಭೀತಿ ಏಕೆ..? ​ - ಭಾರತದಲ್ಲಿ ಡೊನಾಲ್ಡ್ ಟ್ರಂಪ್

ಇಂಡೋ-ಅಮೆರಿಕ ಸಂಬಂಧ ಕೇವಲ ವ್ಯಾಪಾರಕ್ಕೆ ಮಾತ್ರ ಸೀಮಿತವಲ್ಲ. ರಕ್ಷಣಾ ಮತ್ತು ಇಂಧನ ಕ್ಷೇತ್ರಗಳಲ್ಲಿನ ಕಾರ್ಯತಂತ್ರದ ಸಹಕಾರ ಸೇರಿದಂತೆ ಸಮಸ್ಯೆಗಳ ಸಂಪೂರ್ಣ ಪರಿಹಾರದ ಮಾರ್ಗಗಳನ್ನು ಒಳಗೊಂಡಿವೆ ಎಂದು ಮಾಜಿ ರಾಯಭಾರಿ ರಾಜೀವ್ ಭಾಟಿಯಾ ಹೇಳಿದ್ದಾರೆ.

Modi, Trump
ಮೋದಿ, ಟ್ರಂಪ್
author img

By

Published : Feb 24, 2020, 4:23 PM IST

ನವದೆಹಲಿ: ಭಾರತ- ಅಮೆರಿಕ ನಡುವೆ ಯಾವುದೇ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕದಿದ್ದರೂ ಸಹ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚೊಚ್ಚಲ ಭಾರತ ಭೇಟಿ ನಿರ್ಣಾಯಕವಾಗಿದೆ ಎಂದು ಮಾಜಿ ರಾಜತಾಂತ್ರಿಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ರಕ್ಷಣಾ, ಭಯೋತ್ಪಾದನೆ ನಿಗ್ರಹ ಮತ್ತು ಇಂಧನ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರ ವೃದ್ಧಿಸಲು ಈ ಭೇಟಿ ನೆರವಿಗೆ ಬರಲಿದೆ ಎಂದು ವ್ಯಾಖ್ಯಾನಿಸಿದ್ದಾರೆ. ಇಂಡೋ-ಅಮೆರಿಕ ಸಂಬಂಧ ಕೇವಲ ವ್ಯಾಪಾರಕ್ಕೆ ಮಾತ್ರ ಸೀಮಿತವಲ್ಲ. ರಕ್ಷಣಾ ಮತ್ತು ಇಂಧನ ಕ್ಷೇತ್ರಗಳಲ್ಲಿನ ಕಾರ್ಯತಂತ್ರದ ಸಹಕಾರ ಸೇರಿದಂತೆ ಸಮಸ್ಯೆಗಳ ಸಂಪೂರ್ಣ ಪರಿಹಾರದ ಮಾರ್ಗಗಳನ್ನು ಒಳಗೊಂಡಿವೆ ಎಂದು ಮಾಜಿ ರಾಯಭಾರಿ ರಾಜೀವ್ ಭಾಟಿಯಾ ಹೇಳಿದ್ದಾರೆ.

ಅಧ್ಯಕ್ಷ ಟ್ರಂಪ್ ಅವರ ಭಾರತ ಭೇಟಿಯ ಸಮಯದಲ್ಲಿ ಎರಡೂ ರಾಷ್ಟ್ರಗಳು ಸೀಮಿತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಬಹುದು ಎಂಬ ಬಲವಾದ ಸೂಚನೆಗಳು ಇದ್ದವು. ಅದು 10 ಬಿಲಿಯನ್ ಡಾಲರ್ ದ್ವಿಪಕ್ಷೀಯ ವ್ಯಾಪಾರ ಒಳಗೊಂಡಿರುತ್ತದೆ ಎಂಬುದಾಗಿತ್ತು. ಆದರೆ, ಅಮೆರಿಕದ ನಾಯಕ ಕಳೆದ ವಾರ 'ವ್ಯಾಪಾರ ಒಪ್ಪಂದ ಇರುವುದಿಲ್ಲ' ಎಂದು ಸ್ಪಷ್ಟಪಡಿಸಿದರು.

ನಾನು ಮುಂದಿನ ದಿನಗಳಲ್ಲಿ ದೊಡ್ಡ ವ್ಯವಹಾರವನ್ನು ಉಳಿಸಿಕೊಳ್ಳುತ್ತಿದ್ದೇನೆ ಎಂದು ಅಧ್ಯಕ್ಷ ಟ್ರಂಪ್, ಭಾರತಕ್ಕೆ ಹೊರಡುವ ಕೆಲ ದಿನಗಳ ಮುನ್ನ ಹೇಳಿದ್ದರು. ಚುನಾವಣೆಗೂ ಮುನ್ನ ಇದನ್ನು ಮಾಡಲಾಗುತ್ತದೆಯೇ ಎಂಬುದು ನನಗೆ ತಿಳಿದಿಲ್ಲ. ಆದರೆ, ನಾವು ಭಾರತದೊಂದಿಗೆ ಬಹಳ ದೊಡ್ಡ ವ್ಯವಹಾರ ಮಾಡಲಿದ್ದೇವೆ ಎಂದಿದ್ದರು.

ನವೆಂಬರ್ ಮೊದಲ ವಾರದಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯುವುದರಿಂದ ಸಾಧಾರಣ ವ್ಯಾಪಾರ ಒಪ್ಪಂದವು ಕೆಲ ತಿಂಗಳಷ್ಟೆ ಮುಂದೂಡಿಕೆ ಆಗಿದೆ ಎಂಬ ಅನುಮಾನವನ್ನು ಅದು ದೃಢಪಡಿಸಿತು. ರಾಜೀವ್ ಭಾಟಿಯಾ ಅವರಂತಹ ವಿದೇಶಿ ತಜ್ಞರು, ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಭಾರತದ ಗಣ್ಯ ವಿದೇಶಿ ಸೇವೆಯೊಂದಿಗೆ ವಿದೇಶಗಳಲ್ಲಿ ಹಲವು ಭಾರತೀಯ ನಿಯೋಗಗಳಿಗೆ ಮುಖ್ಯಸ್ಥರಾಗಿದ್ದರು. ಅಧ್ಯಕ್ಷ ಟ್ರಂಪ್ ಅವರ ಭಾರತ ಭೇಟಿ ದ್ವಿಪಕ್ಷೀಯ ಸಂಬಂಧಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಬಗ್ಗೆ ಆಶಾವಾದವನ್ನು ಅವರು ಹೊಂದಿದ್ದಾರೆ.

ಅಮೆರಿಕ ಅಧ್ಯಕ್ಷರು ವಿಶ್ವದ ಅತ್ಯಂತ ಶಕ್ತಿಶಾಲಿ ನಾಯಕರಾಗಿದ್ದಾರೆ. ಭಾರತ ಭೇಟಿಯನ್ನು ವಿಶ್ವದಾದ್ಯಂತ ಕುತೂಹಲದಿಂದ ವೀಕ್ಷಿಸುತ್ತದೆ ಎಂದು ರಾಜೀವ್ ಭಾಟಿಯಾ 'ಈಟಿವಿ ಭಾರತ್​'ಗೆ ತಿಳಿಸಿದರು. ಡೊನಾಲ್ಡ್ ಟ್ರಂಪ್ ಅವರ ಭೇಟಿ, ಪೂರ್ಣ ಪ್ರಮಾಣದ ಸಂಬಂಧದ ಕಾರ್ಯತಂತ್ರದ ಸಹಭಾಗಿತ್ವವನ್ನು ಬಲಪಡಿಸುತ್ತದೆ. ಭಯೋತ್ಪಾದನೆ ನಿಗ್ರಹ ಚಟುವಟಿಕೆಗಳ ಕ್ಷೇತ್ರದಲ್ಲಿ ಇತರ ವಿಷಯಗಳ ನಡುವೆ ಸಹಕಾರವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.

ಅಮೆರಿಕ ಅಧ್ಯಕ್ಷರ ಭಾರತ ಭೇಟಿಯು ಚೀನಾ, ದಕ್ಷಿಣ ಏಷ್ಯಾ ಮತ್ತು ಅಫ್ಘಾನಿಸ್ತಾನದ ಬಗ್ಗೆ ಸಾಮಾನ್ಯ ದೃಷ್ಟಿಕೋನ ಇದೆ ಎಂದು ಸಾಬೀತುಪಡಿಸಲು ಅದು ಸಹಾಯ ಮಾಡುತ್ತದೆ ಎಂದರು. ಭಾರತ ಮತ್ತು ಅಮೆರಿಕ ಎರಡೂ ಅಫ್ಘನ್​-ಪಾಕ್ ಗಡಿ ಪ್ರದೇಶದಿಂದ ಹೊರಹೊಮ್ಮುವ ಭಯೋತ್ಪಾದನೆ ಕೃತ್ಯಗಳಿಂದ ಬಳಲುತ್ತಿದ್ದು, ಈ ಪ್ರದೇಶದ ಸುರಕ್ಷತೆ ಮತ್ತು ಸ್ಥಿರತೆಯ ಬಗ್ಗೆ ಸಾಮಾನ್ಯ ಕಾಳಜಿಗಳನ್ನು ಹಂಚಿಕೊಳ್ಳಲಿವೆ.

ದಕ್ಷಿಣ ಚೀನಾ ಸಮುದ್ರ ಸೇರಿದಂತೆ ಇಂಡೋ-ಪೆಸಿಫಿಕ್ ಸಾಗರದಲ್ಲಿ ಸಂಚಾರ ಸ್ವಾತಂತ್ರ್ಯದ ಬಗ್ಗೆ ಭಾರತ ಮತ್ತು ಅಮೆರಿಕ ಏಕರೂಪದ ಅಭಿಮತ ಹೊಂದಿವೆ. ಇಲ್ಲಿ ಚೀನಾ ತನ್ನ ನೆರೆಯ ರಾಷ್ಟ್ರಗಳಾದ ಜಪಾನ್, ವಿಯೆಟ್ನಾಂ ಮತ್ತು ಫಿಲಿಪೈನ್ಸ್‌ನೊಂದಿಗೆ ಪ್ರಾದೇಶಿಕ ಹಕ್ಕುಗಳ ಬಗ್ಗೆ ಮತ್ತು ಸಾಗರದೊಳಗಿನ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಹಕ್ಕಿನ ಬಗ್ಗೆ ಆಗಾಗ ಕಿಡಿಕಾರುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.