ETV Bharat / business

ಬ್ಯಾಂಕಿಂಗ್‌ ಕೇವಲ ಲಾಭ ಮಾಡುವ ವಹಿವಾಟುದಾರನೇ? - ಖಾಸಗೀಕರಣ ಲೆಟೆಸ್ಟ್​ ನ್ಯೂಸ್​

ಇತ್ತೀಚೆಗೆ ವಿಲೀನವಾದ ಆರು ಬ್ಯಾಂಕ್‌ಗಳನ್ನು ಇದರಿಂದ ಹೊರಗಿಡುವಂತೆ ನೀತಿ ಆಯೋಗ ಶಿಫಾರಸು ಮಾಡಿದೆ. ಅವುಗಳೆಂದರೆ, ಪಂಜಾಬ್ ನ್ಯಾಷನಲ್ ಬ್ಯಾಂಕ್‌, ಯೂನಿಯನ್ ಬ್ಯಾಂಕ್‌, ಕೆನರಾ ಬ್ಯಾಂಕ್, ಇಂಡಿಯನ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ ಮತ್ತು ಸ್ಟೇಟ್‌ಬ್ಯಾಂಕ್ ಆಫ್‌ ಇಂಡಿಯಾ. ವರದಿಗಳ ಪ್ರಕಾರ ಇಂಡಿಯನ್‌ ಓವರ್‌ಸೀಸ್ ಬ್ಯಾಂಕ್‌, ಸೆಂಟ್ರಲ್ ಬ್ಯಾಂಕ್ ಆಫ್ಇಂಡಿಯಾ ಮತ್ತು ಯುಕೋ ಬ್ಯಾಂಕ್‌ ಖಾಸಗೀಕರಣ ಪ್ರಕ್ರಿಯೆಯನ್ನು ತಕ್ಷಣ ತೆಗೆದುಕೊಳ್ಳುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.

Banking
Banking
author img

By

Published : Apr 15, 2021, 4:57 PM IST

ಪ್ರಸ್ತುತ ವಿತ್ತ ವರ್ಷದಲ್ಲಿ ಸಾರ್ವಜನಿಕ ವಲಯದ ಎರಡು ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡುವ ಕುರಿತು ಕೇಂದ್ರ ಆಯವ್ಯಯದಲ್ಲಿ ಘೋಷಿಸಿದ ಹಣಕಾಸು ಸಚಿವೆ, ಭಾರತದಲ್ಲಿ ಬ್ಯಾಂಕಿಂಗ್‌ ವಲಯದಲ್ಲಿ ಮಹತ್ವದ ಬದಲಾವಣೆ ತರುವ ಸರ್ಕಾರದ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ. 51 ವರ್ಷಗಳ ಹಿಂದೆ ಪ್ರಮುಖ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸುವ ಭಾರತ ಸರ್ಕಾರದ ನಿರ್ಧಾರದಿಂದ ಹಿಂದೆ ಸರಿಯುವ ನಿಟ್ಟಿನಲ್ಲಿ ಇದು ಅತ್ಯಂತ ಮಹತ್ವದ ನಿಲುವಾಗಿದೆ. ಹತ್ತು ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ನಾಲ್ಕು ಬ್ಯಾಂಕ್‌ಗಳಲ್ಲಿ ವಿಲೀನಗೊಳಿಸುವ ಬೃಹತ್‌ ಉಪಕ್ರಮದ ನಂತರದಲ್ಲಿ, ದೇಶದ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಸಂಖ್ಯೆ 27 ರಿಂದ 12 ಕ್ಕೆ ಕುಸಿದಿದೆ.

ಬ್ಯಾಂಕಿಂಗ್, ವಿಮೆ ಮತ್ತು ಹಣಕಾಸು ಸೇವೆಗಳನ್ನು ಸರ್ಕಾರ ಮಹತ್ವದ ವಲಯಗಳು ಎಂದು ವರ್ಗೀಕರಿಸಲಾಗಿದ್ದು, ಈ ವಲಯದ ಸಾರ್ವಜನಿಕ ಉದ್ದಿಮೆಗಳಲ್ಲಿ ಅತ್ಯಂತ ಕನಿಷ್ಠ ಅಸ್ತಿತ್ವವನ್ನು ಹೊಂದುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಹೀಗಾಗಿ, ಈ ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣ ಮಾಡುವ ಪ್ರಕ್ರಿಯೆಯನ್ನು ನರೇಂದ್ರ ಮೋದಿ ಸರ್ಕಾರದ ಬೃಹತ್‌ ಖಾಸಗೀಕರಣ ಯೋಜನೆಯ ಆರಂಭಿಕ ಹಂತ ಎಂದು ಭಾವಿಸಬಹುದಾಗಿದೆ ಮತ್ತು ಈ ಯೋಜನೆಯ ಭಾಗವಾಗಿ ವಿತ್ತವರ್ಷ 2021-22 ರಲ್ಲಿ 1.75ಲಕ್ಷ ಕೋಟಿ ರೂ. ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.

ಇತ್ತೀಚೆಗೆ ವಿಲೀನವಾದ ಆರು ಬ್ಯಾಂಕ್‌ಗಳನ್ನು ಇದರಿಂದ ಹೊರಗಿಡುವಂತೆ ನೀತಿ ಆಯೋಗ ಶಿಫಾರಸು ಮಾಡಿದೆ. ಅವುಗಳೆಂದರೆ, ಪಂಜಾಬ್ ನ್ಯಾಷನಲ್ ಬ್ಯಾಂಕ್‌, ಯೂನಿಯನ್ ಬ್ಯಾಂಕ್‌, ಕೆನರಾ ಬ್ಯಾಂಕ್, ಇಂಡಿಯನ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ ಮತ್ತು ಸ್ಟೇಟ್ ‌ಬ್ಯಾಂಕ್ ಆಫ್‌ ಇಂಡಿಯಾ. ವರದಿಗಳ ಪ್ರಕಾರ ಇಂಡಿಯನ್‌ ಓವರ್‌ಸೀಸ್ ಬ್ಯಾಂಕ್‌, ಸೆಂಟ್ರಲ್ ಬ್ಯಾಂಕ್ ಆಫ್ಇಂಡಿಯಾ ಮತ್ತು ಯುಕೋ ಬ್ಯಾಂಕ್‌ ಖಾಸಗೀಕರಣ ಪ್ರಕ್ರಿಯೆಯನ್ನು ತಕ್ಷಣ ತೆಗೆದುಕೊಳ್ಳುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.

ಯಾಕೆಂದರೆ ಈ ಬ್ಯಾಂಕ್‌ಗಳ ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕಠಿಣ ಕ್ರಮವನ್ನು ವಿಧಿಸಿದ್ದು, ಅವುಚಾಲ್ತಿಯಲ್ಲಿವೆ. ಇದರಿಂದಾಗಿ ಪಂಜಾಬ್ ಆಂಡ್ ಸಿಂದ್‌ ಬ್ಯಾಂಕ್‌, ಬ್ಯಾಂಕ್ ಆಫ್‌ ಮಹಾರಾಷ್ಟ್ರ ಮತ್ತು ಬ್ಯಾಂಕ್‌ ಆಫ್‌ ಇಂಡಿಯಾ ಖಾಸಗೀಕರಣಕ್ಕೆ ಲಭ್ಯವಾಗುತ್ತವೆ. ಒಟ್ಟಾರೆಯಾಗಿ, ಯಾವ ಎರಡು ಪಿಎಸ್‌ಬಿಗಳನ್ನು ಖಾಸಗೀಕರಣ ಮಾಡಲಾಗುತ್ತದೆ ಎಂಬ ಬಗ್ಗೆ ಸರ್ಕಾರ ಸ್ಪಷ್ಟತೆ ನೀಡಿಲ್ಲವಾಗಿದ್ದರಿಂದ, ಪಿಎಸ್‌ಬಿಗಳ ಉದ್ಯೋಗಿಗಳಲ್ಲಿ ತಮ್ಮ ಭವಿಷ್ಯದ ಬಗ್ಗೆ ಆತಂಕ ಹೆಚ್ಚಳವಾಗುವಂತೆ ಮಾಡಿದೆ.

ಖಾಸಗೀಕರಣ ಯಾಕೆ ಬೇಕು?

ದಿನದಿಂದ ದಿನಕ್ಕೆ ಪಿಎಸ್‌ಬಿಗಳ ಮರುಪಾವತಿಯಾಗದ ಸಾಲ (ಎನ್‌ಪಿಎಗಳು) ಪ್ರಮಾಣ ಹೆಚ್ಚಳವಾಗುತ್ತಿರುವುದು ಗಂಭೀರ ಸವಾಲಾಗಿ ಪರಿಣಮಿಸುತ್ತಿದೆ. ಕೋವಿಡ್‌ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ, ಆರ್ಥಿಕ ಸನ್ನಿವೇಶ ಸಂಕಷ್ಟಕ್ಕೀಡಾಗಿದೆ. ಇದರಿಂದಾಗಿ ಎನ್‌ಪಿಎ ಅನುಪಾತವು 2020 ಸೆಪ್ಟೆಂಬರ್‌ನಲ್ಲಿ 7.5% ಇಂದ 2021 ಸೆಪ್ಟೆಂಬರ್‌ಗೆ 13.5% ಗೆ ಏರಿಕೆಯಾಗುತ್ತದೆ ಎಂದು ಆರ್‌ಬಿಐನ ಇತ್ತೀಚಿನ ಹಣಕಾಸು ಸ್ಥಿರತೆ ವರದಿಯಲ್ಲಿ ವರದಿ ಮಾಡಲಾಗಿದೆ. ಇದರಿಂದ ಸರ್ಕಾರವು ಪಿಎಸ್‌ಬಿಗಳಿಗೆ ಇನ್ನಷ್ಟು ಬಂಡವಾಳವನ್ನು ಹೂಡುವ ಅಗತ್ಯ ಮೂಡುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಮರು ಬಂಡವಾಳ ಬಾಂಡ್‌ಗಳು ಮತ್ತು ಬಂಡವಾಳ ಹೂಡಿಕೆಯ ಮೂಲಕ ಭಾರಿ ಬಂಡವಾಳವನ್ನು ಹೂಡಿಕೆ ಮಾಡಿದೆ. ರೂ.70,000 ಕೋಟಿ (ವಿತ್ತ ವರ್ಷ 2019), 80,000 ಕೋಟಿ ರೂ. (ವಿತ್ತವರ್ಷ 2018) ಮತ್ತು ವಿತ್ತವರ್ಷ 2019 ರಲ್ಲಿ ಮರುಬಂಡವಾಳೀಕರಣ ಬಾಂಡ್‌ಗಳ ರೂಪದಲ್ಲಿ 1.06 ಲಕ್ಷ ಕೋಟಿ ಅನ್ನು ಸರ್ಕಾರ ಹೂಡಿಕೆ ಮಾಡಿದೆ.

ತೆರಿಗೆದಾರರು ಕಷ್ಟಪಟ್ಟು ದುಡಿದ 3.19 ಟ್ರಿಲಿಯನ್ ರೂಪಾಯಿಯನ್ನು ಪಿಎಸ್‌ಬಿಗಳು ಸುಸ್ಥಿತಿಯಲ್ಲಿ ನಡೆಯುತ್ತಿರುವುದಕ್ಕಾಗಿ 2014-19ರ ಅವಧಿಯಲ್ಲಿ ಸುರಿಯಲಾಗಿದೆ. ಆಯ್ದ ಪಿಎಸ್‌ಬಿಗಳ ಖಾಸಗೀಕರಣವನ್ನು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ, ಲಾಭಾಂಶವನ್ನು ಖಚಿತಪಡಿಸುವುದು, ಉತ್ಪಾದಕತೆ ಸುಧಾರಿಸುವುದು ಮತ್ತು ಗ್ರಾಹಕ ಸೇವೆಯನ್ನು ವರ್ಧಿಸುವುದು ಹಾಗೂ ಇತರ ಸಮಸ್ಯೆಗಳು ಇನ್ನೂ ಸರ್ಕಾರದ ಮುಂದೆ ಬಾಕಿ ಉಳಿದಿವೆ. ಇದನ್ನು ಸರ್ಕಾರದ ಅಸಾಮರ್ಥ್ಯ ಅಥವಾ ಅದಕ್ಷತೆ ಎಂದೂಪರಿಗಣಿಸಬಹುದಾಗಿದ್ದು, ಕಾರ್ಪೊರೇಟ್‌ ವಲಯದಲ್ಲಿನ ಪ್ರಭಾವಿ ಸುಸ್ತಿದಾರರಿಂದ ಸಾಲ ವಸೂಲಿ ಮಾಡುವಲ್ಲಿ ವಿಫಲವಾಗಿರುವುದು ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯೂ ಕಂಡು ಬರುತ್ತಿದೆ.

ಪಿಎಸ್‌ಬಿಗಳ ಮಹತ್ವದ ಪಾತ್ರ ಲಾಭಾಂಶವೊಂದನ್ನೇ ಗಮನದಲ್ಲಿಟ್ಟುಕೊಂಡು ಭಾರತೀಯ ಪಿಎಸ್‌ಬಿಗಳ ಕಾರ್ಯಕ್ಷಮತೆಯನ್ನು ಅತ್ಯಂತ ಕಳಪೆಯಾಗಿದೆ ಎಂದು ಸರ್ಕಾರವು ಪರಿಗಣಿಸಿದ್ದಕ್ಕೆ ಬ್ಯಾಂಕಿಂಗ್‌ ವಲಯದ ಪರಿಣಿತರಿಂದ ಟೀಕೆಯೂ ವ್ಯಕ್ತವಾಗಿದೆ. ಪ್ರಮುಖ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿದ ನಂತರದಲ್ಲಿ ಅತ್ಯಂತ ಹಿಂದುಳಿದ ವರ್ಗದವರಿಗೂ ಬ್ಯಾಂಕಿಂಗ್‌ ಸೇವೆಗಳನ್ನು ಒದಗಿಸುವ ಅಭಿವೃದ್ಧಿಗುರಿಯನ್ನು ಸರ್ಕಾರ ಈ ಸಮಯದಲ್ಲಿ ನಿರ್ಲಕ್ಷಿಸಿದೆ. “ರಾಷ್ಟ್ರೀಕರಣದ ನಂತರ ಭಾರತದ ಬ್ಯಾಂಕಿಂಗ್‌ ವಲಯದ ವ್ಯಾಪ್ತಿ ಮತ್ತು ಹರವು ಹೆಚ್ಚಳವಾಗಿದೆ. ಈ ವೇಗವನ್ನು ಇತರ ಯಾವ ದೇಶಕ್ಕೂ ಹೋಲಿಕೆ ಮಾಡಲಾಗದು” ಎಂದು ಅರ್ಥಶಾಸ್ತ್ರದಲ್ಲಿ ನೊಬೆಲ್‌ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ ಹೇಳಿದ್ದಾರೆ.

ಪಿಎಸ್‌ಬಿಗಳನ್ನು ಈ ರೀತಿ ವ್ಯಾಪಕವಾಗಿ ವಿಸ್ತರಿಸಿದ್ದರಿಂದಾಗಿ ಸರ್ಕಾರಗಳು ಸಮಗ್ರ ಅಭಿವೃದ್ಧಿಯ ಸಾಮಾಜಿಕ ಆರ್ಥಿಕ ಅಡೆತಡೆಗಳನ್ನು ನಿವಾರಿಸಲು ಅನುವಾಗಿದೆ. ಸಮಾಜದ ಹಿಂದುಳಿದ ಸಮುದಾಯಗಳಾದ ಕೃಷಿ ಸಮುದಾಯ, ಸಣ್ಣ ವಹಿವಾಟುದಾರರು ಮತ್ತು ಗ್ರಾಮೀಣ ಪ್ರದೇಶದಲ್ಲಿನ ಕೃಷಿಯೇತರ ವಲಯದ ಜನರಿಗೆ ಹಣಕಾಸು ಸೌಲಭ್ಯವನ್ನು ಒದಗಿಸಿ ಉದ್ಯೋಗ ಸೃಷ್ಟಿ ಮತ್ತು ಬಡತನ ನಿರ್ಮೂಲನೆಯಲ್ಲಿ ಸಹಾಯಕ್ಕೆ ನೆರವಾಗಿದೆ. ರಾಜಕೀಯ ನಿರ್ಧಾರಗಳಿಂದ ಸಂತ್ರಸ್ತ ಪಿಎಸ್‌ಬಿಗಳು ಭಾರತದಂತಹ ಬೆಳೆಯುತ್ತಿರುವ ಆರ್ಥಿಕತೆಗೆ ಬ್ಯಾಂಕಿಂಗ್ ವಲಯದ ಖಾಸಗೀಕರಣವು ಆರೋಗ್ಯಕರವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುವ ಆರ್ಥಿಕ ತಜ್ಞರಲ್ಲೇ ಭಿನ್ನಾಭಿಪ್ರಾಯವಿದೆ. ಉದಾಹರಣೆಗೆ, ಬ್ಯಾಂಕ್‌ಗಳ ಸಾಲ ಸೌಲಭ್ಯಕ್ಕೆ ಆರ್ಥಿಕ ಪ್ರಗತಿಯು ಅತ್ಯಂತನಿಕಟವಾಗಿ ಸಂಬಂಧ ಹೊಂದಿದೆ ಎಂದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಹೊಂದಿರುವ ಬ್ಯಾಂಕಿಂಗ್‌ ಪರಿಣಿತ ಮತ್ತು ಅರ್ಥಶಾಸ್ತ್ರಜ್ಞ ವೈ.ವಿ.ರೆಡ್ಡಿ ಹೇಳುತ್ತಾರೆ. ಭಾರತವು ಜಪಾನ್ ಮತ್ತು ಜರ್ಮನಿಯನ್ನು ಉದಾಹರಣೆಯನ್ನಾಗಿ ತೆಗೆದುಕೊಳ್ಳಬೇಕು.

ಅಲ್ಲಿ ಬ್ಯಾಂಕ್‌ಗಳಿಂದ ಸರ್ಕಾರಗಳು ಬಂಡವಾಳ ತೆಗೆದುಕೊಳ್ಳುತ್ತವೆ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಅವನ್ನು ಬಳಸಿಕೊಳ್ಳುತ್ತವೆ. ಆದರೆ, ಭಾರತದಲ್ಲಿನ ಪಿಎಸ್‌ಬಿಗಳು ಸರ್ಕಾರದ ನೀತಿ ನಿರ್ಧಾರಗಳ ಸಂತ್ರಸ್ತನಾಗಿದೆ. ಐಡಿಬಿಐ, ಐಸಿಐಸಿಐ ಮತ್ತು ಐಡಿಎಫ್‌ಸಿಯನ್ನು ಎಲ್ಲ ಉದ್ದೇಶ ಬ್ಯಾಂಕ್‌ಗಳನ್ನಾಗಿ ಪರಿವರ್ತಿಸಿದ ನಂತರದಲ್ಲಿ ದೊಡ್ಡ ಕಾರ್ಪೊರೇಟ್‌ಗಳ ಮೂಲಸೌಕರ್ಯ ಯೋಜನೆಗಳಿಗೆ ಭಾರಿ ಮೊತ್ತದ ಸಾಲವನ್ನು ನೀಡುವ ಅನಿವಾರ್ಯ ಒದಗಿದೆ. ಎನ್‌ಪಿಎಗಳು ಮತ್ತು ಎನ್‌ಪಿಎ ಅನುಪಾತವು ಖಾಸಗಿ ಬ್ಯಾಂಕ್‌ಗಳಿಗೆ ಹೋಲಿಸಿದರೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಹೆಚ್ಚಿದೆ ಎಂದು ಹಲವು ಅಧ್ಯಯನಗಳು ಹೇಳಿವೆ. ಇದು ಪಿಎಸ್‌ಬಿಗಳ ಉದಾರಮತ್ತು ಸಡಿಲ ಸಾಲ ನೀತಿಗಳ ಪರಿಣಾಮವಾಗಿದೆ ಮತ್ತು ನಿರ್ದಿಷ್ಟ ವಲಯಗಳ ಕೆಲವು ಸಾಲಗಾರರ ಮೇಲೆ ವಿಪರೀತ ಗಮನ ಕೇಂದ್ರೀಕರಿಸಿರುವುದು ಇದಕ್ಕೆ ಕಾರಣವಾಗಿದೆ. ಉದಾಹರಣೆಗೆ, ಮೂಲಸೌಕರ್ಯ, ವಿದ್ಯುತ್, ಗಣಿ ಮತ್ತು ಟೆಲಿಕಾಂ ಮೇಲೆ ಇವು ಹೆಚ್ಚುಗಮನ ಹರಿಸಿವೆ. ಖಾಸಗಿ ಮತ್ತು ವಿದೇಶಿ ಬ್ಯಾಂಕ್‌ಗಳಿಗೆ ಹೋಲಿಸಿದರೆ ಪಿಎಸ್‌ಬಿಗಳನ್ನು ಪರಿಣಾಮಕಾರಿಯಾಗಿ ಮತ್ತು ದಕ್ಷವಾಗಿನಿರ್ವಹಿಸಲು ನಿಯಂತ್ರಕವಾಗಿ ಕೆಲಸ ಮಾಡುವಲ್ಲಿ ಆರ್‌ಬಿಐ ವಿಫಲವಾಗಿದೆ ಹಾಗೂ 1980 ರಿಂದಲೂ ಪಿಎಸ್‌ಬಿಗಳಲ್ಲಿ ನಿರಂತರವಾಗಿರಾಜಕೀಯ ಮಧ್ಯಪ್ರವೇಶದಿಂದ ರಕ್ಷಿಸುವಲ್ಲೂ ಆರ್‌ಬಿಐ ವಿಫಲವಾಗಿದೆ.

ಖಾಸಗೀಕರಣ ಕೆಟ್ಟದ್ದೇನಲ್ಲಅಷ್ಟಕ್ಕೂ, ಪಿಎಸ್‌ಬಿಗಳಲ್ಲಿ ಮರುಪಾವತಿಯಾಗದ ಸಾಲದ ಪ್ರಮಾಣ ಹೆಚ್ಚುತ್ತಿರುವಂತೆ ಕಳೆದ ಐದು ವರ್ಷಗಳಲ್ಲಿ ಖಾಸಗೀಕರಣದವೇಗೆ ಹೆಚ್ಚಳವಾಗಿದೆ. ಒಟ್ಟಾರೆ ಸಾಲ ನೀಡುವಿಕೆಯಲ್ಲಿ ಪಿಎಸ್‌ಬಿಗಳ ಮಾರುಕಟ್ಟೆ ಪಾಲು 2010 ಮಾರ್ಚ್‌ನಲ್ಲಿ 75% ಆಗಿತ್ತು. ಅಂದಿನಿಂದಲೂ, ಪಿಎಸ್‌ಬಿಗಳ ಪಾಲು ನಿಧಾನವಾಗಿ ಕಡಿಮೆಯಾಗುತ್ತಲೇ ಇದೆ. 2020 ಸೆಪ್ಟೆಂಬರ್‌ನಲ್ಲಿ ಇದು 57% ಕ್ಕೆ ಬಂದುನಿಂತಿದೆ. ಈ ಹತ್ತು ವರ್ಷಗಳಲ್ಲಿ ಸಾಲ ನೀಡುವಿಕೆಯಲ್ಲಿ ಖಾಸಗಿ ಬ್ಯಾಂಕ್‌ಗಳ ಪಾಲು 17% ರಿಂದ 35% ಕ್ಕೆ ಏರಿಕೆಯಾಗಿದೆ. ಆದರೆ,ಒಟ್ಟಾರೆ ಪಿಎಸ್‌ಬಿಗಳ ಠೇವಣಿಯಲ್ಲಿ ತುಂಬಾ ಕಡಿಮೆಯಾಗಿಲ್ಲ. 2012 ಮಾರ್ಚ್‌ನಲ್ಲಿ ಮಾರುಕಟ್ಟೆ ಪಾಲಿನ 74% ರಿಂದ 2020ಸೆಪ್ಟೆಂಬರ್‌ನಲ್ಲಿ 62% ಕ್ಕೆ ಮಾರುಕಟ್ಟೆ ಪಾಲು ಇಳಿಕೆ ಕಂಡಿದೆ. ಇದು ಖಾಸಗಿ ಬ್ಯಾಂಕ್‌ಗಳು ಉತ್ತಮವಾಗಿ ಸ್ಫರ್ಧೆ ನೀಡಬಹುದಾದರೂ, ಪಿಎಸ್‌ಬಿಗಳನ್ನು ಜನರು ಠೇವಣಿ ವಿಚಾರದಲ್ಲಿ ವಿಶ್ವಾಸಾರ್ಹ ಎಂದು ಪರಿಗಣಿಸಿರುವುದನ್ನು ನಾವು ಗಮನಿಸಬಹುದು.

ಪಿಎಸ್‌ಬಿಗಳು ರಾಷ್ಟ್ರೀಕರಣಗೊಂಡ ನಂತರ ಶಾಖೆಗಳ ಸಂಖ್ಯೆ, ತಂತ್ರಜ್ಞಾನ ಮತ್ತು ವಹಿವಾಟು ಒದಗಿಸುವಿಕೆಯಲ್ಲಿ ಭಾರಿ ವಿಸ್ತರಣೆಯಾದರೂ, ಬ್ಯಾಂಕಿಂಗ್‌ ವಲಯವು ಮೆಟ್ರೋ ನಗರವನ್ನು ಕೇಂದ್ರೀಕರಿಸಿದೆ. ಉದಾಹರಣೆಗೆ, 2018 ರ ಕೊನೆಯಲ್ಲಿ, ಒಟ್ಟುಶಾಖೆಗಳ ಪೈಕಿ ಐದನೇ ಒಂದರಷ್ಟು ಇದ್ದ 53 ಮೆಟ್ರೋ ಸೆಂಟರ್‌ಗಳಲ್ಲಿ 50% ಠೇವಣಿಗಳು ಇದ್ದವು. ಅವು ಒಟ್ಟು 64% ಸಾಲ ನೀಡಿದ್ದವು. ನಗರ ಪ್ರದೇಶಗಳಲ್ಲಿ ಸುಮಾರು ಇಷ್ಟೇ ಸಂಖ್ಯೆಯ ಶಾಖೆಗಳಿದ್ದು (19%) ಕೇವಲ 21.5% ರಷ್ಟು ಠೇವಣಿಹೊಂದಿದ್ದವು ಮತ್ತು 15% ಒಟ್ಟು ಸಾಲವನ್ನು ಇವು ನೀಡಿದ್ದವು. ಇದೇ ವೇಳೆ, ಮೆಟ್ರೋದಲ್ಲಿನ ಶಾಖೆಗಳು ಸ್ವೀಕರಿಸಿದ ರೂ. 100ಠೇವಣಿಗಳಲ್ಲಿ ರೂ. 97 ಅನ್ನು ಸಾಲವನ್ನಾಗಿ ನೀಡಿದ್ದವು (ಇದನ್ನು ಸಾಲ-ಠೇವಣಿ ಅನುಪಾತ ಅಥವಾ ಸಿಡಿ ಅನುಪಾತ ಎಂದುಕರೆಯಲಾಗುತ್ತದೆ). ಆದರೆ, ನಗರ ಪ್ರದೇಶದಲ್ಲಿ ಇದು ಶೇ. 55 ಆಗಿದೆ.

ಗ್ರಾಮೀಣ ಮತ್ತು ಕುಗ್ರಾಮಗಳಲ್ಲಿ ಬ್ಯಾಂಕ್‌ಗಳು ಸೇವೆ ಒದಗಿಸಲು ನಿರಾಕರಿಸುವುದರಿಂದ ಬ್ಯಾಂಕ್‌ ಸೇವೆಗಳ ಲಭ್ಯತೆ ಕಳಪೆಯಾಗಿದೆ. ಇದರಿಂದಾಗಿ ಖಾಸಗಿ ಬ್ಯಾಂಕ್‌ಗಳಿಗೆ ಅನುಕೂಲಕರವಲ್ಲದ ಆದ್ಯತೆ ವಲಯಗಳಾದ ರೈತರು ಮತ್ತು ಸಣ್ಣ ಉದ್ಯಮಗಳಿಗೆ ಬ್ಯಾಂಕಿಂಗ್​ ಸೇವೆಯನ್ನು ಒದಗಿಸಲು ಪಿಎಸ್‌ಬಿಗಳನ್ನೇ ಅವಲಂಬಿಸುವ ಅಗತ್ಯ ಮೂಡಿದೆ. ವಿವಿಧ ಹಣಕಾಸು ಒಳಗೊಳ್ಳುವಿಕೆ ಸ್ಕೀಮ್‌ಗಳನ್ನು ಜನಪ್ರಿಯಗೊಳಿಸಲು ನರೇಂದ್ರ ಮೋದಿ ಸರ್ಕಾರವು ಪಿಎಸ್‌ಬಿಗಳ ಮೇಲೆ ಭಾರಿ ಅವಲಂಬನೆಯನ್ನು ಹೊಂದಿದೆ. ಉದಾಹರಣೆಗೆ,ಪ್ರಧಾನ ಮಂತ್ರಿ ಜನಧನ ಯೋಜನೆ (ಪಿಎಂಜೆಡಿವೈ), ಪಿಎಂ ಗರೀಬ್‌ ಕಲ್ಯಾಣ್ ಯೋಜನೆ (ಪಿಎಂಜಿಕೆವೈ), ಪೆಂ ಜೀವನ್‌ ಜ್ಯೋತಿಬಿಮಾ ಯೋಜನೆ (ಪಿಎಂಜೆಜೆಬಿವೈ), ಪಿಎಂ ಸುರಕ್ಷತಾ ಬಿಮಾ ಯೋಜನೆ (ಪಿಎಂಎಸ್‌ಬಿವೈ), ಅಟಲ್‌ ಪೆನ್ಷನ್ ಯೋಜನೆ (ಎಪಿವೈ)ಮತ್ತು ಪಿಎಂ ಮುದ್ರಾ ಯೋಜನೆ (ಪಿಎಂವೈ) ಅನ್ನು ಜನರಿಗೆ ತಲುಪಿಸಲು ಸರ್ಕಾರವು ಪಿಎಸ್‌ಬಿಗಳ ಮೇಲೆಯೇ ಹೆಚ್ಚು ಅವಲಂಬನೆಹೊಂದಿದೆ. ಸಾಮಾಜಿಕ ಜವಾಬ್ದಾರಿಯನ್ನು ಸಾಧಿಸಲು ಪಿಎಸ್‌ಬಿಗಳು ಮಹತ್ವದ ಕಾರ್ಯನಿರ್ವಹಿಸುತ್ತಿರುವಾಗ ಇವುಗಳನ್ನು ಶುದ್ಧಉದ್ಯಮ ಸಂಸ್ಥೆಯಂತೆ ಪರಿಗಣಿಸಿ ಲಾಭಯುತವಾಗಿರಬೇಕು ಎಂದು ವಾದಿಸುವುದು ಸರಿಯಾದ ನಡೆಯಲ್ಲ.

ಮುಂದುವರಿದು, 2008 ರಲ್ಲಿ ಜಾಗತಿಕ ಹಣಕಾಸು ವಿಪತ್ತನ್ನು ಭಾರತ ಎದುರಿಸಿದ್ದಕ್ಕೆ, ಪಿಎಸ್‌ಬಿಗಳ ಅಧಿಪತ್ಯದಲ್ಲಿದ್ದ ಸುಸ್ಥಿರ ಬ್ಯಾಂಕಿಂಗ್ ವ್ಯವಸ್ಥೆಯಿಂದಲೇ ಎಂಬುದನ್ನು ನಾವು ಮರೆಯುವಂತಿಲ್ಲ. ಕೇವಲ ಬ್ಯಾಂಕ್‌ಗಳನ್ನು ವಿಲೀನಗೊಳಿಸಿದರೆ ಆಡಳಿತವು ಸ್ವಯಂಚಾಲಿತವಾಗಿ ಸುಧಾರಿಸುವುದಿಲ್ಲ. ಅದಕ್ಷತೆಗಳು ಪಿಎಸ್‌ಬಿಗಳಿಗೆ ಮಾತ್ರ ಸೀಮಿತವಲ್ಲ. ಬ್ಯಾಂಕಿಂಗ್‌ ವಲಯದ ಅಂತಾರಾಷ್ಟ್ರೀಯ ಅಧ್ಯಯನದ ಪ್ರಕಾರ, ಎನ್‌ಪಿಎಗಳನ್ನು ನಿರ್ವಹಿಸುವಲ್ಲಿ ಖಾಸಗಿ ಬ್ಯಾಂಕ್‌ಗಳು ಹೆಚ್ಚು ಸಾಮರ್ಥ್ಯ ಹೊಂದಿವೆ ಎಂಬುದನ್ನು ಬೆಂಬಲಿಸುವುದಿಲ್ಲ. ಮೋಸವನ್ನು ನಿರ್ವಹಿಸಲು ಖಾಸಗಿ ಬ್ಯಾಂಕ್‌ಗಳು ಸಂಪೂರ್ಣ ಸಬಲರು ಎಂಬ ದೃಷ್ಟಿಕೋನವನ್ನೂ ಇದು ಬೆಂಬಲಿಸುವುದಿಲ್ಲ. ಮುಂದಿರುವ ಸವಾಲು ಭಾರತದಲ್ಲಿ 19 ಕೋಟಿ ವಯಸ್ಕರಿಗೆ ಇನ್ನೂ ಬ್ಯಾಂಕ್‌ ಖಾತೆ ಇಲ್ಲ. ಇದರಿಂದಾಗಿ, ಇಷ್ಟು ದೊಡ್ಡ ಸಂಖ್ಯೆಯ ಜನರನ್ನು ಬ್ಯಾಂಕಿಂಗ್ ವ್ಯಾಪ್ತಿಗೆ ತರುವ ತುರ್ತು ಅಗತ್ಯವನ್ನು ಇದು ಸೂಚಿಸುತ್ತದೆ. ಭಾರತವು ಹಲವು ಆರ್ಥಿಕ ಒಳಗೊಳ್ಳುವಿಕೆ ಸೂಚಕಗಳಲ್ಲೂ ಹಿಂದುಳಿದಿದೆ ಮತ್ತು ಬ್ಯಾಂಕಿಂಗ್‌ ಉದ್ಯಮವನ್ನು ಕೇವಲ ಉದ್ಯಮ ಎಂದು ಪರಿಗಣಿಸಿದರೆ, ಸುಸ್ಥಿರ ಸಮಗ್ರ ಅಭಿವೃದ್ಧಿಯ ಗುರಿಯನ್ನು ಸಾಧಿಸಲು ಬದಲಾವಣೆಯ ದ್ಯೋತಕವಾಗಿ ಕೆಲಸ ಮಾಡಲು ಇವು ಅವಕಾಶವನ್ನು ಹೊಂದಿಲ್ಲದಂತಾಗುತ್ತದೆ.

ಹೀಗಾಗಿ, ಮುಖ್ಯ ವಲಯಗಳಲ್ಲಿ ಪಿಎಸ್‌ಬಿಗಳ ಅಸ್ತಿತ್ವವನ್ನು ನಿಕೃಷ್ಟಗೊಳಿಸುವುದರ ಬದಲಿಗೆ, ದಕ್ಷ, ಉತ್ಪಾದಕ, ಸಮಗ್ರ ಮತ್ತುವಿಶ್ವಾಸಾರ್ಹವಾದ ಮತ್ತು ಖಾಸಗಿ ಹಾಗೂ ಸಾರ್ವಜನಿಕ ಬ್ಯಾಂಕ್‌ಗಳು ಆರೋಗ್ಯಕರ ಲಾಭದೊಂದಿಗೆ ಮುನ್ನಡೆಯುವಂತಹಬ್ಯಾಂಕಿಂಗ್‌ ವ್ಯವಸ್ಥೆಯನ್ನು ರೂಪಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಕಾರ್ಪೊರೇಟ್‌ ಆಡಳಿತದ ವಿಚಾರದಲ್ಲಿ,ನಿರ್ಲಿಪ್ತವಾಗಿ ಪಿಎಸ್‌ಬಿಗಳು ಮತ್ತು ಖಾಸಗಿ ಬ್ಯಾಂಕ್‌ಗಳ ಮಧ್ಯೆ ಸಮಾನವಾದ ಜವಾಬ್ದಾರಿಯನ್ನು ನಿರ್ವಹಿಸಲು ಆರ್‌ಬಿಐಗೆಸರ್ಕಾರವು ಅನುವು ಮಾಡಬೇಕು.

-ಡಾ. ಎನ್‌ವಿಆರ್‌ ಜ್ಯೋತಿ ಕುಮಾರ್(ವಾಣಿಜ್ಯ ವಿಭಾಗದ ಮುಖ್ಯಸ್ಥರು, ಮಿಜೋರಾಂ ಕೇಂದ್ರೀಯ ವಿಶ್ವವಿದ್ಯಾಲಯ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.