ನವದೆಹಲಿ: ಭಾರತದ ಹಣದುಬ್ಬರ ಪ್ರವೃತ್ತಿ ತೀರಾ ಅಹಿತಕರ ಮಟ್ಟದತ್ತ ಸಾಗುತ್ತಿದೆ. ಇದು ರಿಸರ್ವ್ ಬ್ಯಾಂಕಿನ ಮತ್ತಷ್ಟು ಬಡ್ಡಿ ದರ ಕಡಿತ ನೀಡುವ ಸಾಮರ್ಥ್ಯವನ್ನು ತಡೆಯೊಡ್ಡುತ್ತದೆ ಎಂದು ಮೂಡಿಸ್ ಅನಾಲಿಟಿಕ್ಸ್ ಅಭಿಪ್ರಾಯಪಟ್ಟಿದೆ.
ಕಳೆದ ಎಂಟು ತಿಂಗಳಿಂದ ಚಿಲ್ಲರೆ ಹಣದುಬ್ಬರವು ರಿಸರ್ವ್ ಬ್ಯಾಂಕಿನ ಶೇ 4ರ ಗುರಿಗಿಂತ ಹೆಚ್ಚಾಗಿದೆ ಎಂದು ಮೂಡಿಸ್ ಅನಾಲಿಟಿಕ್ಸ್ ತನ್ನ ನೋಟ್ಸ್ನಲ್ಲಿ ಉಲ್ಲೇಖಿಸಿದೆ.
ಆಹಾರ, ಇಂಧನ ಮತ್ತು ವಿದ್ಯುತ್ ಹೊರತುಪಡಿಸಿ ಭಾರತದ ಪ್ರಮುಖ ಸಿಪಿಐ ಫೆಬ್ರವರಿಯಲ್ಲಿ ಶೇ 5.6ರಷ್ಟು ಏರಿಕೆಯಾಗಿದ್ದು, ಜನವರಿಯಲ್ಲಿ ಶೇ 5.3ರಷ್ಟಿತ್ತು. ಭಾರತದಲ್ಲಿ ಸಿಪಿಐ ಜನವರಿಯಲ್ಲಿ ಶೇ 4.1ರಿಂದ ಫೆಬ್ರವರಿಯಲ್ಲಿ ಶೇ 5ರಷ್ಟು ಏರಿಕೆಯಾಗಿದೆ.
ಇದನ್ನೂ ಓದಿ: ಗ್ರಾಹಕರ ಗಮನಕ್ಕೆ..! ಏಪ್ರಿಲ್ನಲ್ಲಿ OTP, ಡೆಬಿಟ್, ಕ್ರೆಡಿಟ್ ಕಾರ್ಡ್ಗಳ ಆಟೋಮೆಟಿಕ್ ಬಿಲ್ ಪೇಮೆಂಟ್ ವಿಫಲ!
ಆಹಾರ ಮತ್ತು ಪಾನೀಯಗಳ ಬೆಲೆ ವೃದ್ಧಿ ಜನವರಿಯಲ್ಲಿ ಶೇ 2.7ರಿಂದ ಶೇ 4.3ರಷ್ಟು ಏರಿಕೆಯಾಗಿದೆ. ಆಹಾರವು ಹಣದುಬ್ಬರದ ಪ್ರಮುಖ ಚಾಲಕವಾಗಿದ್ದು, ಇದು ಸಿಪಿಐ ಬಾಸ್ಕೆಟ್ನ ಶೇ 46ರಷ್ಟು ಪ್ರತಿನಿಧಿಸುತ್ತದೆ.
ಆರ್‌ಬಿಐ ತನ್ನ ಪ್ರಸ್ತುತ ಹಣದುಬ್ಬರ ಗುರಿ ಪಟ್ಟಿಯನ್ನು ಮಾರ್ಚ್ 31ರ ಮುಕ್ತಾಯ ದಿನಾಂಕ ಮೀರಿ ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಅಸಾಧಾರಣ ಕಾಲದಲ್ಲಿ ಹೆಚ್ಚುತ್ತಿರುವ ಸಾಮ್ಯತೆ ಸೇರಿದಂತೆ ಸಣ್ಣ ತಿದ್ದುಪಡಿಗಳನ್ನು ಸರ್ಕಾರ ಮುಂದೂಡುತ್ತಿದೆ ಎಂದು ವರದಿಯಾಗಿದೆ. ಹೆಚ್ಚಿನ ಇಂಧನ ಬೆಲೆಗಳು ಸಿಪಿಐ ಮೇಲೆ ಹೆಚ್ಚಿನ ಒತ್ತಡವನ್ನುಂಟುಮಾಡುತ್ತದೆ. ಆರ್‌ಬಿಐ ಮತ್ತಷ್ಟು ದರ ಕಡಿತ ಮಾಡದಂತೆ ತಡೆಗೋಡೆಯಾಗಲಿದೆ. ಆರ್‌ಬಿಐ ಚಿಲ್ಲರೆ ಹಣದುಬ್ಬರವನ್ನು ಶೇ 4ರಷ್ಟು ಗುರಿ ಹೊಂದಿದ್ದು, ಎರಡೂ ಕಡೆ ಶೇ 2ರಷ್ಟು ಅಂತರ ಹೊಂದಿದೆ.