ETV Bharat / business

ಆಹಾರೋದ್ಯಮ ಚಿನ್ನದ ಮೊಟ್ಟೆ ಇಡುವ ಕೋಳಿ...57,000 ಕೋಟಿ ರೂ. ದಾಟಲಿದೆ ಫುಡ್​ ಉದ್ಯಮ

ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಉಪಭೋಗದ ಪ್ರಮಾಣ ಅಧಿಕವಾಗಿದೆ ಮತ್ತು ಪೂರೈಕೆ ವಿಭಾಗವು ವೃದ್ಧಿಯಾಗುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ಉದ್ಯಮವು 4 ಬಿಲಿಯನ್ ಡಾಲರ್‌ನಿಂದ 8 ಬಿಲಿಯನ್ ಡಾಲರ್‌ಗೆ ಬೆಳೆಯಲಿದೆ ಎಂಬ ನಿರೀಕ್ಷೆ ಇದೆ. ಉದ್ಯಮದ ಒಟ್ಟಾರೆ ಬೆಳವಣಿಗೆ ಶೇ 25 ಪ್ರತಿಶತದಷ್ಟು ಇರಲಿದೆ ಎಂದು 'ಡಿಮೈಸ್ಟೇಫಿಂಗ್​ ಆನ್‌ಲೈನ್ ಫುಡ್​​ ಕನ್ಸೂಮರ್​' ಎಂಬ ವರದಿಯಲ್ಲಿ ವಿವರಿಸಲಾಗಿದೆ.

food-tech industry
ಆಹಾರೋದ್ಯಮ
author img

By

Published : Jan 28, 2020, 7:25 PM IST

ನವದೆಹಲಿ: ಭಾರತದ ಆಹಾರ - ತಂತ್ರಜ್ಞಾನ ಉದ್ಯಮವು 2022ರ ವೇಳೆಗೆ 25 ಪ್ರತಿಶತದಷ್ಟು ಬೆಳವಣಿಗೆ ಹೊಂದಲಿದ್ದು, ಈ ಮೂಲಕ 8 ಬಿಲಿಯನ್ ಡಾಲರ್​ (57,000 ಕೋಟಿ ರೂ.) ವಹಿವಾಟು ನಡೆಸಲಿದೆ.

ಹೆಚ್ಚುತ್ತಿರುವ ಅಂತರ್ಜಾಲ ಸೇವೆಗಳು, ವಿಸ್ತರಿಸಿಕೊಳ್ಳುತ್ತಿರುವ ಆಹಾರ ವಿತರಣೆ ಜಾಲ ಮತ್ತು ಗ್ರಾಹಕರ ಸ್ನೇಹಿ ಆನ್​ಲೈನ್​ ಸೇವೆಗಳಿಂದಾಗಿ ಭಾರತೀಯ ಆಹಾರ -ತಂತ್ರಜ್ಞಾನ ಉದ್ಯಮದಲ್ಲಿ ಮಹತ್ವದ ಬೆಳವಣಿಗೆ ಕಂಡು ಬರಲಿದೆ. ಆಹಾರೋದ್ಯಮವು 2022ರ ಅಂತ್ಯದ ವೇಳೆಗೆ ಶೇ 25-30ರಷ್ಟು ಬೆಳವಣಿಗೆಯ ದರದೊಂದಿಗೆ 8 ಬಿಲಿಯನ್ ಡಾಲರ್​ ದಾಟಲಿದೆ ಎಂದು ಗೂಗಲ್ ಮತ್ತು ಬೋಸ್ಟನ್ ಕನ್ಸಲ್ಟಿಂಗ್​ ಗ್ರೂಪ್ (ಬಿಸಿಜಿ) ನಡೆಸಿದ ವರದಿ ತಿಳಿಸಿದೆ.

ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಉಪಭೋಗದ ಪ್ರಮಾಣ ಅಧಿಕವಾಗಿದೆ ಮತ್ತು ಪೂರೈಕೆ ವಿಭಾಗವು ವೃದ್ಧಿಯಾಗುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ಉದ್ಯಮವು 4 ಬಿಲಿಯನ್ ಡಾಲರ್‌ನಿಂದ 8 ಬಿಲಿಯನ್ ಡಾಲರ್‌ಗೆ ಬೆಳೆಯಲಿದೆ ಎಂಬ ನಿರೀಕ್ಷೆ ಇದೆ. ಉದ್ಯಮದ ಒಟ್ಟಾರೆ ಬೆಳವಣಿಗೆಯು 25 ಪ್ರತಿಶತದಷ್ಟು ಇರಲಿದೆ ಎಂದು 'ಡಿಮೈಸ್ಟೇಫಿಂಗ್​ ಆನ್‌ಲೈನ್ ಫುಡ್​​ ಕನ್ಸೂಮರ್​' ಎಂಬ ವರದಿಯಲ್ಲಿ ವಿವರಿಸಲಾಗಿದೆ.

ಕಳೆದ ಐದು ವರ್ಷಗಳಲ್ಲಿ ಆಹಾರ - ತಂತ್ರಜ್ಞಾನದ 35 ಪಟ್ಟು ಹೆಚ್ಚಾಗಿದೆ. ಹೆಚ್ಚುತ್ತಿರುವ ಅಂತರ್ಜಾಲ ಬಳಕೆ, ವಿತರಣಾ ಜಾಲದ ಹಂಚಿಕೆ, ಗ್ರಾಹಕರ ಅನುಕೂಲತೆ, ಸಣ್ಣ ಶ್ರೇಣಿ ನಗರಗಳಲ್ಲಿ ವಿಸ್ತರಣೆ ಮತ್ತು ಆಹಾರ - ತಂತ್ರಜ್ಞಾನ ಪ್ಲಾಟ್​​ಫಾರ್ಮ್​​ಗಳಲ್ಲಿ ರೆಸ್ಟೋರೆಂಟ್‌ಗಳ ವಿಸ್ತರಣೆ ಸೇರಿದಂತೆ ಇತರ ಮ್ಯಾಕ್ರೋ ಪ್ರವೃತ್ತಿಗಳು ಉದ್ಯಮದ ವೇಗದ ಬೆಳವಣಿಗೆಗೆ ಕಾರಣವಾಗಿವೆ.

ಆಹಾರ - ತಂತ್ರಜ್ಞಾನದ ವ್ಯಾಪ್ತಿಯು 2017ರಿಂದ 2019ರವರೆಗೆ ಆರು ಪಟ್ಟು ಹೆಚ್ಚಾಗಿದೆ. ಗ್ರಾಹಕರು 2017ರಲ್ಲಿ ತಿಂಗಳಿಗೆ 32 ನಿಮಿಷಗಳು ಫುಡ್​​ ಡಿಲಿವರಿ ಆಯ್ಕೆ ಶೋಧದಲ್ಲಿ ತೊಡಗುತ್ತಿದ್ದದ್ದು ಈಗ ಎರಡು ಪಟ್ಟು ಹೆಚ್ಚಿಗೆ ಸಮಯ ವ್ಯಯಿಸುತ್ತಿದ್ದಾರೆ ಎಂದು ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.