ETV Bharat / business

ಅಮೆರಿಕದ ಇಂಧನ ಕ್ಷೇತ್ರದಲ್ಲಿ ಭಾರತ ಹೂಡಿಕೆ: 50,000 ಉದ್ಯೋಗ ಸೃಷ್ಟಿ: ಪ್ರಧಾನಿ ಘೋಷಣೆ

ಸೆಪ್ಟೆಂಬರ್​ 27ರಂದು ನಡೆಯಲಿರುವ ವಿಶ್ವಸಂಸ್ಥೆಯ 74ನೇ ಸಾಮಾನ್ಯ ಅಧಿವೇಶನಕ್ಕೂ ಮುನ್ನ ಯುಎನ್​ಎ ಕೇಂದ್ರ ಕಚೇರಿಯಲ್ಲಿ ಪ್ರಧಾನಿ ಮೋದಿ ಹಾಗೂ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಸುಮಾರು 45 ನಿಮಿಷಗಳ ಕಾಲ ಚರ್ಚೆ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಡಿದ ಉಭಯ ನಾಯಕರು, ಶೀಘ್ರದಲ್ಲೇ ಮಹತ್ವ ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕಲಿದ್ದೇವೆ ಎಂದು ತಿಳಿಸಿದರು.

ಸಾಂದರ್ಭಿಕ ಚಿತ್ರ
author img

By

Published : Sep 25, 2019, 5:35 PM IST

ನ್ಯೂಯಾರ್ಕ್​: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಫಲಪ್ರದವಾಗಲಿದ್ದು, ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಸಂಬಂಧಿತ ಹಲವು ವಿಷಯಗಳಲ್ಲಿ ಮಹತ್ವದ ಪ್ರಗತಿ ಸಾಧಿಸಿವೆ. ಉಭಯ ದೇಶಗಳು ಸದ್ಯದಲ್ಲಿಯೇ ವ್ಯಾಪಾರ ಒಪ್ಪಂದಗಳಿಗೆ ತಮ್ಮ ಅಂಗೀಕಾರ ಹಾಕಲಿವೆ ಎಂಬ ಆಶಾವಾದ ಉದ್ಯಮಿಗಳಲ್ಲಿ ಮನೆ ಮಾಡಿದೆ.

ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ನಾವು ಉತ್ಸಾಹಕರಾಗಿದ್ದೇವೆ. ಅಮೆರಿಕದ ವ್ಯಾಪಾರ ಪ್ರತಿನಿಧಿಗಳ ವೇದಿಕ ತುಂಬಾ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಯುಎಸ್ ಟ್ರೇಡ್ ರೆಪ್ರೆಸೆಂಟೇಟಿವ್ ರಾಬರ್ಟ್ ಲೈಟ್‌ಜೈಜರ್ ಅವರು ಭಾರತದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ನಾವು ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳುತ್ತೇವೆ ಎಂದು ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಸುದ್ದಿಗಾರರಿಗೆ ಹೇಳಿದ್ದಾರೆ.

ವ್ಯಾಪಾರಕ್ಕೆ ಸಂಬಂಧಿಸಿದಂತೆ ಹ್ಯೂಸ್ಟನ್​ನಲ್ಲಿ ನನ್ನ ಉಪಸ್ಥಿತಿಯ ನಡುವೆ ಭಾರತೀಯ ಕಂಪನಿ ಪೆಟ್ರೋನೆಟ್ 2.5 ಬಿಲಿಯನ್ ಡಾಲರ್​ ವಹಿವಾಟಿಗೆ ಸಹಿ ಹಾಕಿದೆ. ಇದು ನನಗೆ ಅತೀವ ಸಂತಸ ತಂದಿದೆ. ಭಾರತೀಯ ಕಂಪನಿಗಳು ಅಮೆರಿಕದ ಇಂಧನ ಕ್ಷೇತ್ರದಲ್ಲಿ ಹೂಡಿಕೆ ಆಸಕ್ತಿ ತಳೆಯುತ್ತಿವೆ. ಮುಂದಿನ ವರ್ಷಗಳಲ್ಲಿ 60 ಬಿಲಿಯನ್ ಡಾಲರ್​ಗಳಷ್ಟು ವಹಿವಾಟು ನಡೆಯಲಿದೆ. ಸುಮಾರು 50,000 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.