ETV Bharat / business

ವರ್ತಕರು, ಆದಾಯ ತೆರಿಗೆದಾರರ ಗಮನಕ್ಕೆ: ಇಂದಿನಿಂದ ಹೊಸ ಇ-ಪೋರ್ಟಲ್ ಶುರು

ತೆರಿಗೆದಾರರು ಹೊಸ ಪೋರ್ಟಲ್‌ನ ವಿವಿಧ ವೈಶಿಷ್ಟ್ಯಗಳೊಂದಿಗೆ ಪರಿಚಿತರಾಗಲು ಮೊಬೈಲ್ ಆ್ಯಪ್ ಬಿಡುಗಡೆ ಮಾಡುವುದಾಗಿ ಆದಾಯ ತೆರಿಗೆ ಇಲಾಖೆ ಹೇಳಿದೆ. ಈ ಮೂಲಕ ತೆರಿಗೆದಾರರು ತಮ್ಮ ಐಟಿಆರ್‌ಗಳ ಪೂರ್ವ ಫೈಲಿಂಗ್‌ನಲ್ಲಿ ಬಳಸಲಾಗುವ ಸಂಬಳ, ಮನೆ ಆಸ್ತಿ, ವ್ಯವಹಾರ & ವೃತ್ತಿಯಂತಹ ವಿವರಗಳನ್ನು ಪೂರ್ವಭಾವಿಯಾಗಿ ನವೀಕರಿಸಲು ಸಾಧ್ಯವಾಗುತ್ತದೆ. ಐಟಿಆರ್ -1, ಐಟಿಆರ್ -2 ಮತ್ತು ಐಟಿಆರ್ -4 ಫಾರ್ಮ್‌ಗಳಿಗೆ ಐಟಿಆರ್ ತಯಾರಿಕೆ ಸಾಫ್ಟ್‌ವೇರ್ ಪೋರ್ಟಲ್ ಹೊಂದಿರುತ್ತದೆ.

Income Tax
Income Tax
author img

By

Published : Jun 7, 2021, 12:00 PM IST

ನವದೆಹಲಿ: ಆದಾಯ ತೆರಿಗೆ ಇಲಾಖೆ ತನ್ನ ಹೊಸ ಇ-ಫೈಲಿಂಗ್ ಪೋರ್ಟಲ್ www.incometax.gov.in ಅನ್ನು ತೆರಿಗೆದಾರರಿಗೆ ಆಧುನಿಕ, ತಡೆರಹಿತ ಅನುಭವ ಒದಗಿಸುವ ಗುರಿಯೊಂದಿಗೆ ಇಂದು ಹೊರತರಲಿದೆ.

ಹೊಸ ಇ-ಫೈಲಿಂಗ್ ಪೋರ್ಟಲ್ ತೆರಿಗೆದಾರರಿಗೆ ಅನುಕೂಲ ಮತ್ತು ಆಧುನಿಕ, ತಡೆರಹಿತ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಪ್ರಕಟಣೆಯಲ್ಲಿ ತಿಳಿಸಿದೆ.

  • We are as excited about the new portal as our users!
    We are at the final stages in the roll-out of the new portal and it will be available shortly. We appreciate your patience as we work towards making it operational soon.#NewPortal

    — Income Tax India (@IncomeTaxIndia) June 7, 2021 " class="align-text-top noRightClick twitterSection" data=" ">

ಹೊಸ ಪೋರ್ಟಲ್‌ ಬಿಡುಗಡೆ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ಆದಾಯ ತೆರಿಗೆ ಇಲಾಖೆ ಇಂದು ಬೆಳಗ್ಗೆ ಟ್ವೀಟ್ ಮಾಡಿದೆ.

ತೆರಿಗೆದಾರರಿಗೆ ತ್ವರಿತ ಮರುಪಾವತಿ ನೀಡಲು ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಪ್ರಕ್ರಿಯೆಯೊಂದಿಗೆ ಪೋರ್ಟಲ್ ಸಂಯೋಜಿಸಲಾಗಿದೆ. ಪೋರ್ಟಲ್ ಬಳಕೆದಾರರಿಗೆ ಆದಾಯ ತೆರಿಗೆ ನಮೂನೆಗಳನ್ನು ಸಲ್ಲಿಸಲು, ತೆರಿಗೆ ವೃತ್ತಿಪರರನ್ನು ಸೇರಿಸಲು ಮತ್ತು 'ಮುಖರಹಿತ ಪರಿಶೀಲನೆಯಲ್ಲಿ ಸೂಚನೆಗಳು' ಅಥವಾ 'ಮೇಲ್ಮನವಿ'ಗಳಿಗೆ ಪ್ರತಿಕ್ರಿಯೆಗಳನ್ನು ಸಲ್ಲಿಸಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ: 'ವಿಶ್ವದ ಅತಿ ವೇಗದ ಎಲೆಕ್ಟ್ರಿಕ್​ ಕಾರು S Plaid': 2 ಸೆಕೆಂಡ್​ಗೆ 95 km ಮುಟ್ಟಬಹುದು!

ಈ ಮೂಲಕ ತೆರಿಗೆದಾರರು ತಮ್ಮ ಐಟಿಆರ್‌ಗಳ ಪೂರ್ವ ಫೈಲಿಂಗ್‌ನಲ್ಲಿ ಬಳಸಲಾಗುವ ಸಂಬಳ, ಮನೆ ಆಸ್ತಿ, ವ್ಯವಹಾರ & ವೃತ್ತಿಯಂತಹ ವಿವರಗಳನ್ನು ಪೂರ್ವಭಾವಿಯಾಗಿ ನವೀಕರಿಸಲು ಸಾಧ್ಯವಾಗುತ್ತದೆ. ಐಟಿಆರ್ -1, ಐಟಿಆರ್ -2 ಮತ್ತು ಐಟಿಆರ್ -4 ಫಾರ್ಮ್‌ಗಳಿಗೆ ಐಟಿಆರ್ ತಯಾರಿಕೆ ಸಾಫ್ಟ್‌ವೇರ್ ಪೋರ್ಟಲ್ ಹೊಂದಿರುತ್ತದೆ.

ತೆರಿಗೆದಾರರು ಹೊಸ ಪೋರ್ಟಲ್‌ನ ವಿವಿಧ ವೈಶಿಷ್ಟ್ಯಗಳೊಂದಿಗೆ ಪರಿಚಿತರಾಗಲು ಪೋರ್ಟಲ್ ಪರಿಚಯದ ನಂತರ ಮೊಬೈಲ್ ಆ್ಯಪ್ ಬಿಡುಗಡೆ ಮಾಡುವುದಾಗಿ ಆದಾಯ ತೆರಿಗೆ ಇಲಾಖೆ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.