ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯು ಮತ್ತೊಂದು ಸುತ್ತಿನ ನೇಮಕಾತಿಯ ಅಧಿಸೂಚನೆ ಹೊರಡಿಸಿದ್ದು, ನಿವೃತ್ತ ಸಿಬ್ಬಂದಿಯನ್ನು ಮಾಸಿಕ ಸಂಭಾವನೆ ಆಧಾರದ ಆಯ್ಕೆ ಮಾಡಿಕೊಳ್ಳಲಿದೆ.
ಕಮರ್ಷಿಯಲ್ ಕ್ಲರ್ಕ್, ಲ್ಯಾಬ್ ಅಟೆಂಡೆಂಟ್, ಟಿಕೆಟ್ ಎಕ್ಸಾಮಿನರ್, ಸೀನಿಯರ್ ಸೆಕ್ಷನ್ ಇಂಜಿನಿಯರ್, ಟೆಕ್ನಿಷಿಯನ್ ಮತ್ತು ಸೀನಿಯರ್ ಕ್ಲರ್ಕ್ ವೃಂದದ 2,167 ಹುದ್ದೆಗಳಿಗೆ ನಿವೃತ್ತರಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಜುಲೈ 12 ಕೊನೆಯ ದಿನವಾಗಿದೆ.
ಕೇಂದ್ರ ರೈಲ್ವೆಯ ಮುಂಬೈ ವಿಭಾಗದಿಂದ ನಿವೃತ್ತರಾದ ಮತ್ತು ಅಧಿಸೂಚನೆ ಹೊರಡಿಸಲಾದ ವಿಭಾಗಗಳ ನಿವೃತ್ತ ಸಿಬ್ಬಂದಿ ಅರ್ಜಿ ಸಲ್ಲಿಸಬಹುದು. ಶಿಸ್ತು ಕ್ರಮಕ್ಕೆ ಒಳಗಾಗಿ ವೃತ್ತಿಯಿಂದ ವಜಾಗೊಂಡವರು ಪ್ರಯತ್ನಿಸಬಹುದು. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ರೈಲ್ವೆ ಇಲಾಖೆಯ ವೆಬ್ಸೈಟ್ಗೆ ಭೇಟಿ ನಿಯಮಗಳಿಗೆ ಅನುಗುಣವಾಗಿ ಅರ್ಜಿ ನೀಡುವಂತೆ ಕೋರಿದೆ.
ವಯೋಮಿತಿ:
ಅಭ್ಯರ್ಥಿಗಳನ್ನು 2019ರ ಡಿಸೆಂಬರ್ 1ರವರೆಗೆ ನೇಮಕಾತಿಯ ಪ್ರಕ್ರಿಯೆ ಚಾಲ್ತಿಯಲ್ಲಿರಲಿದೆ. ನಿವೃತ್ತ ಅರ್ಜಿದಾರರು 65 ವರ್ಷಕ್ಕಿಂತ ಹೆಚ್ಚಿರಬಾರದು. ಆಸಕ್ತ ಅಭ್ಯರ್ಥಿಗಳು ಅರ್ಜಿಯಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಬೇಕು. ಸೇವಾ ಪ್ರಮಾಣಪತ್ರ, ಪಿಂಚಣಿದಾರರ ಗುರುತಿನ ಚೀಟಿ ಮತ್ತು ಪಿಂಚಣಿ ಪಾವತಿ ಆದೇಶದ ಅರ್ಜಿಯೊಂದಿಗೆ ಕಡ್ಡಾಯವಾಗಿ ಲಗತ್ತಿಸಿ; ಕೇಂದ್ರ ರೈಲ್ವೆ, ಎನ್‌ಎಂ ಜೋಶಿ ಮಾರ್ಗ, ಬೈಕುಲ್ಲಾ ವೆಸ್ಟ್, ಜಾಕೋಬ್ ಸರ್ಕಲ್, ಮುಂಬೈ, ಮಹಾರಾಷ್ಟ್ರ, 400011ಗೆ ಕಳುಹಿಸಬಹುದು ಎಂದು ತಿಳಿಸಿದೆ.