ನವದೆಹಲಿ: ಸಿಗರೇಟ್ಗಳನ್ನು ಅಕ್ರಮವಾಗಿ ತಯಾರಿಸಿ ಸರಬರಾಜು ಮಾಡಿದ ಆರೋಪದ ಮೇಲೆ ಜಿಎಸ್‌ಟಿ ತನಿಖಾ ವಿಭಾಗದ ಡಿಜಿಜಿಐ ಅಧಿಕಾರಿಗಳು ಹರಿಯಾಣದ ನಿವಾಸಿಯೊಬ್ಬರನ್ನು ಬಂಧಿಸಿದ್ದಾರೆ.
ಸಿಗರೇಟ್ ಅಕ್ರಮ ಮಾರಾಟ ಜಾಲ ಪತ್ತೆ ಹಚ್ಚಿದ ಅಧಿಕಾರಿಗಳು, ಈ ಮೂಲಕ 129 ಕೋಟಿ ರೂ. ತೆರಿಗೆ ವಂಚನೆ ತಪ್ಪಿಸಿದ್ದಾರೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ (ಡಿಜಿಜಿಐ) ಗುರುಗ್ರಾಮ್ ವಲಯ ಘಟಕ (ಜಿ ಝ್ಯಡ್ಯು), ಹರಿಯಾಣದ ನಿವಾಸಿ ಸತ್ಯೇಂದರ್ ಶರ್ಮಾ ಎಂಬಾತನನ್ನು ಬಂಧಿಸಿದೆ. ತೆರಿಗೆ ಪಾವತಿಸಿರುವ ಬಗ್ಗೆ ಅಧಿಕೃತ ದಾಖಲೆಗಳಿಲ್ಲದೆ, ನಿಯಮಗಳಿಗೆ ಅನುಗುಣವಾಗಿ ಜಿಎಸ್‌ಟಿ, ಸೆಸ್ ಪಾವತಿಸದೆ ಮತ್ತು ಕಾನೂನು ಬಾಹಿರವಾಗಿ ಸಿಗರೇಟ್ ತಯಾರಿಕೆ ಹಾಗೂ ಸರಬರಾಜು ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಕೆಂಪು ಕಲ್ಲಿನ ಕ್ವಾರಿಗೆ ತಹಸೀಲ್ದಾರ್ ನೇತೃತ್ವದಲ್ಲಿ ದಾಳಿ
ಒಟ್ಟು 129 ಕೋಟಿ ರೂ.ಗಿಂತ ಹೆಚ್ಚಿನ ತೆರಿಗೆ ವಂಚನೆ ವಂಚಿಸಲಾಗಿದೆ. ದೆಹಲಿ ಮತ್ತು ಹರಿಯಾಣದಾದ್ಯಂತ ನಡೆಸಿದ ತನಿಖೆಯಲ್ಲಿ ಶರ್ಮಾ ತನ್ನ ನೋಂದಾಯಿತ ಬ್ರಾಂಡ್‌ಗಳಾದ 'ನಿಧಿ ಬ್ಲ್ಯಾಕ್' 'ಗೋಲ್ಡ್ ಕ್ವೀನ್' ಮತ್ತು 'ಇ -10 ಅಡಿಯಲ್ಲಿ ಸಿಗರೇಟ್ ತಯಾರಿಸಿ ಸರಬರಾಜು ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಇವುಗಳಲ್ಲದೆ ಬೇರೆ ಕಂಪನಿಗಳ ಒಡೆತನದ ಅಂತಾರಾಷ್ಟ್ರೀಯ ಟ್ರೇಡ್ ಮಾರ್ಕ್‌ಗಳಾದ 'ಪ್ಯಾರಿಸ್', ಪೈನ್', 'ಬ್ಲ್ಯಾಕ್ ಡಿಜಾರಮ್', 'ಎಸ್ಸೆ ಲೈಟ್ಸ್ 'ಎಂಬ ಬ್ರಾಂಡ್ ಹೆಸರುಗಳಲ್ಲಿ ಅಕ್ರಮವಾಗಿ ಸಿಗರೇಟ್ ತಯಾರಿಸುತ್ತಿದ್ದಾನೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ.