ETV Bharat / business

ವಿವಾದ್​ ಸೆ ವಿಶ್ವಾಸ್​: ತೆರಿಗೆ ಪಾವತಿ ಘೋಷಣೆ ಗಡುವು ಮತ್ತೆ 2 ತಿಂಗಳು ಮುಂದೂಡಿಕೆ! - ಸಿಬಿಡಿಟ್​​ ಫೈಲಿಂಗ್ ದಿನಾಂಕ ವಿಸ್ತರಣೆ

ನೇರ ತೆರಿಗೆ ವಿವಾದ್​ ಸೆ ವಿಶ್ವಾಸ್ ಕಾಯ್ದೆ 2020ರ ಅಡಿ ಪಾವತಿಸಬೇಕಾದ ಮೊತ್ತವನ್ನು ಹೆಚ್ಚುವರಿ ಶುಲ್ಕವಿಲ್ಲದೇ ಪಾವತಿಸುವ ಸಮಯ 2021ರ ಜೂನ್ 30ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಪ್ರಕಟಣೆಯಲ್ಲಿ ತಿಳಿಸಿದೆ.

Vivad Se Vishwas scheme
Vivad Se Vishwas scheme
author img

By

Published : Apr 24, 2021, 2:53 PM IST

ನವದೆಹಲಿ: ತೀವ್ರ ಕೋವಿಡ್​ ಸಾಂಕ್ರಾಮಿಕ ರೋಗದಿಂದಾಗಿ ನೇರ ತೆರಿಗೆ ವಿವಾದ ಪರಿಹಾರ ಯೋಜನೆ ವಿವಾದ್​ ಸೆ ವಿಶ್ವಾಸ್ ಯೋಜನೆ ಅಡಿ ಪಾವತಿಸುವ ಗಡುವನ್ನು ಜೂನ್ 30ರವರೆಗೆ ಎರಡು ತಿಂಗಳು ವಿಸ್ತರಿಸಿದೆ.

ತೆರಿಗೆ ಅಧಿಕಾರಿಗಳಿಂದ ಮೌಲ್ಯಮಾಪನವನ್ನು ಪುನಃ ತೆರೆಯಲು ನೋಟಿಸ್ ನೀಡುವ ದಿನಾಂಕ ಸಹ ವಿಸ್ತರಿಸಿದೆ. ಆದಾಯ ಮೌಲ್ಯಮಾಪನ ತಪ್ಪಿತಸ್ಥರಿಗೆ ಜೂನ್ 30ರವರೆಗೆ ಮಾಹಿತಿ ಕಳುಹಿಸಲಿದೆ.

ನೇರ ತೆರಿಗೆ ವಿವಾದದ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಉದ್ದೇಶದಿಂದ 'ವಿವಾದ್ ಸೆ ವಿಶ್ವಾಸ್​ ಮಸೂದೆ-2020' ಅನ್ನು ಜಾರಿಗೆ ತರಲಾಯಿತು.

ನೇರ ತೆರಿಗೆ ವಿವಾದ್​ ಸೆ ವಿಶ್ವಾಸ್ ಕಾಯ್ದೆ 2020ರ ಅಡಿ ಪಾವತಿಸಬೇಕಾದ ಮೊತ್ತವನ್ನು ಹೆಚ್ಚುವರಿ ಶುಲ್ಕವಿಲ್ಲದೇ ಪಾವತಿಸುವ ಸಮಯವನ್ನು 2021ರ ಜೂನ್ 30ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಪ್ರಕಟಣೆಯಲ್ಲಿ ತಿಳಿಸಿದೆ.

ವಿವಿಧ ವೇದಿಕೆಗಳಲ್ಲಿ ತೆರಿಗೆ ವಿವಾದಗಳ ದಾವೆ ಮತ್ತು ಬಾಕಿ ವಿಚಾರಣೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ವರ್ಷದ ಬಜೆಟ್‌ನಲ್ಲಿ ಮಾರ್ಚ್ 31ರಂದು ಘೋಷಣೆ ಮಾಡುವ ಕೊನೆಯ ದಿನಾಂಕ ಎಂದು ಘೋಷಿಸಿದ್ದರು.

ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ರೋಗದಿಂದಾಗಿ ಹೆಚ್ಚುವರಿ ಮೊತ್ತ ಪಾವತಿಸದೇ, ರಿಟರ್ನ್ಸ್​​​​​ನ ಕೊನೆಯ ದಿನಾಂಕವನ್ನು ಮಾರ್ಚ್ 31ರಿಂದ ಜೂನ್ ಅಂತ್ಯದವರೆಗೆ ಸರ್ಕಾರ ವಿಸ್ತರಿಸಿತು. ಮತ್ತೆ ಡಿಸೆಂಬರ್ ಅಂತ್ಯಕ್ಕೆ ಹಾಗೂ 2021ರ ಮಾರ್ಚ್ 31ವರೆಗೆ ವಿಸ್ತರಿಸಲಾಗಿತ್ತು. ಈಗ ಮತ್ತೊಂದು ಬಾರಿ ದಿನಾಂಕವನ್ನು ಮುಂದೂಡಿಕೆ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.