ನವದೆಹಲಿ : ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಮಂಗಳವಾರ ಚಿನ್ನದ ದರ ಸ್ಥಿರವಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 44,110 ರೂ. ಮತ್ತು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 48,110 ರೂಪಾಯಿ ಇದೆ.
ಹೈದರಾಬಾದ್‌ನಲ್ಲಿ ಚಿನ್ನದ ದರ 22 ಕ್ಯಾರೆಟ್‌ನ 10 ಗ್ರಾಂಗೆ 44,110 ರೂ. ಮತ್ತು 10 ಗ್ರಾಂ 24 ಕ್ಯಾರೆಟ್ ಚಿನ್ನ 48,110 ರೂ. ಆಗಿದೆ. ಇನ್ನು, ಒಟ್ಟಾರೆಯಾಗಿ ದೇಶದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 244 ರೂ. ಕುಸಿದಿದ್ದು, 46,764 ರೂ.ಗೆ ತಲುಪಿದೆ.
ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್‌ನಲ್ಲಿ, ಆಗಸ್ಟ್ ವಿತರಣೆಯ ಚಿನ್ನದ ಒಪ್ಪಂದಗಳು 11,154 ಲಾಟ್‌ಗಳ ವ್ಯವಹಾರ ವಹಿವಾಟಿನಲ್ಲಿ 10 ಗ್ರಾಂಗೆ 244 ಅಥವಾ 0.52 ರಷ್ಟು ಕಡಿಮೆ ವಹಿವಾಟು ನಡೆಸಿದೆ. ಇನ್ನು, ಜಾಗತಿಕವಾಗಿ ನ್ಯೂಯಾರ್ಕ್‌ನಲ್ಲಿ ಚಿನ್ನದ ಬೆಲೆ ಶೇ.0.68 ಇಳಿಕೆಯಾಗಿ 1,768.60 ಡಾಲರ್‌ಗೆ ವಹಿವಾಟು ನಡೆಸಿದೆ.
ಇನ್ನು, ಹೈದರಾಬಾದ್ ಮತ್ತು ವಿಶಾಖಪಟ್ಟಣಂನಲ್ಲಿ ಪ್ರತಿ ಕಿ.ಗ್ರಾಂ ಬೆಳ್ಳಿಗೆ 73,500 ರೂ. ಇದ್ದು, ಬೆಂಗಳೂರು ಮತ್ತು ಕೇರಳದಲ್ಲಿ ಬೆಳ್ಳಿ ದರ 67,900 ರೂ. ತಲುಪಿದೆ.