ಜಿನಿವಾ: ಜಾಗತಿಕ ಆರ್ಥಿಕತೆಯು ಈ ವರ್ಷ ಶೇಕಡಾ 4.7 ರಷ್ಟು ಏರಿಕೆಯಾಗಲಿದೆ. ಇದು ಸೆಪ್ಟೆಂಬರ್‌ನಲ್ಲಿ ಊಹಿಸಿದ್ದಕ್ಕಿಂತ ವೇಗವಾಗಿ ಅಂದರೆ ಶೇಕಡಾ 4.3ರಷ್ಟು ಹೆಚ್ಚಳ ಕಾಣಲಿದೆ. ಯುನೈಟೆಡ್ ಸ್ಟೇಟ್ಸ್‌ನ ಬಲವಾದ ಚೇತರಿಕೆ, ಹೊಸ ಹಣಕಾಸಿನ ಪ್ರಚೋದನೆಯು 1.9 ಟ್ರಿಲಿಯನ್ ಡಾಲರ್ ಗ್ರಾಹಕರ ಖರ್ಚನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಯುಎನ್‌ಸಿಟಿಎಡಿ ಬಿಡುಗಡೆ ಮಾಡಿದ ಹೊಸ ವರದಿ ತಿಳಿಸಿದೆ.
ಯುನೈಟೆಡ್ ನೇಷನ್ಸ್ ಆಫ್ ಟ್ರೇಡ್ ಆ್ಯಂಡ್ ಡೆವಲಪ್ಮೆಂಟ್ (ಯುಎನ್‌ಸಿಟಿಎಡಿ) ಪ್ರಕಾರ, ಸೀಮಿತ ಆರ್ಥಿಕ ಸ್ಥಳಾವಕಾಶ, ಪಾವತಿಗಳ ಸಮತೋಲನವನ್ನು ನಿರ್ಬಂಧಿಸುವುದು ಮತ್ತು ಅಂತಾರಾಷ್ಟ್ರೀಯ ಬೆಂಬಲದ ಕೊರತೆಯಿರುವ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಜಾಗತಿಕ ಆರ್ಥಿಕತೆಗೆ ತೊಂದರೆ ಆಗುತ್ತಿದೆ. ಎಲ್ಲ ಪ್ರದೇಶಗಳು ಈ ವರ್ಷ ಒಂದು ಬದಲಾವಣೆಯನ್ನು ಕಂಡರೂ, ಆರೋಗ್ಯದ ಮತ್ತು ಆರ್ಥಿಕ ಅಪಾಯಗಳ ತೊಂದರೆಯು ಇನ್ನೂ ಮುಂದುವರೆಯಬಹುದು.
2020 ಅನ್ನು 'ಆನಸ್ ಹಾರ್ರಿಬಿಲಿಸ್' ಎಂದು ವಿವರಿಸಿದ ವರದಿಯು ವಿಷಯಗಳನ್ನು ಇನ್ನಷ್ಟು ಕೆಟ್ಟದಾಗಿ ಮಾಡಬಹುದೆಂದು ಒಪ್ಪಿಕೊಂಡಿದೆ. ಬಡತನದ ಮಟ್ಟಗಳು ಈಗಾಗಲೇ ಹೆಚ್ಚಿರುವ ಮತ್ತು ಕಾರ್ಮಿಕರ ಹೆಚ್ಚಿನ ಭಾಗವು ಅನೌಪಚಾರಿಕ ಉದ್ಯೋಗಗಳಲ್ಲಿ ಕೆಲಸ ಮಾಡುತ್ತಿರುವ ದೇಶಗಳಲ್ಲಿ, ಆರ್ಥಿಕ ಚಟುವಟಿಕೆಯಲ್ಲಿ ಸಣ್ಣಮಟ್ಟ ಕುಸಿತ ಕಾಣಬಹುದು ಎಂದಿದೆ. ಇನ್ನು ಕೊರೊನಾ ಪರಿಣಾಮವಾಗಿ 1/4 ಶತಕೋಟಿ ಜನರು ಬಡತನ (3.20 ಡಾಲರ್ ದೈನಂದಿನ ಮಾನದಂಡದಲ್ಲಿ) ಅನುಭವಿಸುತ್ತಾರೆ ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ.
ಜಾಗತಿಕ ಆರೋಗ್ಯ ಮತ್ತು ಆರ್ಥಿಕ ಬಿಕ್ಕಟ್ಟಿನ ಪ್ರಮಾಣದ ಹೊರತಾಗಿಯೂ, ಅಂತಾರಾಷ್ಟ್ರೀಯ ಸಹಕಾರವು ಅಗತ್ಯಕ್ಕಿಂತ ಕಡಿಮೆಯಾಗಿದೆ.