ಒಸಾಕ: ಚೀನಾ ವಸ್ತುಗಳ ಮೇಲೆ ಇನ್ಮುಂದೆ ಯಾವುದೇ ಹೊಸ ಸುಂಕ ಹಾಕದಿರಲು ಅಮೆರಿಕ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಜಪಾನ್ನಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಡುವೆ ಈ ವಿಚಾರವಾಗಿ ಮಾತುಕತೆ ನಡೆದ ಬಳಿಕ ಅಮೆರಿಕದಿಂದ ಈ ನಿರ್ಧಾರ ಹೊರ ಬಿದ್ದಿದೆ.
-
#G20Summit : US President Donald Trump holds a bilateral meeting with Chinese President Xi Jinping, in Osaka, Japan. pic.twitter.com/wGbu9FZsgG
— ANI (@ANI) June 29, 2019 " class="align-text-top noRightClick twitterSection" data="
">#G20Summit : US President Donald Trump holds a bilateral meeting with Chinese President Xi Jinping, in Osaka, Japan. pic.twitter.com/wGbu9FZsgG
— ANI (@ANI) June 29, 2019#G20Summit : US President Donald Trump holds a bilateral meeting with Chinese President Xi Jinping, in Osaka, Japan. pic.twitter.com/wGbu9FZsgG
— ANI (@ANI) June 29, 2019
ಜಿ-20 ಶೃಂಗಸಭೆಯ 2ನೇ ಹಾಗೂ ಕೊನೆ ದಿನ ಅಮೆರಿಕ- ಚೀನಾ ನಾಯಕರ ನಡುವಣ ವ್ಯಾಪಾರ ಯುದ್ಧ ಹಾಗೂ ಮಾತುಕತೆ ಬಹಳ ಮಹತ್ವ ಪಡೆದುಕೊಂಡಿತ್ತು. ಮೀಟಿಂಗ್ ಬಳಿಕ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಎರಡೂ ರಾಷ್ಟ್ರಗಳ ಸಂಬಂಧ ಮತ್ತೆ ಹಳಿಗೆ ಮರಳಿದೆ ಎಂದು ಘೋಷಿಸಿದರು. ನಾವು ಇಂದು ಚೀನಾದೊಂದಿಗೆ ಸಕಾರಾತ್ಮಕ ಮಾತುಕತೆ ನಡೆಸಿದ್ದೇವೆ. ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಸಕ್ಸಸ್ ಆಗಿದೆ ಎಂದು ಹೇಳಿದರು.
ಈ ಮೂಲಕ ಅಮೆರಿಕ - ಚೀನಾ ನಡುವಣ ಸುಂಕೆ ಹೇರಿಕೆ ಕದನ ಬಹುತೇಕ ತೆರೆ ಬೀಳುವ ಸಾಧ್ಯತೆ ಇದ್ದು, ವಿಶ್ವದ ಇತರ ರಾಷ್ಟ್ರಗಳ ಮೇಲೆ ಬೀರುತ್ತಿದ್ದ ಅಡ್ಡ ಪರಿಣಾಮಗಳು ಕೊನೆಗೊಳ್ಳುವ ಎಲ್ಲ ಲಕ್ಷಣಗಳು ಕಂಡು ಬಂದಿವೆ.