ನವದೆಹಲಿ: ವಾಹನ ಬಳಕೆದಾರರಿಗೆ ವೆಚ್ಚ ಉಳಿತಾಯದಲ್ಲಿ ಸಹಾಯ ಮಾಡಲು ಹಾಗೂ ರೈತರು ಹೆಚ್ಚಿನ ಆದಾಯವನ್ನು ಗಳಿಸಲು ಫ್ಲೆಕ್ಸ್ ಇಂಧನ ವಾಹನಗಳನ್ನು (ಎಫ್‌ಎಫ್‌ವಿ) ಕಡ್ಡಾಯವಾಗಿ ಉತ್ಪಾದಿಸುವಂತೆ ದೇಶದ ವಾಹನ ತಯಾರಕರಿಗೆ ಸರ್ಕಾರ ಆದೇಶ ಹೊರಡಿಸುವ ಸಾಧ್ಯತೆಯಿದೆ ಎಂದು ಇತ್ತೀಚೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಪ್ರಕಟಿಸಿದ್ದರು.
ಮುಂದಿನ ಐದು ವರ್ಷಗಳಲ್ಲಿ ಅಂದರೆ 2025ರ ಹೊತ್ತಿಗೆ ಎಥೆನಾಲ್ ಮಿಶ್ರಿತ ಪೆಟ್ರೋಲ್ ಗುರಿಯನ್ನು ಶೇಕಡಾ 20ರಷ್ಟು ಹೆಚ್ಚಿಸುವ ಕೇಂದ್ರ ಸರ್ಕಾರದ ಇತ್ತೀಚಿನ ನಿರ್ಧಾರದ ಹಿನ್ನೆಲೆಯಲ್ಲಿ ಸಚಿವರ ಈ ಹೇಳಿಕೆ ನೀಡಿದ್ದು, ಇದು ಭಾರತದಲ್ಲಿ ಎಫ್‌ಎಫ್‌ವಿಗಳ ಪರಿಣಾಮಕಾರಿತ್ವದ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ.
ಈ ಹಿನ್ನೆಲೆಯಲ್ಲಿ, ಇಟಿವಿ ಭಾರತ “ಭಾರತದಲ್ಲಿ ಎಥೆನಾಲ್ ಮಿಶ್ರಣಕ್ಕಾಗಿ ನಕ್ಷೆ 2020-25"ಅನ್ನು ಪರಿಶೀಲಿಸಿದ್ದು, ಈ ತಿಂಗಳು ನೀತಿ ಆಯೋಗ ಬಿಡುಗಡೆ ಮಾಡಿದ ವರದಿಯಲ್ಲಿ ದೇಶದ ಎಫ್‌ಎಫ್‌ವಿಗಳ ಕಾರ್ಯಸಾಧ್ಯತೆಯನ್ನು ಚರ್ಚಿಸಲಾಗಿದೆ. ಅದರ ವಿವರಗಳು ಇಲ್ಲಿವೆ.
ಫ್ಲೆಕ್ಸ್ ಇಂಧನ ವಾಹನಗಳು (ಎಫ್‌ಎಫ್‌ವಿ) ಎಂದರೇನು?
ಮೂಲಭೂತವಾಗಿ, ಪೆಟ್ರೋಲ್‌ನಲ್ಲಿ ಹೆಚ್ಚುತ್ತಿರುವ ಎಥೆನಾಲ್ ಶೇಕಡಾವನ್ನು ಗಮನದಲ್ಲಿಟ್ಟುಕೊಂಡು ಎಫ್‌ಎಫ್‌ವಿ ಪರಿಕಲ್ಪನೆಯನ್ನು ಪ್ರಸ್ತಾಪಿಸಲಾಗಿದೆ. ನೀತಿ ಆಯೋಗದ ವರದಿಯ ಪ್ರಕಾರ, ಎಫ್‌ಎಫ್‌ವಿಗಳು ಶೇಕಡಾ 84ಕ್ಕಿಂತ ಹೆಚ್ಚು ಎಥೆನಾಲ್ ಮಿಶ್ರಿತ ಪೆಟ್ರೋಲ್‌ನಲ್ಲಿ ಕಾರ್ಯನಿರ್ವಹಿಸಲುಹೊಂದಾಣಿಕೆಯ ಎಂಜಿನ್‌ಗಳನ್ನು ಹೊಂದಿವೆ.
ವಾಸ್ತವವಾಗಿ ಈ ವಾಹನಗಳು ಜನವರಿ 2003ರಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಪ್ರಾರಂಭಿಸಿದ ಎಥೆನಾಲ್ ಬ್ಲೆಂಡೆಡ್ ಪೆಟ್ರೋಲ್ (ಇಬಿಪಿ) ಕಾರ್ಯಕ್ರಮದ ತಾರ್ಕಿಕ ವಿಸ್ತರಣೆಯಾಗಿದೆ. ಈ ಕಾರ್ಯಕ್ರಮವು ತೈಲ ಮಾರಾಟ ಕಂಪನಿಗಳಾದ ಇಂಡಿಯನ್ ಆಯಿಲ್, ಎಚ್‌ಪಿಸಿಎಲ್, ಬಿಪಿಸಿಎಲ್, ಇತ್ಯಾದಿಗಳು ಎಥೆನಾಲ್ ಮಿಶ್ರಿತ ಪೆಟ್ರೋಲ್ ಮಾರಾಟ ಮಾಡುವುದನ್ನು ಖಡ್ಡಾಯಗೊಳಿಸುತ್ತದೆ.
ಕಳೆದ ವರ್ಷ, ಕೇಂದ್ರವು 2022ರ ವೇಳೆಗೆ ಪೆಟ್ರೋಲ್‌ನಲ್ಲಿ ಶೇಕಡಾ 10 ಮತ್ತು 2030ರ ವೇಳೆಗೆ ಶೇಕಡಾ 20ರಷ್ಟು ಎಥೆನಾಲ್ ಮಿಶ್ರಣವನ್ನು ತಲುಪುವ ಗುರಿ ಹೊಂದಿತ್ತು. ಆದರೆ ಈ ಗುರಿಯನ್ನು ಇತ್ತೀಚೆಗೆ ದ 2025ಕ್ಕೆ ಶೇಕಡಾ 20ರಷ್ಟು ಎಂದು ಪರಿಷ್ಕರಿಸಲಾಯಿತು.
ಪ್ರಸ್ತುತ, ಸುಮಾರು 8.5 ಶೇಕಡಾ ಎಥೆನಾಲ್ ಅನ್ನು ಪೆಟ್ರೋಲ್ನೊಂದಿಗೆ ಬೆರೆಸುತ್ತಿದ್ದು, 2014ರಲ್ಲಿ ಇದು 1-1.5 ಶೇಕಡಾದಷ್ಟಿತ್ತು.
ಎಥೆನಾಲ್ ಮಿಶ್ರಿತ ಇಂಧನಗಳು ಮತ್ತು ಎಫ್‌ಎಫ್‌ವಿಗಳ ಅನುಕೂಲಗಳು ಯಾವುವು?
ಸರ್ಕಾರದ ಪ್ರಕಾರ, ಎಥೆನಾಲ್ ಮಿಶ್ರಿತ ಇಂಧನದ ಬಳಕೆಯು ಗ್ರಾಹಕರಿಗೆ, ರೈತರಿಗೆ ಮತ್ತು ಒಟ್ಟಾರೆ ಭಾರತೀಯ ಆರ್ಥಿಕತೆಗೆ ಪ್ರಯೋಜನವನ್ನು ನೀಡುತ್ತದೆ.
"ಪರ್ಯಾಯ ಇಂಧನ ಎಥೆನಾಲ್ ಪ್ರತಿ ಲೀಟರ್ಗೆ 60-62 ರೂ. ಇದೆ. ಆದರೆ ದೇಶದ ಅನೇಕ ಭಾಗಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 100 ರೂ.ಗಿಂತ ಹೆಚ್ಚು ಖರ್ಚಾಗುತ್ತದೆ. ಆದ್ದರಿಂದ ಎಥೆನಾಲ್ ಅನ್ನು ಬಳಸುವುದರಿಂದ ಭಾರತೀಯರು ಪ್ರತಿ ಲೀಟರ್ಗೆ 30-35 ರೂಗಳನ್ನು ಉಳಿಸುತ್ತಾರೆ" ಎಂದು ನಿತಿನ್ ಗಡ್ಕರಿ ಕಳೆದ ವಾರ ಹೇಳಿದರು.
ಭಾರತವು ಜೋಳ, ಸಕ್ಕರೆ ಮತ್ತು ಗೋಧಿಯ ಹೆಚ್ಚುವರಿ ಉತ್ಪನ್ನಗಳನ್ನು ಹೊಂದಿರುವುದರಿಂದ, ಎಥೆನಾಲ್ ಕಡ್ಡಾಯ ಮಿಶ್ರಣವು ರೈತರಿಗೆ ಹೆಚ್ಚಿನ ಆದಾಯವನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ಸಚಿವರುಹೆಳಿದರು. ಹೆಚ್ಚುವರಿ ಸರಬರಾಜುಗಳನ್ನು ಸಂಗ್ರಹಿಸಲು ನಮಗೆ ಸಾಕಷ್ಟು ಮೂಲಸೌಕರ್ಯಗಳಿಲ್ಲದ ಕಾರಣ ಆಹಾರ ಧಾನ್ಯಗಳ ಹೆಚ್ಚುವರಿ ಪೂರೈಕೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂಬ ಅಂಶವನ್ನೂ ಅವರು ಒತ್ತಿ ಹೇಳಿದರು.
"ನಮ್ಮ ಕನಿಷ್ಠ ಬೆಂಬಲ ಬೆಲೆಗಳು (ಎಂಎಸ್‌ಪಿ) ಅಂತರಾಷ್ಟ್ರೀಯ ಬೆಲೆಗಳು ಮತ್ತು ದೇಶೀಯ ಮಾರುಕಟ್ಟೆ ಬೆಲೆಗಳಿಗಿಂತ ಹೆಚ್ಚಾಗಿದೆ. ಆದ್ದರಿಂದ ನೀವು ಆಹಾರ ಧಾನ್ಯಗಳು ಮತ್ತು ಕಬ್ಬಿನ ರಸವನ್ನು ಬಳಸಿ ಎಥೆನಾಲ್ ತಯಾರಿಸಬಹುದು ಎಂಬ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ" ಎಂದು ಅವರು ಹೇಳಿದರು.
ಒಟ್ಟಾರೆ ಭಾರತೀಯ ಆರ್ಥಿಕತೆಗೆ, ಎಥೆನಾಲ್ ಅನ್ನು ವಾಹನ ಇಂಧನವಾಗಿ ಬಳಸುವುದರಿಂದ ಆಮದು ವೆಚ್ಚವನ್ನು ಉಳಿಸಲು ಸಹಾಯ ಮಾಡುತ್ತದೆ. ಏಕೆಂದರೆ ದೇಶವು ತನ್ನ ಕಚ್ಚಾ ತೈಲ ಅಗತ್ಯತೆಗಳಲ್ಲಿ ಶೇಕಡಾ 80ಕ್ಕಿಂತಲೂ ಹೆಚ್ಚಿನದನ್ನು ಆಮದು ಮೂಲಕ ಪೂರೈಸುತ್ತದೆ.
ಎಫ್‌ಎಫ್‌ವಿಗಳನ್ನು ಬಳಸುವ ಅನಾನುಕೂಲಗಳು / ಸವಾಲುಗಳು ಯಾವುವು?
ನೀತಿ ಆಯೋಗದ ಪ್ರಕಾರ, ಶೇಕಡಾ 100ರಷ್ಟು ಪೆಟ್ರೋಲ್ ವಾಹನಗಳಿಗೆ ಹೋಲಿಸಿದರೆ ಮಾಲೀಕತ್ವದ ವೆಚ್ಚ ಮತ್ತು ಚಾಲನೆಯಲ್ಲಿರುವ ವೆಚ್ಚವು ತುಂಬಾ ಹೆಚ್ಚಾಗುವುದರಿಂದ ಗ್ರಾಹಕರ ಸ್ವೀಕಾರವು ಒಂದು ದೊಡ್ಡ ಸವಾಲಾಗಿದೆ.
“ವಸ್ತುಗಳು, ಎಂಜಿನ್ ಭಾಗಗಳು ಮತ್ತು ಇಂಧನ ವ್ಯವಸ್ಥೆಯ ನವೀಕರಣದಿಂದಾಗಿ ಫ್ಲೆಕ್ಸ್ ಇಂಧನ ವಾಹನಗಳು ಸಾಮಾನ್ಯ ವಾಹನಗಳಿಗಿಂತ ಹೆಚ್ಚು ದುಬಾರಿಯಾಗಬಹುದು ಎಂಬುದನ್ನು ಗಮನಿಸಬೇಕು. ಇದಲ್ಲದೆ, 100 ಪ್ರತಿಶತದಷ್ಟು ಎಥೆನಾಲ್ನೊಂದಿಗೆ ಚಾಲನೆಯಲ್ಲಿರುವಾಗ ಚಾಲನೆಯಲ್ಲಿರುವ ವೆಚ್ಚ (ಕಡಿಮೆ ಇಂಧನ ದಕ್ಷತೆಯಿಂದಾಗಿ) ಶೇಕಡಾ 30ಕ್ಕಿಂತ ಹೆಚ್ಚಾಗುತ್ತದೆ" ಎಂದು ನೀತಿ ಆಯೋಗದ ವರದಿ ತಿಳಿಸಿದೆ.
ಪೆಟ್ರೋಲ್‌ಗಿಂತ ಎಥೆನಾಲ್ ವಿಭಿನ್ನ ರಾಸಾಯನಿಕ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಫ್ಲೆಕ್ಸ್ ಇಂಧನ ಎಂಜಿನ್‌ಗಳು ಹೆಚ್ಚು ವೆಚ್ಚವಾಗುತ್ತವೆ ಎಂದು ತಜ್ಞರು ಹೇಳಿದ್ದಾರೆ.
ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ತಯಾರಕರ (ಸಿಯಾಮ್) ಪ್ರಕಾರ, ಎಫ್‌ಎಫ್‌ವಿಗಳ (ನಾಲ್ಕು ಚಕ್ರಗಳ) ವೆಚ್ಚವು 17,000ರೂಗಳಿಂದ 25,000ರೂಗಳವರೆಗೆ ಹೆಚ್ಚಾಗುತ್ತದೆ. ಪೆಟ್ರೋಲ್ನ ಸಾಮಾನ್ಯ ದ್ವಿಚಕ್ರ ವಾಹನಗಳಿಗೆ ಹೋಲಿಸಿದರೆ ದ್ವಿಚಕ್ರ ಫ್ಲೆಕ್ಸ್ ಇಂಧನ ವಾಹನಗಳಿಗೆ 5,000ರಿಂದ 12,000 ರೂ.ನಷ್ಟು ಹೆಚ್ಚು ವೆಚ್ಚವಾಗಲಿದೆ.
ಮುಂದಿನ ದಾರಿ ಏನು?
ಗ್ರಾಹಕರ ಹೆಚ್ಚಿನ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು, ಶೇಕಡಾ 20ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮದಲ್ಲಿ ಪ್ಯಾನ್-ಇಂಡಿಯಾ ರೋಲ್ ಅನ್ನು ಎಚ್ಚರಿಕೆಯಿಂದ ನಿರ್ಣಯಿಸಿದ ನಂತರವೇ ಭಾರತವು ಶೇಕಡಾ 100ರಷ್ಟು ಎಥೆನಾಲ್‌ಗೆ ಬದಲಾಗಬೇಕು ಎಂದು ವರದಿ ಸೂಚಿಸಿದೆ.