ನವದೆಹಲಿ: ಕೇಂದ್ರ ಸರ್ಕಾರದ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ದೇಶಾದ್ಯಂತ ನಡೆಸಿದ 'ಸುಲಲಿತ ಜೀವನ ಸೂಚ್ಯಂಕ'ದ (ಈಸಿ ಆಫ್ ಲಿವಿಂಗ್ ಇಂಡೆಕ್ಸ್) ನಗರಳ ಪೈಕಿ ಬೆಂಗಳೂರು ದೇಶದಲ್ಲಿ ಅತ್ಯಂತ ವಾಸಯೋಗ್ಯ ನಗರ ಎಂಬ ಅಗ್ರ ಸ್ಥಾನ ಪಡೆದಿದೆ.
ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಗುರುವಾರ ಬಿಡುಗಡೆ ಮಾಡಿದ ಸರ್ಕಾರದ ಈಸಿ ಆಫ್ ಲಿವಿಂಗ್ ಇಂಡೆಕ್ಸ್ 2020ರಲ್ಲಿ ಬೆಂಗಳೂರು ಉನ್ನತ ನಗರವಾಗಿ ಹೊರಹೊಮ್ಮಿತು. 111 ನಗರಗಳಲ್ಲಿ ಪುಣೆ ಎರಡನೇ ಮತ್ತು ಅಹಮದಾಬಾದ್ ಮೂರನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಮೋದಿ ಸರ್ಕಾರ ಸಾರ್ವಜನಿಕ ಆಸ್ತಿಗಳನ್ನು ಕಡಿಮೆ ಮೌಲ್ಯಕ್ಕೆ ಆಪ್ತರಿಗೆ ಮಾರುತ್ತಿದೆ: ಸೋನಿಯಾ
ಪುರಿ ಅವರು ಆನ್‌ಲೈನ್ ಈವೆಂಟ್‌ನಲ್ಲಿ ಈಸಿ ಆಫ್ ಲಿವಿಂಗ್ ಇಂಡೆಕ್ಸ್ (ಇಒಎಲ್ಐ) 2020 ಮತ್ತು ಮುನ್ಸಿಪಲ್ ಪರ್ಫಾರ್ಮೆನ್ಸ್ ಇಂಡೆಕ್ಸ್ (ಎಂಪಿಐ) 2020ರ ಅಂತಿಮ ಶ್ರೇಯಾಂಕ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು.

ಒಂದು ದಶಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಿಗೆ ಮತ್ತು ಒಂದು ದಶಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳಿಗೆ ಈಸಿ ಆಫ್ ಲಿವಿಂಗ್ ಇಂಡೆಕ್ಸ್ 2020ರ ಶ್ರೇಯಾಂಕ ಘೋಷಿಸಲಾಯಿತು. 2020ರಲ್ಲಿ ನಡೆಸಿದ ಮೌಲ್ಯಮಾಪನದಲ್ಲಿ 111 ನಗರಗಳು ಇದ್ದವು.
ಮಿಲಿಯನ್ ಜನಸಂಖ್ಯೆ ವಿಭಾಗದಲ್ಲಿ ಬೆಂಗಳೂರು ಅಗ್ರ ಸ್ಥಾನ ಪಡೆದ ನಂತರ ಪುಣೆ, ಅಹಮದಾಬಾದ್, ಚೆನ್ನೈ, ಸೂರತ್, ನವಿ ಮುಂಬೈ, ಕೊಯಮತ್ತೂರು, ವಡೋದರಾ, ಇಂದೋರ್, ಮತ್ತು ಗ್ರೇಟರ್ ಮುಂಬೈ ನಂತರದ ಸ್ಥಾನಗಳಲ್ಲಿವೆ. ಮಿಲಿಯನ್ಗಿಂತ ಕಡಿಮೆ ವಿಭಾಗದಲ್ಲಿ ಶಿಮ್ಲಾ ಜೀವನ ಸುಲಭದಲ್ಲಿ ಅತ್ಯುನ್ನತ ಸ್ಥಾನದಲ್ಲಿದ್ದರೆ ಭುವನೇಶ್ವರ, ಸಿಲ್ವಾಸ್ಸಾ, ಕಾಕಿನಾಡ, ಸೇಲಂ, ವೆಲ್ಲೂರು, ಗಾಂಧಿನಗರ, ಗುರುಗ್ರಾಮ್, ದಾವಣಗೆರೆ ಮತ್ತು ತಿರುಚಿರಾಪಳ್ಳಿ ನಂತರದ ಸ್ಥಾನದಲ್ಲಿವೆ.