ಬೆಂಗಳೂರು:2020 ರ ಕೊನೆಯ ತ್ರೈಮಾಸಿಕದಲ್ಲಿ ಇ - ಕಾಮರ್ಸ್ ಆರ್ಡರ್ ಪ್ರಮಾಣವು ಭಾರತದಲ್ಲಿ ಶೇಕಡಾ 36 ರಷ್ಟು ಏರಿಕೆಯಾಗಿದ್ದು, ವೈಯಕ್ತಿಕ ಆರೈಕೆ, ಸೌಂದರ್ಯ ಮತ್ತು ಸ್ವಾಸ್ಥ್ಯ (ಪಿಸಿಬಿ ಮತ್ತು ಡಬ್ಲ್ಯೂ) ವಿಭಾಗವು ಅತಿದೊಡ್ಡ ಫಲಾನುಭವಿಗಳಾಗಿದೆ ಎಂದು ವರದಿಯೊಂದು ತಿಳಿಸಿದೆ.
ಶ್ರೇಣಿ 2 ಮತ್ತು 3ರಲ್ಲಿರುವ ನಗರಗಳು ಶೇ.90 ರಷ್ಟು ಹೆಚ್ಚಳ ಮತ್ತು ಬೆಳವಣಿಗೆಯನ್ನು ಹೊಂದಿವೆ ಎಂದು ವರದಿ ಹೇಳಿದೆ. ವಲಯವಾರು ವಿಶ್ಲೇಷಣೆಯೊಂದಿಗೆ ಕ್ಯೂ Q4-2020 ರಲ್ಲಿ ಇ-ಕಾಮರ್ಸ್ ಬೆಳವಣಿಗೆಯನ್ನು ನಿರ್ಣಯಿಸುವ ವರದಿಯಲ್ಲಿ, ಬ್ರಾಂಡ್ ವೆಬ್‌ಸೈಟ್‌ಗಳು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 2020 ರ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 94 ರಷ್ಟು ಪರಿಮಾಣದ ಬೆಳವಣಿಗೆ ಸಾಧಿಸಿವೆ ಎಂದು ವರದಿ ಮಾಡಿದೆ.
2020 ರ ಕೊನೆಯ ತ್ರೈಮಾಸಿಕದಲ್ಲಿ ಇ-ಕಾಮರ್ಸ್ ಕ್ರಮವಾಗಿ ಶೇ 36 ಮತ್ತು ಶೇ.30 ರಷ್ಟು ಏರಿಕೆಯಾಗಿದೆ. ಆದರೆ, ಸರಾಸರಿ ಆದೇಶದ ಮೌಲ್ಯವು Q4-2020 ರಲ್ಲಿ ಶೇ.5 ರಷ್ಟು ಕಡಿಮೆಯಾಗಿದೆ.
ಕೋವಿಡ್-19 ಬಿಕ್ಕಟ್ಟಿನ ಪರಿಣಾಮ ಜನರ ಹವ್ಯಾಸ - ಅಭ್ಯಾಸಗಳಲ್ಲಿ ಗಣನೀಯ ಬೆಳವಣಿಗೆ ಕಂಡು ಬಂದಿದ್ದು, ಈ ವೇಳೆ ಈ- ಕಾಮರ್ಸ್ ಉದ್ಯಮದ ಬೆಳವಣಿಗೆ ವೇಗ ಪಡೆಯಿತು. ಅನೇಕ ಹೊಸ ಮಾಲೀಕರು ಮತ್ತು ಮಾರಾಟಗಾರರು ಆನ್‌ಲೈನ್ ವಹಿವಾಟಿನಲ್ಲಿ ಹೆಚ್ಚು ತೊಡಗಿಕೊಂಡಿದ್ದು, ಈ ಬೆಳವಣಿಗೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವರದಿ ಹೇಳಿದೆ.
ಎಲೆಕ್ಟ್ರಾನಿಕ್ಸ್ ವಿಭಾಗವು ಸರಾಸರಿ ಆದೇಶ ಮೌಲ್ಯದಲ್ಲಿ (ಎಒವಿ) ಶೇಕಡಾ 12 ರಷ್ಟು ಬೆಳವಣಿಗೆ ಸಾಧಿಸಿದೆ. ಫ್ಯಾಷನ್ ಮತ್ತು ಆಕ್ಸೆಸರೀಸ್ ಪರಿಮಾಣದ ವಿಭಾಗ ಅತಿದೊಡ್ಡ ವಿಭಾಗವಾಗಿ ಮುಂದುವರೆದಿದೆ. ಜನರು ಇನ್ನೂ ವರ್ಕ್ ಫ್ರಂ ಹೋಮ್ ಮಾಡುತ್ತಿರುವುದರಿಂದ, ಕಡಿಮೆ ಮೌಲ್ಯದ ಉತ್ಪನ್ನಗಳಾದ ಕಂಫರ್ಟ್ ಉಡುಗೆ ಮತ್ತು ಸಾಮಾನ್ಯ ಉಡುಗೆಗಳ ಖರೀದಿಯಿಂದ ಈ ವಿಭಾಗದ ಬೆಳವಣಿಗೆ ಸಾಧ್ಯವಾಗಿದೆ ಎಂದು ವರದಿ ತಿಳಿಸಿದೆ.
ಲಾಕ್‌ಡೌನ್ ಮೊದಲ ಬಾರಿಗೆ ಆನ್‌ಲೈನ್ ಕಿರಾಣಿ ವ್ಯಾಪಾರಕ್ಕೆ ಕಾರಣವಾಯಿತು, ಇ - ಕಾಮರ್ಸ್ ಮುಂಚೂಣಿಯಲ್ಲಿರುವ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಕಿರಾಣಿ ವಸ್ತುಗಳ ಮಾರಾಟ ವ್ಯವಹಾರವನ್ನು ಸಕ್ರಿಯವಾಗಿ ಕೇಂದ್ರೀಕರಿಸಲು ಮತ್ತು ಉತ್ತೇಜಿಸಲು ಸಹಕಾರಿಯಾಯ್ತು. ಒಟ್ಟಾರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಇ-ಕಾಮರ್ಸ್ ಮಾರಾಟದ ಷೇರುಗಳ ಪಾಲಿನಲ್ಲಿ ಗಮನಾರ್ಹ ಶೇ. 32 ರಿಂದ 46 ಶೇಕಡಕ್ಕೆ ಏರಿಸಿದೆ ಮತ್ತು ಅದೇ ಅವಧಿಗೆ ಹೋಲಿಸಿದರೆ ಕ್ಯೂ4 2020 ಅವಧಿಯಲ್ಲಿ ಮೌಲ್ಯದ ಪಾಲು ಶೇ 26 ರಿಂದ ಶೇ 43 ಕ್ಕೆ ಏರಿದೆ. ಎಫ್‌ಎಂಸಿಜಿ ಮತ್ತು ಹೆಲ್ತ್‌ಕೇರ್ ಶ್ರೇಣಿ-1 ಮತ್ತು ಮೆಟ್ರೋಪಾಲಿಟನ್ ಸಿಟಿಗಳಲ್ಲಿs ಶೇಕಡಾ 150 ಕ್ಕಿಂತ ಹೆಚ್ಚಿನ ಬೆಳವಣಿಗೆಯೊಂದಿಗೆ ವೇಗವಾಗಿ ಬೆಳೆಯುತ್ತಿರುವ ವರ್ಗವಾಗಿದೆ ಎಂದು ವರದಿ ತಿಳಿಸಿದೆ.