ETV Bharat / business

ಕಳೆದೊಂದು ತಿಂಗಳಿಂದ ತೈಲ ಬೆಲೆ ಸ್ಥಿರ ; ಪ್ರಮುಖ ನಗರಗಳಲ್ಲಿನ ಪೆಟ್ರೋಲ್‌, ಡೀಸೆಲ್‌ ದರಗಳು..

author img

By

Published : Dec 21, 2021, 1:58 PM IST

ರೂಪಾಯಿಗೆ ಯುಎಸ್ ಡಾಲರ್ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ಸೂಚನೆಗಳು, ಇಂಧನ ಬೇಡಿಕೆ ಇತ್ಯಾದಿಗಳಿಂದ ತೈಲ ಬೆಲೆಯಲ್ಲಿ ಏರಿಳಿತವಾಗುತ್ತದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಏರಿದಾಗ ಭಾರತದಲ್ಲಿ ಬೆಲೆಗಳು ಹೆಚ್ಚಾಗುತ್ತವೆ..

Diesel, petrol prices remain unchanged
ಕಳೆದೊಂದು ತಿಂಗಳಿಂದ ತೈಲ ಬೆಲೆ ಸ್ಥಿರ; ಪ್ರಮುಖ ನಗರಗಳಲ್ಲಿನ ಪೆಟ್ರೋಲ್‌, ಡೀಸೆಲ್‌ ದರಗಳು...

ನವದೆಹಲಿ : ದೇಶದ ಪ್ರಮುಖ ನಗರಗಳಲ್ಲಿಂದು ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗದೆ ಯತಾಸ್ಥಿತಿಯಲ್ಲೇ ಮುಂದುವರಿದಿದ್ದು, ಕಳೆದೊಂದು ತಿಂಗಳಿನಿಂದ ತೈಲ ಬೆಲೆಗಳು ಸ್ಥಿರವಾಗಿವೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್‌ 100.58 ರೂ. ಹಾಗೂ ಡೀಸೆಲ್‌ 85.01 ರೂಪಾಯಿಗೆ ಮಾರಾಟ ಆಗುತ್ತಿದೆ. ದೆಹಲಿಯಲ್ಲಿಂದು ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಕ್ರಮವಾಗಿ ಲೀಟರ್‌ಗೆ 86.67 ಮತ್ತು 95.41 ರೂಪಾಯಿ ಇದೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಡೀಸೆಲ್‌ 94.14 ರೂ.ಇದ್ದರೆ, ಪೆಟ್ರೋಲ್‌ 109.98 ರೂ. ಇದೆ. ಕೋಲ್ಕತ್ತಾದಲ್ಲಿ ಡೀಸೆಲ್‌ 89.79 ರೂ.ಹಾಗೂ ಪೆಟ್ರೋಲ್‌ 104.67 ಇದೆ. ಇತ್ತ ನೆರೆಯ ಚೆನ್ನೈನಲ್ಲಿ ಕ್ರಮವಾಗಿ 91.43 ಹಾಗೂ 101.40 ರೂಪಾಯಿ ಇದೆ.

ಭಾರತದಲ್ಲಿ ಪೆಟ್ರೋಲ್, ಡೀಸೆಲ್‌ ದರಗಳನ್ನು ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪರಿಷ್ಕರಿಸಲಾಗುತ್ತದೆ. ಇಂಧನದ ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಒಳಗೊಂಡಿರುತ್ತದೆ.

ವ್ಯಾಟ್‌ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಅಬಕಾರಿ ಸುಂಕ, ಡೀಲರ್ ಕಮೀಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟದ ಬೆಲೆ ದ್ವಿಗುಣಗೊಳ್ಳುತ್ತದೆ.

ರೂಪಾಯಿಗೆ ಯುಎಸ್ ಡಾಲರ್ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ಸೂಚನೆಗಳು, ಇಂಧನ ಬೇಡಿಕೆ ಇತ್ಯಾದಿಗಳಿಂದ ತೈಲ ಬೆಲೆಯಲ್ಲಿ ಏರಿಳಿತವಾಗುತ್ತದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಏರಿದಾಗ ಭಾರತದಲ್ಲಿ ಬೆಲೆಗಳು ಹೆಚ್ಚಾಗುತ್ತವೆ.

ಇದನ್ನೂ ಓದಿ: ಖಾಸಗೀಕರಣ ವಿರೋಧಿಸಿ ಎರಡು ದಿನಗಳ ಮುಷ್ಕರ: ದೇಶಾದ್ಯಂತ ಬ್ಯಾಂಕ್ ಸೇವೆಗಳು ಬಂದ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.