ETV Bharat / business

ಜನಧನ ಯೋಜನೆ ಸೂಪರ್ ಹಿಟ್​! 36.06 ಕೋಟಿ ಅಕೌಂಟ್‌ಗೆ ಬಂತು 1 ಲಕ್ಷ ಕೋಟಿ ದುಡ್ಡು

author img

By

Published : Jul 10, 2019, 6:04 PM IST

ದೇಶದ ಎಲ್ಲ ನಾಗರಿಕರಿಗೆ ಬ್ಯಾಂಕ್ ಖಾತೆ ಸೇವೆ ಒದಗಿಸಬೇಕು ಎಂಬ ಉದ್ದೇಶದಿಂದ 2014ರ ಆಗಸ್ಟ್​ 28ರಂದು ಪ್ರಧಾನಮಂತ್ರಿ ಜನ ಧನ ಯೋಜನೆ (ಪಿಎಂಜೆಡಿವೈ) ಜಾರಿಗೆ ತರಲಾಯಿತು.

ಸಾಂದರ್ಭಿಕ ಚಿತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಜನ ಧನ ಯೋಜನೆ (ಪಿಎಂಜೆಡಿವೈ) ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎನ್ನುವುದನ್ನು ಅಂಕಿಅಂಶಗಳು ತೋರಿಸುತ್ತಿವೆ.

ದೇಶದ ಎಲ್ಲ ನಾಗರಿಕರಿಗೆ ಬ್ಯಾಂಕ್ ಖಾತೆ ಸೇವೆ ಒದಗಿಸಬೇಕು ಎಂಬ ಉದ್ದೇಶದಿಂದ 2014ರ ಆಗಸ್ಟ್​ 28ರಂದು ಈ ಯೋಜನೆ ಜಾರಿಗೆ ತರಲಾಯಿತು.

ಕೇಂದ್ರ ಹಣಕಾಸು ಸಚಿವಾಲಯದ ಇತ್ತೀಚಿನ ದತ್ತಾಂಶದ ಪ್ರಕಾರ, ಪ್ರಧಾನ ಮಂತ್ರಿ ಜನ​ ಧನ​ ಯೋಜನೆಯಡಿ ಒಟ್ಟು 36.06 ಕೋಟಿ ಖಾತೆಗಳನ್ನು ತೆರೆಯಲಾಗಿದೆ. ಜುಲೈ 3ರವರೆಗೆ ಈ ಖಾತೆಗಳಿಗೆ ₹ 1,00,495.94 ಕೋಟಿ ಹಣ ಜಮೆಯಾಗಿದೆ.

ಕಳೆದ ಜೂನ್​ 6ರಂದು ₹ 99,649.84 ಕೋಟಿ ಹಣ ಖಾತೆಗಳಿಗೆ ಹರಿದು ಬಂದಿದ್ದರೆ, ಇದರ ಹಿಂದಿನ ವಾರಕ್ಕೂ ಮುಂಚೆ ₹ 99,232.71 ಕೋಟಿಯಷ್ಟಿತ್ತು. ಫಲಾನುಭವಿಗಳ ಸಂಖ್ಯೆ ಏರಿಕೆ ಆಗುತ್ತಿದ್ದಂತೆ ಹಣದ ಜಮಾವಣೆಯಲ್ಲೂ ಹೆಚ್ಚಳವಾಗುತ್ತಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.