ನವದೆಹಲಿ : ಪ್ಯಾಕ್ ಆಗದ ಸಿಹಿತಿಂಡಿಗಳಿಗೆ 'ಬೆಸ್ಟ್ ಬಿಫೋರ್' ಹಾಗೂ ಮ್ಯಾನುಫ್ಯಾಕ್ಚರಿಂಗ್ ಡೇಟ್ ಪ್ರದರ್ಶಿಸುವಂತೆ ಸಾಂಪ್ರಾದಾಯಕ ಸಿಹಿ ತಿನಿಸು ವರ್ತಕರಿಗೆ ನೀಡಿರುವ ಸಮಯವನ್ನು ಅಕ್ಟೋಬರ್ 1ರವರೆಗೆ ವಿಸ್ತರಿಸಲಾಗಿದೆ.
ಆಹಾರ ಪದಾರ್ಥಗಳ ಮೇಲೆ ಮುದ್ರಿಸಲಾಗುವ ಲೇಬಲ್‌ಗಳಲ್ಲಿ ಕೇವಲ ಎಕ್ಸ್ಪೈರಿ ಡೇಟ್ ಮಾತ್ರ ಹಾಕಬೇಕು. ಮ್ಯಾನುಫ್ಯಾಕ್ಚರಿಂಗ್ ಡೇಟ್ ಹಾಕದೆಯೇ 'ಬೆಸ್ಟ್ ಬಿಫೋರ್' ಎಂಬ ಪದವನ್ನು ಹಾಕಬಾರದು ಎಂದು ಈ ಹಿಂದೆ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದರು.
ಕಳೆದ ಫೆಬ್ರವರಿಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ಅಗಸ್ಟ್ 1ರೊಳಗಾಗಿ ಪ್ಯಾಕ್ ಆಗದ ಸಿಹಿತಿಂಡಿಗಳಿಗೆ 'ಬೆಸ್ಟ್ ಬಿಫೋರ್' ಹಾಗೂ ತಯಾರಿಕಾ ದಿನಾಂಕ ಪ್ರದರ್ಶಿಸುವಂತೆ ಸೂಚನೆ ನೀಡಿತ್ತು. ಆದರೆ, ಕೊರೊನಾ ಬಿಕ್ಕಟ್ಟು ಹಾಗೂ ಲಾಕ್ಡೌನ್ನಿಂದಾಗಿ ಇದು ಸಾಧ್ಯವಾಗದ ಕಾರಣ ಈ ಅವಧಿಯನ್ನು ಮುಂದೂಡಬೇಕೆಂದು ಸಿಹಿ ಪದಾರ್ಥಗಳ ವರ್ತಕರ ಒಕ್ಕೂಟವು ಎಫ್‌ಎಸ್‌ಎಸ್‌ಎಐಗೆ ಮನವಿ ಮಾಡಿತ್ತು. ಹೀಗಾಗಿ ಈ ಗಡುವಿನ ಕಾಲಾವಧಿಯನ್ನು ಪ್ರಾಧಿಕಾರ ಮತ್ತೆರೆಡು ತಿಂಗಳಿಗೆ ವಿಸ್ತರಿಸಿದೆ.