ನವದೆಹಲಿ: ವಿಶ್ವಾದ್ಯಂತ ಸುಮಾರು 2 ಮಿಲಿಯನ್ ಜನರನ್ನು ಬಲಿ ತೆಗೆದುಕೊಂಡ ಕೊರೊನಾ ವೈರಸ್ ಸೋಂಕಿನ ಭೀತಿ ಮತ್ತು ವಿಶೇಷ ಆಸ್ಪತ್ರೆಯ ತೀವ್ರ ನಿಗಾ ಘಟಕಗಳ ಚಿಕಿತ್ಸಾ ವೆಚ್ಚ, ಕಳೆದ ವರ್ಷದ ಏಪ್ರಿಲ್-ಸೆಪ್ಟೆಂಬರ್ನಲ್ಲಿ ಎರಡು ಮಿಲಿಯನ್ ಭಾರತೀಯರು 865 ಕೋಟಿ ರೂ. ಮೌಲ್ಯದಷ್ಟು ಕೊರೊನಾ ಕವಾಚ್ ಮತ್ತು ಕೊರೊನಾ ರಕ್ಷಕ್ ಪಾಲಿಸಿದ ಖರೀದಿಸಿದ್ದಾರೆ ಎಂದು ಆರ್ಬಿಐ ವರದಿ ತಿಳಿಸಿದೆ.
ಪಾಲಿಸಿಗೆ ಸರಾಸರಿ 3,600 ರೂ. ಖರ್ಚು ಆಗುತ್ತಿದ್ದು, 23.75 ಲಕ್ಷ ಕೋವಿಡ್ ವೈದ್ಯಕೀಯ ವಿಮಾ ಪಾಲಿಸಿಗಳು 1.1 ಕೋಟಿ ಭಾರತೀಯರನ್ನು ಒಳಗೊಂಡಿವೆ.
ಜಾಗತಿಕ ಸಾಂಕ್ರಾಮಿಕ ರೋಗವು ಹೇಗೆ ಹಬ್ಬುವುದು ಎಂಬ ಅನಿಶ್ಚಿತತೆಯ ಹಿನ್ನೆಲೆಯಲ್ಲಿ, ಭಾರತದ ವಿಮಾ ವಲಯ ನಿಯಂತ್ರಕ- ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ), ಕಳೆದ ವರ್ಷ ಸಾಮಾನ್ಯ ಮತ್ತು ಆರೋಗ್ಯ ವಿಮಾ ಕಂಪನಿಗಳು ಕೊರೊನಾ ವಿಮಾ ಉತ್ಪನ್ನ ಪ್ರಾರಂಭಿಸುವುದನ್ನು ಕಡ್ಡಾಯಗೊಳಿಸಿತ್ತು.
ಇದನ್ನೂ ಓದಿ: ಸದ್ದಿಲ್ಲದೆ HTC ಡಿಸೈರ್ 21 ಪ್ರೊ 5ಜಿ ಮೊಬೈಲ್ ಲಾಂಚ್: ದರ, ಫೀಚರ್ ಹೀಗಿವೆ...
ಸಾಂಕ್ರಾಮಿಕ ವೈರಸ್ ದೇಶದಲ್ಲಿ 10 ದಶಲಕ್ಷಕ್ಕೂ ಅಧಿಕ ಜನರಿಗೆ ತಗುಲಿ 1,51,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ.
ಕೋವಿಡ್ ಸಂಬಂಧಿತ ವೈದ್ಯಕೀಯ ವಿಮಾ ಉತ್ಪನ್ನಗಳ ಜೊತೆಗೆ ಕೊರೊನಾ ಕವಾಚ್ ಮತ್ತು ಕೊರೊನಾ ರಕ್ಷಕ್ ಪಾಲಿಸಿಗಳಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಕೊರೊನಾ ಕವಾಚ್ ಅತ್ಯಧಿಕ ಪ್ರಮಾಣದಲ್ಲಿ ಖರೀದಯಾಗಿದೆ.
2020ರ ಏಪ್ರಿಲ್-ಸೆಪ್ಟೆಂಬರ್ ನಡುವೆ ಗ್ರಾಹಕರಿಗೆ ಮಾರಾಟವಾದ 23.75 ಲಕ್ಷ ಕೋವಿಡ್ ಪಾಲಿಸಿಗಳ ಪೈಕಿ ಕೊರೊನಾ ಕವಾಚ್ 19.58 ಲಕ್ಷ (ಶೇ 82.43ರಷ್ಟು) ಪಾಲಿಸಿ ಹೊಂದಿದ್ದಾರೆ, ಕೊರೊನಾ ರಕ್ಷಕ್ 3.8 ಲಕ್ಷ (ಶೇ 16ರಷ್ಟು) ಮತ್ತು ಇತರ ಕೋವಿಡ್ ಪಾಲಿಸಿಗಳು ಸುಮಾರು 37,000 ಪಾಲಿಸಿ (ಶೇ 0.015ರಷ್ಟು) ಹೊಂದಿವೆ .
ಕರೋನಾ ಕವಾಚ್ ಆಸ್ಪತ್ರೆಗೆ ದಾಖಲು, ನಂತರದ ಆಸ್ಪತ್ರೆಗೆ ದಾಖಲು, ಮನೆ ಆರೈಕೆ ಚಿಕಿತ್ಸೆಯ ವೆಚ್ಚಗಳು ಮತ್ತು ಭಾರತದ ಆಯುಷ್ ಸಚಿವಾಲಯ ಶಿಫಾರಸು ಮಾಡಿದ ಚಿಕಿತ್ಸೆಯನ್ನು ಒಳಗೊಂಡಿದೆ. 1.1 ಕೋಟಿಗೂ ಅಧಿಕ ಭಾರತೀಯರು ಕೊರೊನಾ ವಿಮಾ ರಕ್ಷಣೆ ಪಡೆಯುತ್ತಿದ್ದಾರೆ.
ಈ ಪಾಲಿಸಿಗಳು 12.9 ಲಕ್ಷ ಕೋಟಿ ರೂ.ಗೆ 1.1 ಕೋಟಿ ಭಾರತೀಯರನ್ನು ಒಳಗೊಂಡಿವೆ. ಆದರೆ, ಹಿರಿಯ ನಾಗರಿಕರ ಸಂಖ್ಯೆ ದೇಶದ ಜನಸಂಖ್ಯೆಯಲ್ಲಿ ಅವರ ಪಾಲಿಗಿಂತ ಕಡಿಮೆಯಿದೆ.