ನವದೆಹಲಿ: ಜೂನ್ ತ್ರೈಮಾಸಿಕದ ನಿವ್ವಳ ಆದಾಯದಲ್ಲಿ ಶೇ 41.8ರಷ್ಟು ಅಂದರೆ 512 ಮಿಲಿಯನ್ ಡಾಲರ್ ಹೆಚ್ಚಳವಾಗಿರುವುದಾಗಿ (ಸುಮಾರು 3,801.7 ಕೋಟಿ ರೂ.) ಕಾಗ್ನಿಜೆಂಟ್ ವರದಿ ಮಾಡಿದೆ. ಈ ವರ್ಷ ಕಾಗ್ನಿಜೆಂಟ್ ಒಂದು ಲಕ್ಷಕ್ಕೂ ಅಧಿಕ ಜನರನ್ನು ನೇಮಕ ಮಾಡಿಕೊಳ್ಳುವ ನಿರೀಕ್ಷೆಯಿದೆ ಎಂದು ಕಂಪನಿ ಹೇಳಿದೆ.
ಜೂನ್ 2020ರ ತ್ರೈಮಾಸಿಕದಲ್ಲಿ ಯುಎಎಸ್ಡಿ 361 ಮಿಲಿಯನ್ ಯುಎಸ್ ಡಾಲರ್ ನಿವ್ವಳ ಆದಾಯವನ್ನು ದಾಖಲಿಸಿದ ಯುಎಸ್ ಮೂಲದ ಕಂಪನಿಯು 2021ನೇ ಆರ್ಥಿಕ ವರ್ಷದಲ್ಲಿ ಆದಾಯ ಬೆಳವಣಿಗೆಯ ಮಾರ್ಗದರ್ಶನವನ್ನು ಶೇಕಡಾ 10.2-11.2ಗೆ ಹೆಚ್ಚಿಸಿದೆ.
ಕಾಗ್ನಿಜೆಂಟ್‌ನ ಆದಾಯವು ಪ್ರಸ್ತುತ ತ್ರೈಮಾಸಿಕದಲ್ಲಿ ಶೇ 14.6ರಷ್ಟು ಅಂದರೆ 4.6 ಬಿಲಿಯನ್ ಡಾಲರ್‌ಗೆ ಏರಿದ್ದು, ಇದು ಹಿಂದಿನ ವರ್ಷದ 4 ಬಿಲಿಯನ್ ಡಾಲರ್‌ಗಳಿಂದ ಹೆಚ್ಚಿದೆ. ಕಾಗ್ನಿಜೆಂಟ್ ಭಾರತದಲ್ಲಿ ಸುಮಾರು 2 ಲಕ್ಷ ಉದ್ಯೋಗಿಗಳನ್ನು ಹೊಂದಿದೆ.
ಈ ವರ್ಷ ಸುಮಾರು ಒಂದು ಲಕ್ಷ ಲ್ಯಾಟರಲ್‌ಗಳನ್ನು ನೇಮಿಸಿಕೊಳ್ಳುವುದಾಗಿ ಮತ್ತು ಒಂದು ಲಕ್ಷ ಸಹವರ್ತಿಗಳಿಗೆ ತರಬೇತಿ ನೀಡುವುದಾಗಿ ಕಾಗ್ನಿಜೆಂಟ್ ಘೋಷಿಸಿದೆ. ಇದಲ್ಲದೆ, ಕಂಪನಿಯು 2021ರಲ್ಲಿ ಸುಮಾರು 30,000 ಹೊಸ ಪದವೀಧರರನ್ನು ನೇಮಕ ಮಾಡಲು ನಿರೀಕ್ಷಿಸುತ್ತಿದೆ ಮತ್ತು 2022ರಲ್ಲಿ ಭಾರತದಲ್ಲಿ ಹೊಸ ಪದವೀಧರರಿಗೆ 45,000 ಪೋಸ್ಟ್ ನೀಡಲಿದೆ.