ETV Bharat / business

ಭಾರತೀಯ ಸ್ಟಾರ್ಟ್​ಅಪ್​ಗಳಲ್ಲಿ ಚೀನಾದ ಹಣ ಹೂಡಿಕೆ 12 ಪಟ್ಟು ಏರಿಕೆ: ಗ್ಲೋಬಲ್ ಡೇಟಾ

author img

By

Published : Jun 26, 2020, 10:35 PM IST

ಕಳೆದ ನಾಲ್ಕು ವರ್ಷಗಳಲ್ಲಿ ಭಾರತೀಯ ಸ್ಟಾರ್ಟ್ ಅಪ್‌ಗಳಲ್ಲಿ ಚೀನಾದ ಹೂಡಿಕೆಯ 12 ಪಟ್ಟು ಬೆಳವಣಿಗೆ ಕಂಡಿದೆ. 2016ರಲ್ಲಿ 381 ಮಿಲಿಯನ್ ಡಾಲರ್‌ನಿಂದ 2019ಕ್ಕೆ 4.6 ಬಿಲಿಯನ್ ಡಾಲರ್‌ಗೆ ಬಂದು ತಲುಪಿದೆ.

ಸ್ಟಾರ್ಟ್​ಅಪ್​
startups

ನವದೆಹಲಿ: ಕಳೆದ ನಾಲ್ಕು ವರ್ಷಗಳಲ್ಲಿ ಭಾರತೀಯ ಸ್ಟಾರ್ಟ್ ಅಪ್‌ಗಳಲ್ಲಿ ಚೀನಾದ ಹೂಡಿಕೆಯ 12 ಪಟ್ಟು ಹೆಚ್ಚಳವಾಗಿದ್ದು, 2016ರಲ್ಲಿನ 381 ಮಿಲಿಯನ್ ಡಾಲರ್‌ ಇದ್ದದ್ದು 2019ಕ್ಕೆ 4.6 ಬಿಲಿಯನ್ ಡಾಲರ್‌ಗೆ ತಲುಪಿದೆ.

ಡೇಟಾ ಮತ್ತು ವಿಶ್ಲೇಷಣಾ ಸಂಸ್ಥೆ ಗ್ಲೋಬಲ್ ಡಾಟಾ ಪ್ರಕಾರ, ಕಾರ್ಪೊರೇಟ್‌ ಮತ್ತು ಚೀನಾ ಮೂಲದ ಹೂಡಿಕೆ ಸಂಸ್ಥೆಗಳ ಹಣದ ಹೂಡಿಕೆ ಹೆಚ್ಚಾಗುತ್ತಿದೆ.

ಭಾರತದಲ್ಲಿನ ಬಹುಪಾಲು ಯುನಿಕಾರ್ನ್‌ಗಳ 24ರ ಪೈಕಿ 17ರಲ್ಲಿ ಚೀನಾದ ಕಾರ್ಪೊರೇಟ್​ ಮತ್ತು ಹೂಡಿಕೆ ಸಂಸ್ಥೆಗಳು ಹಣ ತೊಡಗಿಸಿವೆ. ಇದರಲ್ಲಿ ಮುಖ್ಯವಾಗಿ ಅಲಿಬಾಬಾ ಮತ್ತು ಟೆನ್ಸೆಂಟ್ ಕಂಪನಿಗಳದ್ದು ಹೆಚ್ಚಿನ ಪಾಲಿದೆ ಎಂದು ಗ್ಲೋಬಲ್ ಡಾಟಾ ಹೇಳಿದೆ.

ಅಲಿಬಾಬಾ ಮತ್ತು ಅದರ ಅಂಗಸಂಸ್ಥೆ ಆಂಟ್ ಫೈನಾನ್ಷಿಯಲ್ ಮತ್ತು ಇತರ ನಾಲ್ಕು ಭಾರತೀಯ ಯುನಿಕಾರ್ನ್‌ಗಳಲ್ಲಿ (ಪೇಟಿಎಂ, ಸ್ನ್ಯಾಪ್‌ಡೀಲ್, ಬಿಗ್‌ಬಾಸ್ಕೆಟ್ ಮತ್ತು ಜೊಮ್ಯಾಟೊ) 2.6 ಶತಕೋಟಿ ಡಾಲರ್‌ಗಳಷ್ಟು ಹೂಡಿಕೆ ಮಾಡಿದೆ. ಟೆನ್ಸೆಂಟ್ ಇತರರೊಂದಿಗೆ 5 ಯುನಿಕಾರ್ನ್‌ಗಳಲ್ಲಿ (ಓಲಾ, ಸ್ವಿಗ್ಗಿ, ಹೈಕ್, ಡ್ರೀಮ್ 11 ಮತ್ತು ಬೈಜುಸ್​) 2.4 ಬಿಲಿಯನ್ ಡಾಲರ್‌ಗಿಂತ ಅಧಿಕೆ ಹೂಡಿಕೆ ಮಾಡಿದೆ.

ಮೀಟೂನ್-ಡಯಾನ್ಪಿಂಗ್, ದೀದಿ ಚುಕ್ಸಿಂಗ್, ಫೋಸುನ್, ಶುನ್ವೇ ಕ್ಯಾಪಿಟಲ್, ಹಿಲ್​ಹೌಸ್ ಕ್ಯಾಪಿಟಲ್ ಗ್ರೂಪ್, ಚೀನಾ ಲಾಡ್ಜಿಂಗ್ ಗ್ರೂಪ್ ಮತ್ತು ಚೀನಾ- ಯುರೇಷಿಯಾ ಕೋ ಆಪರೇಷನ್​ ಫಂಡ್​ಗಳಲ್ಲಿ ಚೀನಾ ಮೂಲದ ಹೂಡಿಕೆ ಹಣ ಹರಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.