ನವದೆಹಲಿ: ಜೆಟ್ ಇಂಧನ ಅಥವಾ ಎಟಿಎಫ್ ಬೆಲೆಯನ್ನು ಶೇಕಡಾ 3ರಷ್ಟು ಹೆಚ್ಚಿಸಲಾಗಿದ್ದು, ಎರಡು ತಿಂಗಳಲ್ಲಿ ಐದನೇ ಬಾರಿ ಇದು ಏರಿಕೆಯಾಗಿದೆ. ಆದರೆ ಅಡುಗೆ ಅನಿಲ ಎಲ್‌ಪಿಜಿ, ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ.
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಬೆಲೆ ಅಧಿಸೂಚನೆಯಲ್ಲಿ, ಏವಿಯೇಷನ್ ಟರ್ಬೈನ್ ಇಂಧನ (ಎಟಿಎಫ್) ದರಗಳು ಪ್ರತಿ ಲೀಟರ್ಗೆ 1,304.25 ರೂ. ಅಂದರೆ 3 ಶೇಕಡಾ ಏರಿಕೆಯಾಗಿದೆ ಎಂದು ತಿಳಿಸಲಾಗಿದೆ.
ಜುಲೈ 16ರಂದು ಎಟಿಎಫ್ ಬೆಲೆಯನ್ನು ಶೇಕಡಾ 1.5 ಅಥವಾ ಪ್ರತಿ ಲೀಟರ್ಗೆ 635.47 ರೂ.ಗೆ ಏರಿಸಲಾಗಿತ್ತು. ಅದರ ಬಳಿಕ ಇದು ಐದನೇ ಹೆಚ್ಚಳವಾಗಿದೆ.
ನಾಲ್ಕು ಹೆಚ್ಚಳಗಳಲ್ಲಿ ದರಗಳು ಪ್ರತಿ ಲೀಟರ್ಗೆ 22,483.91 ರೂ. ಅಥವಾ ಶೇಕಡಾ 56.6ರಷ್ಟು ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ.