ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗ ಎದುರಿಸಲು ಭಾರತಕ್ಕೆ 1.5 ಬಿಲಿಯನ್ ಡಾಲರ್ (11,186 ಕೋಟಿ ರೂ.) ಅನುದಾನ ಒದಗಿಸಲಾಗಿದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ತಿಳಿಸಿದೆ.
ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು 26 ದೇಶಗಳಿಗೆ ಆರ್ಥಿಕ ನೆರವು ನೀಡಲು ಸಂಸ್ಥೆ 2020ರ ಏಪ್ರಿಲ್‌ನಲ್ಲಿ 20 ಬಿಲಿಯನ್ ಡಾಲರ್ ಪ್ಯಾಕೇಜ್ ಘೋಷಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
2020ರಲ್ಲಿ ಎಡಿಬಿಯ 16.1 ಬಿಲಿಯನ್ ಸಾಂಕ್ರಾಮಿಕಕ್ಕೆ ಪ್ರಕ್ರಿಯೆಯಾಗಿ 2020ರ ಏಪ್ರಿಲ್‌ನಲ್ಲಿ ಘೋಷಿಸಿದ 20 ಬಿಲಿಯನ್ ಡಾಲರ್ ಪ್ಯಾಕೇಜ್ ಮೂಲಕ ವಿವಿಧ ಹಂತಗಳಲ್ಲಿ ಒದಗಿಸಲಾಯಿತು. ಕೋವಿಡ್ -19 ಸಾಂಕ್ರಾಮಿಕ ಪ್ರತಿಕ್ರಿಯೆ ಆಯ್ಕೆಯ ಮೂಲಕ 26 ದೇಶಗಳಿಗೆ ತ್ವರಿತವಾಗಿ ಹಣಕಾಸಿನ ಬೆಂಬಲ ಒದಗಿಸಿದೆ. ವರ್ಷದ ಅಂತ್ಯದ ವೇಳೆಗೆ ಭಾರತಕ್ಕೆ 1.5 ಬಿಲಿಯನ್ ಡಾಲರ್ ಸಹ ಒಳಗೊಂಡಿದೆ ಎಂದು ಹೇಳಿದೆ.
16.1 ಬಿಲಿಯನ್ ಡಾಲರ್ಗಳಲ್ಲಿ 2.9 ಬಿಲಿಯನ್ ಡಾಲರ್ ಖಾಸಗಿ ವಲಯಕ್ಕೆ ನೀಡಿದೆ. ಇದರಲ್ಲಿ ಕಂಪನಿಗಳಿಗೆ ನೇರ ಬೆಂಬಲ ಮತ್ತು ಹಣಕಾಸು ಮೂಲಕ ವ್ಯಾಪಾರ ಜಾಲಗಳು ಕಾರ್ಯನಿರ್ವಹಿಸಲು ವ್ಯಾಪಾರ ಮತ್ತು ಪೂರೈಕೆ ಸರಪಳಿ ವೃದ್ಧಿಸಿಕೊಳ್ಳಲು ನೀಡಿದೆ.
ಏಷ್ಯಾ ಮತ್ತು ಪೆಸಿಫಿಕ್ ವ್ಯಾಪ್ತಿಯಲ್ಲಿ ಕೋವಿಡ್ ನಿಭಾಯಿಸಲು 2020ರಲ್ಲಿ ಎಡಿಬಿ 31.6 ಬಿಲಿಯನ್ ಡಾಲರ್ ಕೊಟ್ಟಿದೆ. ಸಾಂಕ್ರಾಮಿಕದಿಂದ ಸುಸ್ಥಿರ ಚೇತರಿಕೆಗೆ ಬೆಂಬಲ ಮತ್ತು ದೀರ್ಘಕಾಲೀನ ಅಭಿವೃದ್ಧಿ ಸವಾಲುಗಳನ್ನು ಪರಿಹರಿಸಿಕೊಳ್ಳಲು ಈ ಹಣ ಬಳಸಿಕೊಳ್ಳಬೇಕಿದೆ.