ಮುಂಬೈ: ಕೋವಿಡ್ -19 ಎರಡನೇ ಅಲೆ ಮತ್ತು ಅದು ತಂದ್ದೊಡಿದ ಪರಿಣಾಮವಾಗಿ ಸ್ಥಳೀಯ ಲಾಕ್‌ಡೌನ್‌ಗಳು 75 ಲಕ್ಷ ಉದ್ಯೋಗಗಳ ಮೇಲೆ ಪರಿಣಾಮ ಬೀರಿವೆ. ನಿರುದ್ಯೋಗ ದರವನ್ನು ನಾಲ್ಕು ತಿಂಗಳ ಗರಿಷ್ಠ ಶೇ 8ಕ್ಕೆ ತಲುಪಿದೆ ಎಂದು ಕೇಂದ್ರದ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ತಿಳಿಸಿದೆ.
ಭವಿಷ್ಯದಲ್ಲಿ ಉದ್ಯೋಗ ಪರಿಸ್ಥಿತಿಯು ಮುಂದುವರಿಸುವುದು ಸವಾಲಾಗಿರಲಿದೆ. ಏಪ್ರಿಲ್ ತಿಂಗಳನ್ನು ಮಾರ್ಚ್ಗೆ ಹೋಲಿಸಿದರೆ, 75 ಲಕ್ಷ ಉದ್ಯೋಗಗಳಿ ಕೆಲಸ ಕಳೆದುಕೊಂಡಿದ್ದಾರೆ. ಇದು ನಿರುದ್ಯೋಗ ದರದಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಸಿಎಂಐಇ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಮಹೇಶ್ ವ್ಯಾಸ್ ಸುದ್ದಿ ಏಜೆನ್ಸಿಗೆ ತಿಳಿಸಿದ್ದಾರೆ.
ಕೇಂದ್ರದ ಸಿಎಂಐಇ ಸ್ವಾಮ್ಯದ ಮಾಹಿತಿಯ ಪ್ರಕಾರ ರಾಷ್ಟ್ರೀಯ ನಿರುದ್ಯೋಗ ದರವು ಶೇ 7.97ಕ್ಕೆ ತಲುಪಿದೆ. ನಗರ ಪ್ರದೇಶಗಳು ಹೆಚ್ಚಿನ ಒತ್ತಡದ ಶೇ 9.78ರಷ್ಟು ಮತ್ತು ಗ್ರಾಮೀಣ ನಿರುದ್ಯೋಗವು ಶೇ 7.13ಕ್ಕೆ ತಲುಪಿದೆ. ಮಾರ್ಚ್ನಲ್ಲಿ ರಾಷ್ಟ್ರೀಯ ನಿರುದ್ಯೋಗ ದರವು ಶೇ 6.50ರಷ್ಟಿತ್ತು. ಗ್ರಾಮೀಣ ಮತ್ತು ನಗರ ಕ್ಷೇತ್ರಗಳ ಸಂಖ್ಯೆ ಕೂಡ ಕಡಿಮೆ ಆಗಿತ್ತು.
ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೆಯ ಅಲೆಯ ಭಾಗಶಃ ಲಾಕ್‌ಡೌನ್ ಕೇವಲ ಅಗತ್ಯ ಚಟುವಟಿಕೆಗಳನ್ನು ಮಾತ್ರ ಅನುಮತಿಸಿದೆ. ಇದರ ಪರಿಣಾಮವಾಗಿ ಹೆಚ್ಚಿನ ಆರ್ಥಿಕ ಚಟುವಟಿಕೆಗಳಿಗೆ ಸ್ತಬ್ಧವಾಗಿವೆ. ಅದು ಉದ್ಯೋಗಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಕೋವಿಡ್ ಅಲೆ ಉತ್ತುಂಗದ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಉದ್ಯೋಗದದಲ್ಲಿ ಒತ್ತಡ ಕಾಣಬಹುದು ಎಂದು ವ್ಯಾಸ್ ಹೇಳಿದರು.