ETV Bharat / business

ವೃತ್ತಿಪರತೆ, ಸ್ಪರ್ಧೆ ತರಲು ಸರ್ಕಾರಿ ಕಂಪನಿಗಳ ಖಾಸಗೀಕರಣ : ಪ್ರಧಾನ್ ಸ್ಪಷ್ಟನೆ - ವೆನ್​ನಾರ್ ಸೀರಿಸ್​ನಲ್ಲಿ ಪ್ರಧಾನ್ ಭಾಷಣ

ವೃತ್ತಿಪರತೆ ಮತ್ತು ಸ್ಪರ್ಧೆ ತರುವ ಉದ್ದೇಶದಿಂದ ಸರ್ಕಾರಿ ಸ್ವಾಮ್ಯದ ಕೆಲವು ಕಂಪನಿಗಳನ್ನು ಖಾಸಗೀಕರಣಗೊಳಿಸಲು ಸರ್ಕಾರ ಎದುರು ನೋಡುತ್ತಿದೆ. ನಾನು ಮೊದಲೇ ಹೇಳಿದಂತೆ ಕೆಲವು ಸರ್ಕಾರಿ ಸ್ವಾಮ್ಯದ ಕಂಪನಿಗಳಿಂದ ತನ್ನ ಪಾಲನ್ನು ತಗ್ಗಿಸಲು ಸರ್ಕಾರ ಬದ್ಧವಾಗಿದೆ..

Dharmendra Pradhan
ಧರ್ಮೇಂದ್ರ ಪ್ರಧಾನ್
author img

By

Published : Dec 2, 2020, 3:39 PM IST

ನವದೆಹಲಿ : ಸರ್ಕಾರಿ ಸ್ವಾಮ್ಯದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್​ (ಬಿಪಿಸಿಎಲ್​) ಕಂಪನಿ ಷೇರು ಖರೀದಿ ಬಿಡ್ ಆಹ್ವಾನಕ್ಕೆ ಮೂರು ಕಂಪನಿಗಳು ಮುಂದೆ ಬಂದಿವೆ ಎಂದು ಇಂಧನ ಸಚಿವ ಧರ್ಮೇಂದ್ರ ಪ್ರಧಾನ್​ ತಿಳಿಸಿದ್ದಾರೆ.

ಭಾರತದ ಎರಡನೇ ಅತಿದೊಡ್ಡ ಇಂಧನ ಚಿಲ್ಲರೆ ವ್ಯಾಪಾರಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್​ನಲ್ಲಿನ ತನ್ನ ಪಾಲು ನಿಯಂತ್ರಿಸುವ ಸರ್ಕಾರದ ಯೋಜನೆಗೆ ಸ್ಪಂದಿಸಿ, ಮೂರು ಕಂಪನಿಗಳು ಪ್ರಾಥಮಿಕ ಬಿಡ್​ ಆಹ್ವಾನಕ್ಕೆ ಮುಂದೆ ಬಂದಿವೆ ಎಂದರು.

ಗಣಿಗಾರಿಕೆಯಿಂದ ತೈಲ ಸಂಘ ಸಂಸ್ಥೆಯಾದ ವೇದಾಂತ ನವೆಂಬರ್ 18ರಂದು ಬಿಪಿಸಿಎಲ್‌ನಲ್ಲಿ ಸರ್ಕಾರದ ಶೇ.52.98ರಷ್ಟು ಪಾಲು ಖರೀದಿಗೆ ಆಸಕ್ತಿಯ ಅಭಿವ್ಯಕ್ತಿ (ಇಒಐ) ನೀಡಿರುವುದಾಗಿ ದೃಢಪಡಿಸಿತ್ತು. ಇತರ ಇಬ್ಬರು ಬಿಡ್​ದಾರರು ಜಾಗತಿಕ ಹೂಡಿಕೆದಾರರಾಗಿದ್ದು, ಅವುಗಳಲ್ಲಿ ಒಂದು ಅಪೋಲೊ ಗ್ಲೋಬಲ್ ಮ್ಯಾನೇಜ್‌ಮೆಂಟ್ ಕೂಡ ಇದೆ.

2010ರ ವಿತ್ತೀಯ ವರ್ಷದ ಬಳಿಕ ಮಾರುಕಟ್ಟೆ ಕ್ಯಾಪ್​-ಟು- ಜಿಡಿಪಿ ಅನುಪಾತ ಅತ್ಯಧಿಕ

ಸ್ವರಾಜ್ಯ ಮ್ಯಾಗಜೀನ್ ಆಯೋಜಿಸಿದ್ದ 'ದಿ ರೋಡ್ ಟು ಆತ್ಮನಿರ್ಭಾರ ಭಾರತ'ನ ವೆಬ್​ನಾರ್ ಕಾರ್ಯಕ್ರಮದಲ್ಲ ಮಾತನಾಡಿದ ಪ್ರಧಾನ್, ಬಿಪಿಸಿಎಲ್​ ಖರೀದಿಗೆ 'ಸಾಕಷ್ಟು ಆಸಕ್ತಿ ಕಂಡು ಬಂದಿದೆ. ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆ (ಡಿಪ್ಯಾಮ್​) ಇತ್ತೀಚೆಗೆ ಮಾರುಕಟ್ಟೆಗೆ ಮಾಹಿತಿ ನೀಡಿದೆ. ಬಿಡ್ಡಿಂಗ್ ಪ್ರಕ್ರಿಯೆಗೆ ಮೂರು ಉದ್ಯಮಗಳು ಇಒಐ ನೀಡಿವೆ ಎಂಬುದನ್ನು ನಾನು ಭಾವಿಸುತ್ತೇನೆ ಎಂದರು. ಆದರೆ, ಯಾವುದೇ ವಿವರಗಳನ್ನು ಅವರು ನೀಡಲಿಲ್ಲ.

ವೃತ್ತಿಪರತೆ ಮತ್ತು ಸ್ಪರ್ಧೆ ತರುವ ಉದ್ದೇಶದಿಂದ ಸರ್ಕಾರಿ ಸ್ವಾಮ್ಯದ ಕೆಲವು ಕಂಪನಿಗಳನ್ನು ಖಾಸಗೀಕರಣಗೊಳಿಸಲು ಸರ್ಕಾರ ಎದುರು ನೋಡುತ್ತಿದೆ. ನಾನು ಮೊದಲೇ ಹೇಳಿದಂತೆ ಕೆಲವು ಸರ್ಕಾರಿ ಸ್ವಾಮ್ಯದ ಕಂಪನಿಗಳಿಂದ ತನ್ನ ಪಾಲನ್ನು ತಗ್ಗಿಸಲು ಸರ್ಕಾರ ಬದ್ಧವಾಗಿದೆ. ಇದರಿಂದ ಹೆಚ್ಚಿನ ವೃತ್ತಿಪರತೆ ಮತ್ತು ಸ್ಪರ್ಧೆ ಬರುತ್ತದೆ. ನಾವು ಆ ವಿಷಯಕ್ಕೆ ಬದ್ಧರಾಗಿದ್ದೇವೆ ಮತ್ತು ಉತ್ಸುಕರಾಗಿದ್ದೇವೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.