ಸೂರ್ಯಪೇಟೆ: ಸೂರ್ಯಪೇಟೆ ಜಿಲ್ಲೆಯಲ್ಲಿ ಇಂದು ಹದಿಮೂರು ಕೋಟಿ ರೂಪಾಯಿ ಮೌಲ್ಯದ ನಕಲಿ ಮೆಣಸಿನಕಾಯಿ ಬೀಜಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಬೀಜಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೈದರಾಬಾದ್‌ನ ವನಸ್ಥಲಿಪುರಂನಲ್ಲಿ ಶಿವರೆಡ್ಡಿ ಎಂಬ ವ್ಯಕ್ತಿ ದ್ವಾರಕಾ ಸೀಡ್ಸ್ ಹೆಸರಿನಲ್ಲಿ 15 ಬಗೆಯ ನಕಲಿ ಬೀಜಗಳನ್ನು ತಯಾರಿಸುತ್ತಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಓದಿ: ಇಂಟರ್ನೆಟ್ ವ್ಯವಸ್ಥೆ ಇಲ್ಲದವರಿಗೂ ಜೀವಿಸುವ ಹಕ್ಕಿದೆ, ಎಲ್ಲರಿಗೂ ಲಸಿಕೆ ನೀಡಿ: ರಾಹುಲ್ ಗಾಂಧಿ
ಸೂರ್ಯಪೇಟೆ ಜಿಲ್ಲೆಯ ಚಿಂತಲಪಲೆಂನಲ್ಲಿ ನಿನ್ನೆ ಪೊಲೀಸರು ನಕಲಿ ಬೀಜಗಳನ್ನು ಪತ್ತೆ ಮಾಡಿದ್ದರು. ತನಿಖೆಯ ನಂತರ ಹಲವು ಸ್ಥಳಗಳು ನಕಲಿ ಬೀಜಗಳನ್ನು ಮಾರಾಟ ಮಾಡಲು ವಿತರಕರನ್ನು ನೇಮಿಸಿಕೊಳ್ಳುತ್ತಿವೆ ಎಂದು ತಿಳಿದುಬಂದಿದೆ. ದ್ವಾರಕಾ ಸೀಡ್ಸ್ ಅಕೌಂಟೆಂಟ್ ಯಾದಗಿರಿ ಮತ್ತು ಪ್ರಾದೇಶಿಕ ವ್ಯವಸ್ಥಾಪಕ ಲಕ್ಷ್ಮಾರೆಡ್ಡಿ ಮತ್ತು ನಕಲಿ ಬೀಜಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದು, ಓರ್ವ ತಲೆ ಮರೆಸಿಕೊಂಡಿದ್ದಾನೆ.