ETV Bharat / briefs

ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿಯಾಗಲು ಚಿಂತಿಸಿದ ಯುವಿ​​​... ಕಾರಣವೇನು​ ಗೊತ್ತಾ? - ಯುವರಾಜ್​ ಸಿಂಗ್

ಒಂದುಕಡೆ ರಾಷ್ಟ್ರೀಯ ತಂಡದಲ್ಲೂ ಅವಕಾಶವಿಲ್ಲ, ಇದೀಗ ಐಪಿಎಲ್​ನಲ್ಲೂ ಅವಕಾಶ ವಂಚಿತರಾಗಿರುವ ಯುವಿ ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿ ಐಸಿಸಿಯಿಂದ ಮಾನ್ಯತೆ ಪಡೆದಿರುವ ಟಿ-20 ಲೀಗ್​ಗಳಲ್ಲಿ ಪಾಲ್ಗೊಳ್ಳಲು ಚಿಂತನೆ ನಡೆಸಿದ್ದಾರೆ.

yuvi
author img

By

Published : May 20, 2019, 10:36 AM IST

ಮುಂಬೈ: ಈಗಾಗಲೇ ರಾಷ್ಟ್ರೀಯ ತಂಡದಿಂದ ಅವಕಾಶ ವಂಚಿತರಾಗಿರುವ ಭಾರತದ ಶ್ರೇಷ್ಠ ಆಲ್​ರೌಂಡರ್​ಗಳಲ್ಲಿ ಒಬ್ಬರಾದ ಯುವರಾಜ್​ ಸಿಂಗ್​ ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿಯಾಗಲು ಆಲೋಚಿಸುತ್ತಿದ್ದಾರೆ.

ಒಂದು ಕಡೆ ರಾಷ್ಟ್ರೀಯ ತಂಡದಲ್ಲೂ ಅವಕಾಶವಿಲ್ಲ, ಇದೀಗ ಐಪಿಎಲ್​ನಲ್ಲೂ ಅವಕಾಶ ವಂಚಿತರಾಗಿರುವ ಯುವಿ ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿ ಐಸಿಸಿಯಿಂದ ಮಾನ್ಯತೆ ಪಡೆದಿರುವ ಟಿ-20 ಲೀಗ್​ಗಳಲ್ಲಿ ಪಾಲ್ಗೊಳ್ಳಲು ಚಿಂತನೆ ನಡೆಸಿದ್ದಾರೆ.

ಬಿಸಿಸಿಐ ನಿಯಮದ ಪ್ರಕಾರ ದೇಶಿ ಅಥವಾ ರಾಷ್ಟ್ರೀಯ ತಂಡದಲ್ಲಿ ಸಕ್ರಿಯವಾಗಿರುವ ಆಟಗಾರ ವಿದೇಶಿ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ. ಆದ್ದರಿಂದ ಪ್ರಥಮ ದರ್ಜೆ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಪಡೆದು, ವಿದೇಶಿ ಟಿ-20 ಲೀಗ್​ಗಳಲ್ಲಿ ತಮ್ಮ ಕ್ರಿಕೆಟ್​ ಜೀವನದ 2ನೇ ಇನ್ನಿಂಗ್ಸ್​​ ಆರಂಭಿಸಲು ನಿರ್ಧರಿಸಿದ್ದಾರೆ.

ಯುವರಾಜ್​ ಸಿಂಗ್​ಗೆ ಗ್ಲೋಬಲ್​ ಟಿ-20 ಲೀಗ್​ ಹಾಗೂ ಡಬ್ಲಿನ್​ ಮತ್ತು ಅಮ್​ಸ್ಟೆಲ್ವಿನ್​ ಲೀಗ್​ಗಳಿಂದ ಕ್ರಿಕೆಟ್​ ಆಡಲು ಆಫರ್ ಬಂದಿರುದರಿಂದ ಅನುಮತಿಗಾಗಿ ಬಿಸಿಸಿಐಗೆ ನಿವೃತ್ತಿಯ ಬೇಡಿಕೆ ಇಟ್ಟಿದ್ದಾರೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.

ಒಂದು ವೇಳೆ ಯುವರಾಜ್​ ಸಿಂಗ್​ ನಿವೃತ್ತಿ ಘೋಷಿಸಿದರೆ ವಿಶ್ವದ ಪ್ರಸಿದ್ಧ ಟಿ-20 ಲೀಗ್​ಗಳಾದ ಸಿಪಿಎಲ್​, ಬಿಗ್​ಬ್ಯಾಷ್​, ಟಿ-20 ಬ್ಲಾಸ್ಟ್​ನಂತಹ ಲೀಗ್​ಗಳಲ್ಲಿ ಪಾಲ್ಗೊಳ್ಳಬಹುದಾಗಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.